ಅಭಿಮಾನಿಯ ಅಭಿಮಾನ; ಸ್ವಂತ ಕಟ್ಟಡದಲ್ಲಿ ಡಾ.ರಾಜ್ ಪುತ್ಥಳಿ; ನಿತ್ಯ ಪೂಜೆ

ಅಭಿಮಾನ! ಇದಕ್ಕೊಂದು ವಿಶಿಷ್ಟ ಗೌರವ ಹಾಗೂ ವಿಷೇಶ ಸ್ಥಾನ ಮಾನವಿದೆ ಆ ಅಭಿಮಾನ ಎಲ್ಲಿಯವರೆಗೆ ಉಳಿದುಕೊಳ್ಳುತ್ತದೆ ಎಂಬುದು ಮುಖ್ಯ. ಮನುಷ್ಯ ಇರುವವರೆವಿಗೂ ಮಾತ್ರ ಅಭಿಮಾನ ಗೌರವವಿರುತ್ತದೆ ಆತನ ಅಗಲ್ಲಿಕೆಯ ನಂತರವೂ ಅಭಿಮಾನ  ಉಳಿದುಕೊಂಡಿರುವ ನಿದರ್ಶನಗಳು ಕಡಿಮೆ, ಇದಕ್ಕೆ ಅಪವಾದ ಎಂಬಂತೆ ಇಲೊಬ್ಬ ಅಭಿಮಾನಿ ಇದ್ದಾರೆ ಅವರೇ ಡಾ.ರಾಜ್ಕುಮಾರ್ ಅಭಿಮಾನಿ.
ಸ್ವಂತ ಕಟ್ಟಡದಲ್ಲಿ ಡಾ.ರಾಜ್ ಪುತ್ಥಳಿ
ಸ್ವಂತ ಕಟ್ಟಡದಲ್ಲಿ ಡಾ.ರಾಜ್ ಪುತ್ಥಳಿ

ಮಂಡ್ಯ: ಅಭಿಮಾನ! ಇದಕ್ಕೊಂದು ವಿಶಿಷ್ಟ ಗೌರವ ಹಾಗೂ ವಿಶೇಷ ಸ್ಥಾನ ಮಾನವಿದೆ ಆ ಅಭಿಮಾನ ಎಲ್ಲಿಯವರೆಗೆ ಉಳಿದುಕೊಳ್ಳುತ್ತದೆ ಎಂಬುದು ಮುಖ್ಯ. ಮನುಷ್ಯ ಇರುವವರೆವಿಗೂ ಮಾತ್ರ ಅಭಿಮಾನ ಗೌರವವಿರುತ್ತದೆ. ಆತನ ಅಗಲ್ಲಿಕೆಯ ನಂತರವೂ ಅಭಿಮಾನ ಉಳಿದುಕೊಂಡಿರುವ ನಿದರ್ಶನಗಳು ಕಡಿಮೆ, ಇದಕ್ಕೆ ಅಪವಾದ ಎಂಬಂತೆ ಇಲೊಬ್ಬ ಅಭಿಮಾನಿ ಇದ್ದಾರೆ ಅವರೇ ಡಾ.ರಾಜ್ ಕುಮಾರ್ ಅಭಿಮಾನಿ.

ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಯ ನಿವಾಸಿ ಎಂ.ಜೆ.ನಾಗರಾಜು ಅವರು ಡಾ.ರಾಜ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ತಮ್ಮ ಬಡಾವಣೆಯ ಮುಖ್ಯ ರಸ್ತೆಯಲ್ಲಿ ಡಾ.ರಾಜ್ ಎಂಬ ಅಕ್ಕಿ ಅಂಗಡಿ ಇಟ್ಟುಕೊಂಡಿದ್ದು ಅಂಗಡಿಯ ನಾಮಫಲಕದಲ್ಲೂ ಡಾ.ರಾಜ್ ಭಾವಚಿತ್ರ ಬರೆಸಿದ್ದಾರೆ. ಅಂಗಡಿಯ ಕ್ಯಾಶ್ ಕೌಂಟರ್ ಬಳಿ ಡಾ.ರಾಜ್ ಅವರ ದೊಡ್ಡ ಭಾವಚಿತ್ರವಿದ್ದು ಅದಕ್ಕೆ ಪ್ರತಿನಿತ್ಯ ಪೂಜೆ ಸಲ್ಲಿಸಿಯೇ ತಮ್ಮ ನಿತ್ಯಕಾಯಕ ಆರಂಭಿಸುತ್ತಾರೆ. ಅಷ್ಟೆ ಅಲ್ಲ ನಾಗರಾಜ್ ರವರು ಡಾ.ರಾಜ್ ಅಭಿಮಾನಿಯಾದಾಗಿನಿಂದಲೂ ಪ್ರತಿ ವರ್ಷ ಏ. ೨೪ ರಂದು ಡಾ.ರಾಜ್ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ.

೨೦೦೬ ರಲ್ಲಿ ಡಾ.ರಾಜ್ ನಿಧನರಾದಾಗ ಅವರ ನೆನಪು ಸದಾ ನಮ್ಮೂಡನೆ ಇರಬೇಕು ಎಂದು ತಮ್ಮ ಮನೆಯ ಸುತ್ತಾ ಇರುವ ಕಾಪೌಂಡ್ ಹಾಗೂ ಗೊಡೆಗಳ ಮೇಲೆ ಡಾ.ರಾಜ್ ಅವರ ಚಲನಚಿತ್ರದ ಹಲವು ಸ್ಲೋಗನ್ಗಳನ್ನು ಬರೆಸಿದ್ದಾರೆ. ತಮ್ಮ ಮನೆಗೆ ಕಸ್ತೂರಿ ನಿವಾಸ ಡಾ.ರಾಜ್ ಕುಮಾರ್ ನಿಲಯ ಎಂದು ಹೆಸರಿಟ್ಟಿದ್ದು ಮನೆಗೆ ಹೊಂದಿಕೊಂಡಂತೆ ಇರುವ ಜಾಗದಲ್ಲಿ ಅಭಿಮಾನಿಗಳ ಆರಾಧ್ಯ ದೈವ ಡಾ.ರಾಜ್ ಕುಮಾರ್ ಜ್ಙಾನ ಮಂದಿರವನ್ನು ೫ ಲಕ್ಷ ರೂ ವೆಚ್ಚದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಾಣ ಮಾಡಿದ್ದು, ಈ ಅಮರಜೀವಿ ಜ್ಙಾನ ಮಂದಿರದ ಒಳಗೆ ಡಾ.ರಾಜ್ರವರ  ಪುತ್ಥಳಿಯನ್ನು ಸಹ ನಿರ್ಮಿಸಿದ್ದಾರೆ.

ಮನೆಯ ಸತ್ತಾ ಗೋಡೆಗಳಲ್ಲಿ ರಾರಾಜಿಸುತ್ತಿದೆ ಡಾ. ರಾಜ್ ನುಡಿ ಮುತ್ತುಗಳು
ಡಾ.ರಾಜ್ ಪುತ್ಥಳಿ ಇರುವ ಜ್ಙಾನ ಮಂದಿರದಲ್ಲಿ ಡಾ. ವಿಷ್ಣುವರ್ಧನ್,ಡಾ.ಅಂಬರೀಷ್, ಶಂಕರ್ ನಾಗ್, ಗಾಂಧೀಜಿ, ಸುಭಾಶ್ ಚಂದ್ರ ಬೋಸ್, ಸರ್.ಎಂ.ವಿಶ್ವೇಶ್ವರಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್, ಸ್ವಾಮಿ ವಿವೇಕಾನಂದ, ಮಾಗಡಿ ಕೆಂಪೇಗೌಡ ಅವರ ಭಾವಚಿತ್ರಗಳನ್ನು ಹಾಕಲಾಗಿದೆ. ದೇಶಪ್ರೇಮಿ,ಕನ್ನಡ ಪ್ರೇಮಿಯಾಗಿರುವ ಇವರು ಜ್ಙಾನ ಮಂದಿರದ ಮತ್ತೊಂದು ಬದಿಯಲ್ಲಿ ಕುವೆಂಪು, ದ.ರಾ. ಬೇಂದ್ರೆ ಸೇರಿದಂತೆ ಕನ್ನಡಕ್ಕೆ ಜ್ಙಾನ ಪೀಠ ಪ್ರಶಸ್ತಿ ತಂದು ಕೊಟ್ಟ ಎಲ್ಲಾ ಕವಿವರ್ಯರ ಭಾವಚಿತ್ರ ಅಳವಡಿಸಿದ್ದಾರೆ. ಡಾ.ರಾಜ್ ಚಿತ್ರಗಳನ್ನು ನೋಡಿ ಆ ಚಿತ್ರಗಳಲ್ಲಿನ  ತತ್ವ,ಆದರ್ಶಗಳಿಗೆ ಆಕರ್ಷಿತರಾಗಿ ತಮ್ಮ ಜೀವನದಲ್ಲೂ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರ ಕಟ್ಟಾ ಅಭಿಮಾನಿಯಾಗಿ ಡಾ. ರಾಜ್ ನೆನಪುಗಳನ್ನು ಹಚ್ಚ ಹಸಿರಾಗಿಸಿದ್ದಾರೆ. ಡಾ. ರಾಜ್ರವರ ಪ್ರಥಮ ಚಿತ್ರ ಬೇಡರ ಕಣ್ಣಪ್ಪನಿಂದಿಡಿದು ಕಡೆಯ ಚಿತ್ರ ಶಬ್ದವೇದಿಯವರೆಗೂ ಅವರ  ಚಲನಚಿತ್ರದ ಹಾಡುಗಳು ಅಲ್ಲದೆ ಅವರು ಹಾಡಿರುವ ಭಕ್ತಿಗೀತೆ,ಭಾವಗೀತೆ ಹಾಗು ಇನ್ನಿತರ ಗೀತೆಗಳ ಸಂಗ್ರಹ ಇವರ ಬಳಿಯಿದ್ದು ಡಾ.ರಾಜ್ ಕುರಿತು ಬರೆಯಲಾಗೆರುವ ಪುಸ್ತಕಗಳು ಸಹ ಇಲ್ಲಿ ಸಿಗುತ್ತದೆ.

ಡಾ.ರಾಜ್ರವರ ವಿಧವಿಧದ ಭಾವಚಿತ್ರಗಳು,ತೈಲವರ್ಣ ಹಾಗೂ ಕೈಯಲ್ಲಿ ಬಿಡಿಸಿರುವ ಭಾವಚಿತ್ರಗಳನ್ನು ಸಂಗ್ರಹ ಮಾಡಿದ್ದಾರೆ ಡಾ.ರಾಜ್ ಅಭಿನಯದ ಯಾವ ಚಿತ್ರ ಯಾವ ವರ್ಷ ಬಿಡುಗಡೆಯಾಯಿತು ಆ ಚಿತ್ರದ ನಾಯಕಿ, ನಿರ್ದೇಶಕ,ನಿರ್ಮಾಪಕ ಸೇರಿದಂತೆ ಚಿತ್ರೀಕರಣಗೊಂಡ  ಸ್ಧಳಗಳ ಹೆಸರನ್ನು ಪಟಪಟನೆ ಹೇಳುತ್ತಾರೆ. ಲಾಕ್ ಡೌನ್ ಹಿನ್ನಲೆಯಲ್ಲಿ ಏ.೨೪ ರಂದು ಡಾ.ರಾಜ್ ಜನ್ಮದಿನವನ್ನು ಸರಳವಾಗಿ ಆಚರಿಸಿದ್ದು ಅವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಸಲ್ಲಿಸಿ ಹಲವರಿಗೆ ಲಾಕ್ ಡೌನ್ ನಿಯಮ ಪಾಲಿಸಿ ಸಿಹಿ ವಿತರಿಸಲಾಯಿತು ಮುಂದಿನ ವರ್ಷ ಎಂದಿನಂತೆ  ವಿಜೃಂಭಣೆಯಿಂದ ಹುಟ್ಟುಹಬ್ಬ ಆಚರಿಸುವುದಾಗಿ ನಾಗರಾಜ್ ತಿಳಿಸಿದರು. ಇಂದು ಎಷ್ಟೊ ಮಂದಿ ಅಭಿಮಾನದ ಹೇಸರನ್ನು ಮರೆಯುತ್ತಿರುವ ಸಂದರ್ಬದಲಿನಾಗರಾಜ್ರವರ ಈ ಮಾಸದ ಅಭಿಮಾನ ಅಜರಾಮರ ಎಂದರೆ ತಪ್ಪಾಗಲಾರದು.

-ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com