ಹೃದ್ರೋಗ ಸಮಸ್ಯೆಯ 5 ವರ್ಷದ ಬಾಲಕಿಯನ್ನು ಶಿವಮೊಗ್ಗಕ್ಕೆ ತಲುಪಿ ಮಾನವೀಯತೆ ಮೆರೆದ ಬೆಂಗಳೂರು ಜಿಲ್ಲಾಡಳಿತ

ಕೊರೋನಾ ವೈರಸ್ ನಿಯಂತ್ರಣ ಉದ್ದೇಶದಿಂದ ಜಾರಿಗೊಳಿಸಿರುವ ಲಾಕ್ ಡೌನ್ ನಿಂದಾಗಿ ಬೆಂಗಳೂರಿನಲ್ಲಿ ಸಿಲುಕಿಕೊಂಡಿದ್ದ ಹೃದ್ರೋಗ ಸಮಸ್ಯೆಯಿರುವ ಐದು ವರ್ಷದ ಬಾಲಕಿಯನ್ನು ನಗರ ಜಿಲ್ಲಾಡಳಿತ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಕರೆದೊಯ್ದು ಮಾನವೀಯತೆ ಮರೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೋನಾ ವೈರಸ್ ನಿಯಂತ್ರಣ ಉದ್ದೇಶದಿಂದ ಜಾರಿಗೊಳಿಸಿರುವ ಲಾಕ್ ಡೌನ್ ನಿಂದಾಗಿ ಬೆಂಗಳೂರಿನಲ್ಲಿ ಸಿಲುಕಿಕೊಂಡಿದ್ದ ಹೃದ್ರೋಗ ಸಮಸ್ಯೆಯಿರುವ ಐದು ವರ್ಷದ ಬಾಲಕಿಯನ್ನು ನಗರ ಜಿಲ್ಲಾಡಳಿತ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಕರೆದೊಯ್ದು ಮಾನವೀಯತೆ ಮರೆದಿದೆ.

ಬಾಲಕಿಯ  ತಾಯಿ ನಳಿನಿ ಆಶಾ ಕಾರ್ಯಕರ್ತೆಯಾಗಿದ್ದು, ಶಿವಮೊಗ್ಗದಲ್ಲಿ ಕೋವಿಡ್ 19 ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಈಕೆಯ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಶಿವಮೂರ್ತಿ ಅವರು ಐದು ವರ್ಷದ ದರ್ಶಿನಿಯನ್ನು ಕೊರೋನಾ ವಾರಿಯರ್ಸ್ ಗಳ ಮೂಲಕ ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ.

ಹುಟ್ಟಿದ ಆರಂಭದಿಂದಲೂ ಹೃದಯದಲ್ಲಿ ರಂಧ್ರ ಹೊಂದಿದ್ದ ದರ್ಶನಿ ಲಾಕ್ ಡೌನ್ ಗೂ ಒಂದು ವಾರ ಮುಂಚೆ ಬೆಂಗಳೂರಿನ ನಳಿನಿ ಅವರ ಸಹೋದರಿ ಮನೆಗೆ ಬಂದಿದಳು. ಕಳೆದೊಂದು ತಿಂಗಳಿಂದ ಮಗಳನ್ನು ಕರೆಸಿಕೊಳ್ಳಲು ತಾಯಿ ಸಾಕಷ್ಟು ಪ್ರಯತ್ನ ನಡೆಸಿದ್ದರು. ಒಂದೆಡೆ ಕೋವಿಡ್ 19 ಚಟುವಟಿಕೆಯಲ್ಲಿ ತೊಡಗಿಗೊಂಡಿದ್ದರಿಂದ ಸ್ವತಃ ಬರಲು ಸಾಧ್ಯವಾಗಿರಲಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com