ಬೆಂಗಳೂರು: ವಲಸೆ ಕಾರ್ಮಿಕನಿಗೆ ಆಹಾರದ ಜೊತೆಗೆ ಚಿಕಿತ್ಸೆಗೆ ನೆರವಾಗುತ್ತಿರುವ ಸಹೃದಯಿ

ರಾಜಾಜಿನಗರದ ಛಾಯಾಗ್ರಾಹಕ ರಾಘವೇಂದ್ರ ಶಾಸ್ತ್ರಿ ವಲಸೆ ಕಾರ್ಮಿಕನೊಬ್ಬನಿಗೆ ಆಹಾರ ನೀಡುತ್ತಿದ್ದಾರೆ. ಸದ್ಯ ಆ ಕೆಲಸಗಾರ ಟ್ಯೂಮರ್ ನಿಂದ ಬಳಲುತ್ತಿದ್ದು ಆತನ ಚಿಕಿತ್ಸೆಗೆ ನೆರವಾಗಲು ಪ್ರಯತ್ನಿಸುತ್ತಿದ್ದಾರೆ.
ರಾಘವೇಂದ್ರ ಶಾಸ್ತ್ರಿ
ರಾಘವೇಂದ್ರ ಶಾಸ್ತ್ರಿ

ಬೆಂಗಳೂರು: ರಾಜಾಜಿನಗರದ ಛಾಯಾಗ್ರಾಹಕ ರಾಘವೇಂದ್ರ ಶಾಸ್ತ್ರಿ ವಲಸೆ ಕಾರ್ಮಿಕನೊಬ್ಬನಿಗೆ ಆಹಾರ ನೀಡುತ್ತಿದ್ದಾರೆ. ಸದ್ಯ ಆ ಕೆಲಸಗಾರ ಟ್ಯೂಮರ್ ನಿಂದ ಬಳಲುತ್ತಿದ್ದು ಆತನ ಚಿಕಿತ್ಸೆಗೆ ನೆರವಾಗಲು ಪ್ರಯತ್ನಿಸುತ್ತಿದ್ದಾರೆ.

ಮಿಲ್ಕ್ ಕಾಲೋನಿಯ ರಾಜಣ್ಣ ಸಣ್ಣ ಸಣ್ಣ ಹೋಟೆಲ್ ಗಳಲ್ಲಿ ಕ್ಲೀನಿಂಗ್ ಕೆಲಸ ಮಾಡಿಕೊಂಡು,ಸಣ್ಣ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದ ಕಾರಣ ಮನೆ ಬಾಡಿಗೆ ಕಟ್ಟಲು ಸಾಧ್ಯವಾದ ಹಿನ್ನೆಲೆಯಲ್ಲಿ ಮನೆ ಖಾಲಿ ಮಾಡಿದ್ದರು.

ಅದೇ ಏರಿಯಾ ನಿವಾಸಿಯಾದ ರಾಘವೇಂದ್ರ ರಾಜು ಅವರ ಬಗ್ಗೆ ತಿಳಿದಿದ್ದರು. ಆತ ಕೊಳ್ಳೇಗಾಲದವನಾಗಿದ್ದು ಊರಿಗೆ ಹೋಗಲು ಸಾಧ್ಯವಾಗಿರಲಿಲ್ಲ.  ಹೀಗಾಗಿ ರಾಜು ಗೆ ರಾಘವೇಂದ್ರ ಅವರೇ ಊಟ ಕೊಡುತ್ತಿದ್ದರು. ಕೆಲ ದಿನಗಳ ಹಿಂದೆ ರಾಜು ಇದ್ದಕ್ಕಿದ್ದ ಹಾಗೆ ಕುಸಿದು ಬಿದ್ದಿದ್ದರು,  ಆಗ ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದೆವು.  ವೈದ್ಯರು ಸ್ಕ್ಯಾನ್ ಮಾಡಲು
ಹೇಳಿದರು.

ಆಟೋ ಚಾಲಕನೊಬ್ಬ ಡ್ರಾಪ್ ನೀಡಲು ಒಪ್ಪಿಕೊಂಡ, ರಾಜ್ ಕುಮಾರ್ ರಸ್ತೆಯಲ್ಲಿ ಆತನಿಗೆ ಸ್ಕ್ಯಾನ್ ಮಾಡಿಸಲಾಯಿತು. ಆ ವೇಳೆ ಹೊಟ್ಟೆಯಲ್ಲಿ ಗೆಡ್ಡೆ ಇರುವುದು ಕಂಡು ಬಂತು, ಆದಷ್ಟು ಶೀಘ್ರದಲ್ಲಿ ಶಸ್ತ್ರ ಚಿಕಿತ್ಸೆ ನಡೆಸಬೇಕು ಎಂದು ವೈದ್ಯರು ಸೂಚಿಸಿದ್ದಾರೆ ಎಂದು ರಾಘವೇಂದ್ರ ಹೇಳಿದ್ದಾರೆ.

ರಾಜುವಿನ ಆರೋಗ್ಯದ ಬಗ್ಗೆ ಆತನ ಕುಟುಂಬಸ್ಥರಿಗೆ ತಿಳಿಸಲು ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ. ಆತನಿಗೆ ತಕ್ಷಣವೇ ಶಸ್ತ್ರ ಚಿಕಿತ್ಸೆ ನಡೆಸಬೇಕಾಗಿದ್ದು, ಇದಕ್ಕಾಗಿ ಹಣ ಸಂಗ್ರಹಿಸುತ್ತಿರುವುದಾಗಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ಮತ್ತು ತಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಂದ ಹಣ ಸಂಗ್ರಹಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com