ಉಡುಪಿಯಲ್ಲಿ ಆಶಾ ಕಾರ್ಯಕರ್ತೆಗೆ ಕೊಲೆ ಬೆದರಿಕೆ; ಆರೋಪಿ ಬಂಧನ

ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದರೆ ಕಠಿಣ ಶಿಕ್ಷೆ ವಿಧಿಸಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ ನಂತರವೂ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸುವ ಘಟನೆಗಳು ಮುಂದುವರಿದಿವೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಉಡುಪಿ: ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದರೆ ಕಠಿಣ ಶಿಕ್ಷೆ ವಿಧಿಸಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ ನಂತರವೂ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸುವ ಘಟನೆಗಳು ಮುಂದುವರಿದಿವೆ

ಉಡುಪಿ‌ ಜಿಲ್ಲೆಯಲ್ಲಿ ಮತ್ತೊಮ್ಮೆ‌ ಕೊರೋನಾ ವಾರಿಯರ್ಸ್‌ ಮೇಲೆ‌ ಬೆದರಿಕೆ‌ ಪ್ರಕರಣ‌ ಮರುಕಳಿಸಿದೆ.‌ ಉಡುಪಿ‌ ಜಿಲ್ಲೆಯ ಕುಂದಾಪುರ‌ ತಾಲೂಕಿನಲ್ಲಿ ಆಶಾ ಕಾರ್ಯಕರ್ತೆಯೊಬ್ಬರನ್ನು ಬೆದರಿಸಿದ ಘಟನೆ ನಡೆದಿದೆ.

ಲಾಕ್ ಡೌನ್ ನಡುವೆ ಬೆಂಗಳೂರಿಂದ ಬಂದಿರುವ ಯುವಕ ಸಂದೀಪ ಮೇಸ್ತ ಎಂಬಾತನಿಗೆ‌ ಆಶಾ ಕಾರ್ಯಕರ್ತೆ ಲಕ್ಷ್ಮೀ ಹೋಂ ಕ್ವಾರಂಟೈನ್ ವಿಧಿಸಿದ್ದರು.‌ ಆದರೆ, ಸಂದೀಪ್ ಕ್ವಾ‌ರಂಟೈನ್ ಉಲ್ಲಂಘಿಸಿ ಓಡಾಡುತ್ತಿದ್ದ. ಹೀಗಾಗಿ ಸಂದೀಪ್ ನನ್ನು ಮನೆಯಲ್ಲಿರುವಂತೆ ಸೂಚನೆ ನೀಡಿದಾಗ, ಸಂದೀಪ್‌ ಹಾಗೂ ಆತನ ಗೆಳೆಯ ಮಹೇಶ್ ಖಾರ್ವಿಯಿಂದ ಲಕ್ಷ್ಮೀ ಅವರಿಗೆ ಕೊಲೆ ಬೆದರಿಕೆ ಒಡ್ಡಿದ್ದಾರೆ

ಕುಂದಾಪುರ‌ ತಾಲೂಕಿನ ಮುದ್ದುಗಡ್ಡೆಯಲ್ಲಿ ಬದುಕಲು ಬಿಡಲ್ಲ ಎಂದು ಬೆದರಿಕೆ ಒಡ್ಡಲಾಗಿದೆ. ಈ ಬಗ್ಗೆ‌ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇಬ್ಬರು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ

ಕಳೆದ ಕೆಲ‌ ದಿನದ ಹಿಂದೆ 22ರಂದು ಉಡುಪಿ ಜಿಲ್ಲೆಯ ಪಡುಬಿದ್ರಿ ತಾಲೂಕಿನ ಉಚ್ಚಿಲದಲ್ಲಿ ಆರೋಗ್ಯ ಸಹಾಯಕಿ‌ ಶ್ಯಾಮಲಾ‌ ಅವರ ಮೇಲೆ ಹಲ್ಲೆ‌ ಯತ್ನ, ಜೀವ ಬೆದರಿಕೆ‌ ಘಟನೆ ನಡೆದಿತ್ತು.ಮಾಸ್ಕ್ ಹಾಕಿ ಅನ್ನೋ‌ ಬುದ್ದಿ ಮಾತು ಹಾಗೂ ಹೊರ‌ ಜಿಲ್ಲೆಯಿಂದ ಬರುವ ಬಗ್ಗೆ ಪ್ರಶ್ನಿಸಿದಕ್ಕೆ ಈ ಪ್ರಕರಣ ನಡೆದಿತ್ತು ವಾರಿಯರ್ಸ್‌ ಮೇಲೆ‌ ಬೆದರಿಕೆ, ಹಲ್ಲೆ ನಡೆದರೆ‌ ಕಠಿಣ‌ ಶಿಕ್ಷೆಗೆ ‌ಒಳಪಡಿಸುವುದಾಗಿ‌ ಸರ್ಕಾರ ಎಚ್ಚರಿಕೆ ನೀಡಿದ ಬೆನ್ನಲ್ಲೇ ಮತ್ತೆ ಬೆದರಿಕೆ‌ ಪ್ರಕರಣ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com