ಕೊವಿಡ್-19: ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರು/ಸಾಹಿತಿಗಳಿಗೆ ಆರ್ಥಿಕ ಧನಸಹಾಯಕ್ಕಾಗಿ ಅರ್ಜಿ ಆಹ್ವಾನ

ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸಾಹಿತಿಗಳು, ಜಾನಪದ, ಲಲಿತಾಕಲಾ, ಸಂಗೀತ ನೃತ್ಯ ಅಕಾಡೆಮಿ, ಶಿಲ್ಪ ಕಲಾ ಅಕಾಡೆಮಿಗಳಿಂದ ಧನ ಸಹಾಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಇದೇ 27ರ ಒಳಗಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸಾಹಿತಿಗಳು, ಜಾನಪದ, ಲಲಿತಾಕಲಾ, ಸಂಗೀತ ನೃತ್ಯ ಅಕಾಡೆಮಿ, ಶಿಲ್ಪ ಕಲಾ ಅಕಾಡೆಮಿಗಳಿಂದ ಧನ ಸಹಾಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಇದೇ 27ರ ಒಳಗಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಆರ್ಥಿಕ ಸಂಕಷ್ಟದಲ್ಲಿರುವ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ನೃತ್ಯ, ಸುಗಮ ಸಂಗೀತ, ಕಥಾ ಕೀರ್ತನ ಮತ್ತು ಗಮಕ ಕಲಾ ಪ್ರಕಾರದ ಕಲಾವಿದರಿಗೆ ಆರ್ಥಿಕ ನೆರವು ನೀಡುತ್ತಿದ್ದು, ಕಲಾವಿದರು ತಮ್ಮ ಹೆಸರು ವಿಳಾಸ, ಕಲಾಪ್ರಕಾರ, ಆಧಾರ ಸಂಖ್ಯೆ ದೂರವಾಣಿ ಸಂಖ್ಯೆ ಮತ್ತು ಬ್ಯಾಂಕ್ ಹೆಸರು ವಿಳಾಸ ಖಾತೆ ಸಂಖ್ಯೆ ಇವರಗಳ ಜೆರಾಕ್ಸ್ ಪ್ರತಿ ಹಾಗೂ ಅರ್ಜಿಯನ್ನು ಅಗತ್ಯ ದಾಖಲೆಯೊಂದಿಗೆ karnatakasangeeta@gmail.comಗೆ ಮತ್ತು whatsapp7975949840 ನಂಬರ್ ಗೆ ಏಪ್ರಿಲ್ 27 ರ ಒಳಗಾಗಿ ಸಲ್ಲಿಸಲು ತಿಳಿಸಲಾಗಿದೆ. 

ಹೆಚ್ಚಿನ ಮಾಹಿತಿಗೆ ದೂರವಾಣಿ 080-22215072 ನ್ನು ಸಂಪರ್ಕಿಸಬಹುದು. 

ಬಡ ಜಾನಪದ ಕಲಾವಿದರು, ಸಾಹಿತಿಗಳಿಂದ ಆರ್ಥಿಕ ಸಹಾಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ email. registrar.janapada@gmail.com ಸಂಪರ್ಕಿಸುವಂತೆ ಸೂಚಿಸಲಾಗಿದೆ. 

ಕರ್ನಾಟಕ ಲಲಿತ ಕಲಾ ಅಕಾಡೆಮಿಯಿಂದ ನೀಡುತ್ತಿರುವ ಆರ್ಥಿಕ ಸಹಾಯಕ್ಕಾಗಿ ಅಸಕ್ತ ಕಲಾವಿದರು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಆಧಾರ್ ಸಂಖ್ಯೆ ಹಾಗೂ ಬ್ಯಾಂಕ್ ವಿವರಗಳನ್ನು ಏಪ್ರಿಲ್ 28 ರೊಳಗಾಗಿ ಅಕಾಡೆಮಿ ಇ ಮೇಲ್ kla.karnataka@gmail.com ಮೂಲಕ ಅಥವಾ ಅಧ್ಯಕ್ಷರು, ಸದಸ್ಯರ ದೂರವಾಣಿಗೆ ವಾಟ್ಸ್ ಅಪ್ ಮೂಲಕ ಟೈಪ್ ಮಾಡಿ ಕಳುಹಿಸುವಂತೆ ಸೂಚಿಸಲಾಗಿದೆ. 

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ನೃತ್ಯ, ಸುಗಮ ಸಂಗೀತ, ಕಥಾ ಕೀರ್ತನ ಮತ್ತು ಗಮಕ ಕಲಾ ಪ್ರಕಾರದ ಕಲಾವಿದರಿಗೆ ಆರ್ಥಿಕ ನೆರವು ನೀಡುತ್ತಿದ್ದು, ಕಲಾವಿದರು ಬ್ಯಾಂಕ್ ವಿವರಗಳ ಜೆರಾಕ್ಸ್ ಪ್ರತಿ ಹಾಗೂ ಅರ್ಜಿಯನ್ನು ಅಗತ್ಯ ದಾಖಲೆಯೊಂದಿಗೆ email- karnatakasangeeta@gmail.com CxÀªÁ whatsapp No. 9741583696 ಏಪ್ರಿಲ್ 27 ರ ಒಳಗಾಗಿ ಸಲ್ಲಿಸಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ 080-22215072 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. 

ರಂಗಭೂಮಿ ಕಲಾವಿದರು ತಮ್ಮ ಹೆಸರು, ವಿಳಾಸ, ಆಧಾರ್ ಸಂಖ್ಯೆ ದೂರವಾಣಿ ಸಂಖ್ಯೆ ಮತ್ತು ಬ್ಯಾಂಕ್ ಹೆಸರು ವಿಳಾಸ ಖಾತೆ ಸಂಖ್ಯೆ ವಿವರಗಳ ಜೆರಾಕ್ಸ್ ಪ್ರತಿ ಹಾಗೂ ಅರ್ಜಿಯನ್ನು ಅಗತ್ಯ ದಾಖಲೆಯೊಂದಿಗೆ ಕರ್ನಾಟಕ ನಾಟಕ ಅಕಾಡೆಮಿಯ email- academy.nataka@gmail.com ಮತ್ತು whatsapp No. 7975949840 www.karnatakanatakaacademy.com ಏಪ್ರಿಲ್ 27 ರ ಒಳಗಾಗಿ ಸಲ್ಲಿಸಲು ತಿಳಿಸಲಾಗಿದೆ. 

ಬಡ ಹಾಗೂ ಆಶಕ್ತ ಶಿಲ್ಪಕಲಾವಿದರು ಅರ್ಜಿ ನಮೂನೆಯಲ್ಲಿ ತಿಳಿಸಿರುವಂತೆ ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಬೆಂಗಳೂರು ಕಚೇರಿಯ ಈ-ಮೇಲ್: shilpakala.academy@gmail.com ಗೆ ದಿ:27-04-2020ರ ಒಳಗೆ ಕಳುಹಿಸಿಕೊಡುವಂತೆ ಕೋರಿದೆ. ಈ ಅರ್ಜಿ ನಮೂನೆಯನ್ನು ಕೈ ಬರಹದಲ್ಲಿಯೂ ಸಹ ನಮೂದಿಸಿ ಕಳುಹಿಸಿಕೊಡಬೇಕು ಎಂದು ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com