ಬಂಡೀಪುರದಲ್ಲಿ ಹೆಣ್ಣು ಹುಲಿಯ ಸಾವು ಅಸ್ವಾಭಾವಿಕ: ಕೇರಳ-ಕರ್ನಾಟಕ ಸರ್ಕಾರದಿಂದ ತನಿಖೆ

ಕೇರಳದ ವಯನಾಡ್ ವನ್ಯಜೀವಿ ಅಭಯಾರಣ್ಯದಲ್ಲಾದ ಹುಲಿಯ ಸಾವು ಸ್ವಾಭಾವಿಕವಲ್ಲ ಎಂದು ಬಂಡೀಪುರ ಹುಲಿ ಮೀಸಲು ಪ್ರದೇಶದ ಕ್ಯಾಮೆರಾಗಳ ಚಿತ್ರಗಳಿಂದ ಬಹಿರಂಗವಾಗಿದೆ. 
ಸತ್ತ ಹುಲಿ ದೇಹ
ಸತ್ತ ಹುಲಿ ದೇಹ

ಹುಬ್ಬಳ್ಳಿ: ಕೇರಳದ ವಯನಾಡ್ ವನ್ಯಜೀವಿ ಅಭಯಾರಣ್ಯದಲ್ಲಾದ ಹುಲಿಯ ಸಾವು ಸ್ವಾಭಾವಿಕವಲ್ಲ ಎಂದು ಬಂಡೀಪುರ ಹುಲಿ ಮೀಸಲು ಪ್ರದೇಶದ ಕ್ಯಾಮೆರಾಗಳ ಚಿತ್ರಗಳಿಂದ ಬಹಿರಂಗವಾಗಿದೆ. 

5-6 ವರ್ಷ ವಯಸ್ಸಿನ  ಹುಲಿ ಸಾವನ್ನಪ್ಪಿರುವುದು ಫೋಟೋಗಳಲ್ಲಿ ಸೆರೆಯಾಗಿದೆ.  ಕಿಡಿಗೇಡಿಗಳ ಬಲೆಗೆ ಬಿದ್ದಿದ್ದ ಹುಲಿಗೆ ನಂತರ ಉಂಟಾದ ಸೋಂಕಿನಿಂದಾಗಿ  ಹುಲಿ ಸಾವನ್ನಪ್ಪಿದೆ , ಏಪ್ರಿಲ್ 13 ರಂದು ಅರ್ದದಷ್ಟು ಕೊಳೆತು ಹೋದ ಸ್ಥಿತಿಯಲ್ಲಿ ಹುಲಿಯ ಶವ ಕೇರಳದ ವಯನಾಡ್ ಅಭಯಾರಣ್ಯದ ಕುರ್ಚಿಯಾಟ್ ವಲಯದಲ್ಲಿ ಸಿಕ್ಕಿತ್ತು.

ಹುಲಿಯ ದೇಹದ ಮೇಲೆ ಯಾವುದೇ ಗಾಯಗಳಿರಲಿಲ್ಲ, ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ವಾಭಾವಿಕ ಸಾವು ದಾಖಲಿಸಿದ್ದರು, ಆದರೆ ಅರಣ್ಯದ ಕ್ಯಾಮೆರಾದಲ್ಲಿ ಸೆರೆಯಾದ ಫೋಟೋಗಳನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಹುಲಿಯ ಸಾವು ಸ್ವಾಭಾವಿಕವಲ್ಲ ಎಂಬುದು ಬೆಳಕಿಗೆ  ಬಂದಿದೆ.

2019ರ ಡಿಸೆಂಬರ್ ನಿಂದ ಮಾರ್ಚ್ 2020 ವರೆಗೆ ಈ ಹುಲಿ ಸಂಚರಿಸಿರುವುದು ಬಂಡೀಪುರ ಅಭಯಾರಣ್ಯದ ಎನ್ ಬೇಗೂರು ಮತ್ತು ಗುಂಡೆ ಅರಣ್ಯ ಪ್ರದೇಶದ ಕ್ಯಾಮೆರಾದಲ್ಲಿ ಪತ್ತೆಯಾಗಿದೆ.

ಮಾರ್ಚ್ 2020 ಮೊದಲ ವಾರದಲ್ಲೆ ಸೆರೆಯಾಗಿರುವ ಫೋಟೋದಲ್ಲಿ ಹುಲಿಗೆ ಕತ್ತಿನ ಭಾಗದಲ್ಲಿ ಗಾಯದಿಂದ ಸೋಂಕು ಉಂಟಾಗಿರುವುದು ಕಂಡು ಬಂದಿದೆ.

ಕಿಡಿಗೇಡಿಗಳು ಅದನ್ನು ಬೇಟೆಯಾಡಲು ಹಾಕಿದ್ದ ಉರುಳಿನಿಂದ ಅದರ ಕುತ್ತಿಗೆ ಭಾಗದಲ್ಲಿ ಗಾಯವಾಗಿದೆ ಎಂದು ಹಿರಿಯ ಅರಣ್ಯ ಅದಿಕಾರಿಯೊಬ್ಬರು ತಿಳಿಸಿದ್ದಾರೆ. ಹೀಗಾಗಿ ಕರ್ನಾಟಕ ಮತ್ತು ಕೇರಳ ಸರ್ಕಾರ ತನಿಖೆಗೆ ಆದೇಶಿಸಿವೆ. ಈಗಾಗಲೇ ಎಫ್ ಐ ಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ಕೇರಳ ಸರ್ಕಾರ ಕರ್ನಾಟಕಕ್ಕೂ ತನಿಖೆ ನಡೆಸುವಂತೆ ಸೂಚಿಸಿದೆ,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com