ಬೆಂಗಳೂರು: ಕಾಮದಾಸೆ ತೀರಿದ ಬಳಿಕ ಕತ್ತು ಹಿಸುಕಿ ಪ್ರೇಯಸಿಯ ಕೊಲೆಗೆ ಯತ್ನ, ಪ್ರಕರಣ ದಾಖಲು!

ಪ್ರೀತಿಸಿ ವಿವಾಹವಾಗುವುದಾಗಿ ನಂಬಿಸಿದ್ದ ಯುವತಿಯನ್ನು ಲಾಕ್‌ಡೌನ್‌ ವೇಳೆ ಮನೆಗೆ ಕರೆಸಿ ಕತ್ತು ಹಿಸುಕಿ ಕೊಲೆಗೆ ಯತ್ನಿಸಿರುವ ಘಟನೆ ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Published: 27th April 2020 03:52 PM  |   Last Updated: 27th April 2020 03:52 PM   |  A+A-


for representation purpose only

ಸಂಗ್ರಹ ಚಿತ್ರ

Posted By : Vishwanath S
Source : UNI

ಬೆಂಗಳೂರು: ಪ್ರೀತಿಸಿ ವಿವಾಹವಾಗುವುದಾಗಿ ನಂಬಿಸಿದ್ದ ಯುವತಿಯನ್ನು ಲಾಕ್‌ಡೌನ್‌ ವೇಳೆ ಮನೆಗೆ ಕರೆಸಿ ಕತ್ತು ಹಿಸುಕಿ ಕೊಲೆಗೆ ಯತ್ನಿಸಿರುವ ಘಟನೆ ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕೊಲೆ ಯತ್ನ ತನ್ನ ಮೇಲೆ ನಡೆದಿದೆ ಎಂದು ಮಾರತ್ತಹಳ್ಳಿಯ 30 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಸಂಜಯನಗರ ನಿವಾಸಿ ಅರ್ಕಾ ಭಕ್ಷಿ ಎಂಬಾತನ ವಿರುದ್ಧ ಮಾರತಹಳ್ಳಿ ಪೊಲೀಸರು ದೂರು ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.

ಘಟನೆಯ ವಿವರ:
ಎನ್‌ಜಿಒ ಒಂದರಲ್ಲಿ ಕೆಲಸ ಮಾಡುತ್ತಿರುವ ಯುವತಿ ಮಾರತ್ತಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈ ವೇಳೆ ಅರ್ಕಾ ಭಕ್ಷಿ ಪರಿಚಯವಾಗಿದ್ದ. ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ತಾನು ಪ್ರೀತಿಸುತ್ತಿರುವ ಸಂಗತಿಯನ್ನು ಯುವತಿ ಪಾಲಕರಿಗೆ ತಿಳಿಸಿದ್ದರು. ಅರ್ಕಾ ಭಕ್ಷಿ ಕೂಡ ಯುವತಿಯ ಪಾಲಕರೊಂದಿಗೆ ಈ ಬಗ್ಗೆ ಮಾತನಾಡಿದ್ದ. ಇದರಿಂದಾಗಿ ಪಾಲಕರು ಇಬ್ಬರೂ ಓಡಾಡಲು ಅನುಮತಿ ನೀಡಿದ್ದರು ಎನ್ನಲಾಗಿದೆ.

ಕೆಲ ತಿಂಗಳ ಹಿಂದೆ ಆರೋಪಿ ಕೆಲಸ ಮಾಡುತ್ತಿದ್ದ ಕಚೇರಿ ಸಂಜಯನಗರಕ್ಕೆ ಸ್ಥಳಾಂತರಗೊಂಡಿತ್ತು. ಹೀಗಾಗಿ, ತನ್ನ ಮನೆಯನ್ನೂ ಸಂಜಯನಗರಕ್ಕೆ ವರ್ಗಾಯಿಸಿದ್ದ. ಫೆ.14ರ ಪ್ರೇಮಿಗಳ ದಿನದಂದು ಯುವತಿಯನ್ನು ತನ್ನ ಮನೆಗೆ ಕರೆಸಿಕೊಂಡು ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೆ, ಪಬ್‌ಗೂ ಕರೆದುಕೊಂಡು ಹೋಗಿ ಪಾರ್ಟಿ ಮಾಡಿದ್ದ. ಪಾರ್ಟಿಯಲ್ಲೂ ಕೂಡ ಮದುವೆ ಆಗುವುದಾಗಿ ಎಲ್ಲಾ ಸ್ನೇಹಿತರ ಮುಂದೆ ಹೇಳಿ, ಉಂಗುರ ತೊಡಿಸಿದ್ದ ಎಂದು ದೂರಿನಲ್ಲಿ ಯುವತಿ ತಿಳಿಸಿದ್ದಾರೆ.

ಲಾಕ್‌ಡೌನ್‌ ಘೋಷಣೆಯಾದ ಬಳಿಕ, 'ಇಬ್ಬರೂ ಸಂಜಯನಗರದಲ್ಲೇ ಕೆಲಸ ಮಾಡೋಣ' ಎಂದು ಪುಸಲಾಯಿಸಿ ಯುವತಿಯನ್ನು ಮಾರತ್ತಹಳ್ಳಿಯಿಂದ ಸಂಜಯನಗರದ ತನ್ನ ಮನೆಗೆ ಕರೆಸಿಕೊಂಡಿದ್ದ. ಆದರೆ ಈ ವಿಷಯ ಆರೋಪಿಯ ಪೋಷಕರಿಗೆ ತಿಳಿಯಿತು. ಅವರು ತಮ್ಮ ಮಗನಿಂದ ದೂರ ಇರುವಂತೆ ಯುವತಿಗೆ ಮೆಸೇಜ್‌ ಮಾಡಿ ಎಚ್ಚರಿಸಿದರು. ಆ ಯುವತಿಯನ್ನು ಬಿಡದಿದ್ದರೆ ನಿನ್ನನ್ನು ಮನೆಯಿಂದ ಹೊರಗೆ ಹಾಕುವುದಾಗಿಯೂ ಮಗನಿಗೂ ಬೆದರಿಸಿದ್ದರು. ಪೋಷಕರ ಬೆದರಿಕೆಗೆ ಹೆದರಿದ ಆರೋಪಿ, ಯುವತಿಯನ್ನು ವಾಪಸ್‌ ಮನೆಗೆ ಹೋಗುವಂತೆ ತಿಳಿಸಿದ್ದ. ಯುವತಿ ನಿರಾಕರಿಸಿದ್ದರು. ಇದೇ ವಿಚಾರಕ್ಕೆ ಗಲಾಟೆ ನಡೆದು ಆರೋಪಿ ಯುವತಿಯ ಕುತ್ತಿಗೆ ಹಿಸುಕಿ ಸಾಯಿಸಲು ಯತ್ನಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮಾರತ್‌ಹಳ್ಳಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Stay up to date on all the latest ರಾಜ್ಯ news with The Kannadaprabha App. Download now
Poll
coronadead

ಕೊರೋನಾ ವೈದ್ಯಕೀಯ ಸಲಕರಣೆ ಖರೀದಿ ಹೆಸರಿನಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬ ಆರೋಪಗಳು ಕೇಳಿಬಂದಿವೆ. ನೀವು ಏನಂತೀರಿ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp