ಯಾರನ್ನಾದರೂ ಸುಲಭವಾಗಿ ನಂಬುವುದೇ ಬಿಆರ್ ಶೆಟ್ಟಿ ಪತನಕ್ಕೆ ಕಾರಣ: ಖ್ಯಾತ ಉದ್ಯಮಿಯ ಆಪ್ತನ ನುಡಿ

ಫಾರ್ಮಾ ಉದ್ಯಮಿ ಮತ್ತು ಬಿಲಿಯನೇರ್ ಬಿ.ಆರ್.ಶೆಟ್ಟಿ ಅವರು ಯುಕೆ ಮತ್ತು ಯುಎಇಯಲ್ಲಿ ಎರಡು ಉನ್ನತ ದರ್ಜೆಯ ಕಂಪನಿಗಳಾದ ಎನ್‌ಎಂಸಿ ಹೆಲ್ತ್ ಮತ್ತು ಫಿನಾಬ್ಲರ್ ಗಳನ್ನು ಹೊಂದಿದ್ದು ಇದೀಗ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ.
ಬಿ.ಆರ್.ಶೆಟ್ಟಿ
ಬಿ.ಆರ್.ಶೆಟ್ಟಿ

ಬೆಂಗಳುರು/ಉಡುಪಿ: ಫಾರ್ಮಾ ಉದ್ಯಮಿ ಮತ್ತು ಬಿಲಿಯನೇರ್ ಬಿ.ಆರ್.ಶೆಟ್ಟಿ ಅವರು ಯುಕೆ ಮತ್ತು ಯುಎಇಯಲ್ಲಿ ಎರಡು ಉನ್ನತ ದರ್ಜೆಯ ಕಂಪನಿಗಳಾದ ಎನ್‌ಎಂಸಿ ಹೆಲ್ತ್ ಮತ್ತು ಫಿನಾಬ್ಲರ್ ಗಳನ್ನು ಹೊಂದಿದ್ದು ಇದೀಗ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ.  ಕಾರ್ಪೊರೇಟ್ ಆಡಳಿತ ನಿಯಮಗಳನ್ನು ಉಲ್ಲಂಘಿಸಿರುವ ಆರೋಪ ಎದುರಿಸುತ್ತಿರುವ ಶೆಟ್ಟಿ ಕ್ಯಾಲಿಫೋರ್ನಿಯಾ ಮೂಲದ ಸಂಶೋಧನಾ ಸಂಸ್ಥೆ, ಮಡ್ಡಿ ವಾಟರ್ಸ್ ತನ್ನ ವರದಿಯಲ್ಲಿ ಯುಎಇಯಲ್ಲಿ ಕನಿಷ್ಠ ಒಂದು ಡಜನ್ ಬ್ಯಾಂಕುಗಳಿಗೆ ಸಾಲ ಮರುಪಾವತಿಲ್ಲ ಎಂದು ಹೇಳಿದೆ. 

ಶೆಟ್ಟಿಯವರ  ಹಣಕಾಸು ಸಂಸ್ಥೆ ಫಿನಾಬ್ಲರ್ ಕಂಪನಿಯ ಮಂಡಳಿಯ ಯಾವುದೇ ಮುಂಜಾಗರೂಕತೆ ಇಲ್ಲದೆ  100 ಮಿಲಿಯನ್ ಮೌಲ್ಯದ ಚೆಕ್ ಗಳನ್ನು ನೀಡಿರುವುದು ಕಂಡುಬಂದಿದೆ. ಬುಧಾಬಿ ಬ್ಯಾಂಕ್ ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಯುಕೆ ನ್ಯಾಯಾಲಯವು ಎನ್‌ಎಂಸಿಯ ದಿವಾಳಿತನ ಘೋಷಣೆಗೆ ಕೋರಿದ ನಂತರ ಏಪ್ರಿಲ್ 26 ರಂದು ಯುಎಇಯ ಸೆಂಟ್ರಲ್ ಬ್ಯಾಂಕ್ ಎಲ್ಲಾ ಹಣಕಾಸು ಸಂಸ್ಥೆಗಳಿಗೆ ಉಡುಪಿ ಮೂಲದ  ಉದ್ಯಮಿಯ ಎಲ್ಲಾ ಬ್ಯಾಂಕ್ ಖಾತೆಗಳನ್ನು  ಮುಟ್ಟುಗೋಲು ಹಾಕಿಕೊಳ್ಲಲು ಸೂಚಿಸಿದೆ. ಶೆಟ್ಟಿಯವರಿಗೆ ಸೇರಿದ ಕಂಪನಿಯು ಸುಮಾರು 1 981 ಮಿಲಿಯನ್ ಮೊತ್ತವನ್ನು ಬಾಕಿ ಉಳಿಸಿಕೊಂಡಿದೆ. ಎಂಬ ಆರೋಪದ ಹಿನ್ನೆಲೆಯಲ್ಲಿ ಎನ್‌ಎಂಸಿ ಮತ್ತು ಫಿನಾಬ್ಲರ್ ಷೇರುಗಳು ಲಂಡನ್ ಸ್ಟಾಕ್ ಎಕ್ಸ್‌ಚೇಂಜ್ (ಎಲ್‌ಎಸ್‌ಇ) ನಲ್ಲಿ ವಹಿವಾಟು ನಿಲ್ಲಿಸಿವೆ. ಟ್ಟಿ ಅವರು ಎನ್‌ಎಂಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ, ಆದರೆ ಅನೇಕ ಹಿರಿಯ ಆಡಳಿತ ನಿರ್ವಹಣಾ ಅಧಿಕಾರಿಗಳನ್ನು ವಜಾ ಮಾಡಲಾಗಿದೆ.

ಶೆಟ್ಟಿ ಎರಡೂವರೆ ದಶಕಗಳ ಹಿಂದೆ ಅಬುಧಾಬಿಯಲ್ಲಿ ತಮ್ಮದೇ ಆದ ಹೆಲ್ತ್ ಬ್ಯುಸಿನೆಸ್ ಎನ್‌ಎಂಸಿಯನ್ನು ಸ್ಥಾಪಿಸಿದರು ಮತ್ತು ಪ್ಲೇ ರೂಲ್ಸ್ ಗಳನ್ನು ಪುನರ್ ಸ್ಥಾಪಿಸಿದ್ದರು. ಯುಎಇಯ ಅತಿದೊಡ್ಡ ಖಾಸಗಿ ಆರೋಗ್ಯ ಪೂರೈಕೆದಾರರ ಅಧ್ಯಕ್ಷರಾಗಲು ಹೊರಟ ಶೆಟ್ಟಿ  2018 ರಲ್ಲಿ 2 4.2 ಬಿಲಿಯನ್ ಸಂಪತ್ತು ಹೊಂದಿದ್ದರೆಂದು  ಫೋರ್ಬ್ಸ್ ವರದಿ ಮಾಡಿತ್ತು. ಎಲ್‌ಎಸ್‌ಇಯಲ್ಲಿ ಪಟ್ಟಿ ಮಾಡಲಾದ ಅಬುಧಾಬಿ ಮೂಲದ ಏಕೈಕ ಕಂಪನಿ ಎನ್‌ಎಂಸಿ ಹೆಲ್ತ್. ಆಗಿತ್ತು.

ಶೆಟ್ಟಿಯ ಯೋಜನೆಗಳು ಆರೋಗ್ಯ ಸೇವೆಗೆ ಮಾತ್ರ ಸೀಮಿತವಾಗಿಲ್ಲ. ಮುಂಚೆಯೇ, ಅವರು ಹಣಕಾಸು ಕ್ಷೇತ್ರದಲ್ಲಿ ಒಂದು ಅವಕಾಶವನ್ನು ಕಂಡುಹುಡುಕಿದ್ದರು. ಗಲ್ಫ್ ನಲ್ಲಿನ ಇಮಿಗ್ರೆಂಟ್ ಮಾರ್ಕೆಟ್ ಅನ್ನು ಪತ್ತೆ ಮಾಡಿ ಲಸಿಗರಿಗೆ ಹಣವನ್ನು ಮರಳಿ ಮನೆಗೆ ಕಳುಹಿಸಲು ಯುಎಇ ಎಕ್ಸ್ಚೇಂಜ್ ಅನ್ನು ಸ್ಥಾಪಿಸಿದರು. 2003 ರಲ್ಲಿ, ಅಬುಧಾಬಿಯಲ್ಲಿ ಫಿಜರ್, ಮೆರ್ಕ್ ಮುಂತಾದ ಉನ್ನತ ಬ್ರಾಂಡ್‌ಗಳೊಂದಿಗೆ ಕೆಲಸ ಮಾಡುವ ಮೂಲಕ ಅವರು ತಮ್ಮದೇ ಆದ  ಔಷಧ ಉತ್ಪಾದನಾ ಉದ್ಯಮವಾದ ನಿಯೋಫಾರ್ಮಾವನ್ನು ಪ್ರಾರಂಭಿಸಿದರು. ಏತನ್ಮಧ್ಯೆ, ವಿಮಾನ ನಿರ್ಬಂಧದಿಂದಾಗಿ ಯುಎಇಗೆ ಹಿಂತಿರುಗಲು ಸಾಧ್ಯವಾಗದೆ ಮಂಗಳೂರಿನಲ್ಲಿರುವ ಶೆಟ್ಟಿ ಅವರು ಅವರಿಗೆ ಆಪ್ತವಾಗಿರುವವರ ಮೂಲಗಳ ಪ್ರಕಾರ ತಾವು ಸೋಲನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಇಲ್ಲ. ಬದಲಿಗೆ ಮಧ್ಯಪ್ರಾಚ್ಯ ರಾಷ್ಟ್ರದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡುವ ಮೂಲಕ ವರು ಮತ್ತೆ ಪುಟಿದೇಳುವ ತಯಾರಿಯಲ್ಲಿದ್ದಾರೆ.

ಬಿಆರ್ಎಸ್ ಹೆಲ್ತ್ ಅಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ ಪ್ರೈವೇಟ್ ಲಿಮಿಟೆಡ್ನ ಜನರಲ್ ಮ್ಯಾನೇಜರ್ ಕುಶಾಲ್ ಶೆಟ್ಟಿಬಿಆರ್ ಶೆಟ್ಟಿ ಅವರ ಉದ್ದೇಶವನ್ನು ಬಿಡಿಸಿಟ್ಟಿದ್ದು "ಶೆಟ್ಟಿಯವರ ಯಾರನ್ನಾದರೂ ಬಲುಬೇಗನೆ ನಂಬುವ ಅವರ ಮನಸ್ಥಿತಿ, ಅವರ ವ್ಯವಹಾರಗಳ ನಷ್ಟಕ್ಕೆ ಕಾರಣವಾಗಬಹುದು ಎಂದಿದ್ದಾರೆ.ಆದರೆ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಎನ್‌ಎಂಸಿ ಹೆಲ್ತ್ ಸಿಇಒ ಹುದ್ದೆ ತೊರೆದಿದ್ದು ಅವರೀಗ ಆಡಳಿತದಲ್ಲಿ  ಯಾವುದೇ ಜವಾಬ್ದಾರಿಹೊಂದಿಲ್ಲ ಹಾಗಾಗಿ ಅವರು ಯಾವುದೇ ಹಣಕಾಸಿನ ಅಕ್ರಮಗಳನ್ನು ಮಾಡಿಲ್ಲ ಎನ್ನುವುದು ಖಚಿತವಾಗಿದೆ.ಅವರು ಮಂಡಳಿಯ ಸದಸ್ಯರಾಗಿ ತಮ್ಮ ಸಾಮರ್ಥ್ಯಕ್ಕನುಸಾರ ಮಂಡಳಿ ಸಭೆಗಳಿಗೆ ಮಾತ್ರ ಹಾಜರಾಗುತ್ತಿದ್ದರು" ಕುಶಾಲ್ ಶೆಟ್ಟಿ ಹೇಳಿದ್ದಾರೆ.

ಬಿ.ಆರ್.ಶೆಟ್ಟಿ ಅವರ ಸೋದರ ಅನಾರೋಗ್ಯಕ್ಕೀಡಾಗಿದ್ದ ಹಿನ್ನೆಲೆ ಊರಿಗೆ ಬಂದಿದ್ದರು. ಸೋದರ ನಿಧನರಾಗಿದ್ದು ಲಾಕ್ ಡೌನ್ ಇರುವ ಕಾರಣ  ಈಗ ಮಂಗಳೂರಿನಲ್ಲಿರುವ ತಮ್ಮ ಸಹೋದರನ ಮನೆಯಲ್ಲಿ ವಾಸಿಸುತ್ತಿದ್ದಾರೆ.  ಅವರು ಕಾನೂನು ಹೋರಾಟ ನಡೆಸಲು ಪ್ರಕರಣವನ್ನು ಅಧ್ಯಯನ ಮಾಡುತ್ತಿದ್ದಾರೆ. 

ಕೋಟ್ಯಾಧಿಪತಿ ಉದ್ಯಮಿಯಾಗಿ ಬದಲಾದ ಶೆಟ್ಟಿಯವರ ಜೀವನ ಪ್ರಯಾಣ ವಿಸ್ಮಯಕಾರಿಯಾಗಿದ್ದು 1942 ರಲ್ಲಿ ಉಡುಪಿಯಕಾಪುವಿನಲ್ಲಿ ಜನಿಸಿದ ಶೆಟ್ಟಿ ವರ ಆರಂಭಿಕ ವರ್ಷ ದಿನದಿನದ ಜೀವನದ ಹೋರಾಟದಿಂದ ಕೂಡಿತ್ತು.ಅವರು 1968 ರಲ್ಲಿ ಭಾರತೀಯ ಜನ ಸಂಘದಿಂದ ಉಡುಪಿ ಪಟ್ಟಣ ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸತತ ಎರಡು ಬಾರಿ ಗೆಲುವು ಕಂಡಿದ್ದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಅವರಿಗೆ ಶೆಟ್ಟಿ ಹಬ್ಲೋಟ್ ವಾಚ್ ನೀಡಿ ಸುದ್ದಿಯಾಗಿದ್ದರು. ಆದರೆ ಈ ವಿಚಾರವು ವಿವಾದಕ್ಕೀಡಾದಾಗ ಇಬ್ಬರೂ ಸಹ ಇದನ್ನು ನಿರಾಕರಿಸಿದ್ದರು. ಕೆಲವು ವರ್ಷಗಳ ಹಿಂದೆ, ಅವರು ಬಾಲಿವುಡ್‌ನಲ್ಲಿ ಅತ್ಯಂತ ದುಬಾರಿ ಚಿತ್ರ ತಯಾರಕರಾಗಲಿದ್ದಾರೆ ಎನ್ನಲಾಗಿತ್ತು. ಅಲ್ಲದೆ ವಿಶ್ವಪ್ರಸಿದ್ದ ಜೋಗ ಜಲಪಾತವನ್ನು  ಅಭಿವೃದ್ಧಿಪಡಿಸುವುದಾಗಿ ಘೋಷಿಸಿದ್ದರು.  ಆದರೆ ಈ ಎರಡೂ ಯೋಜನೆಗಳು ಇನ್ನೂ ಕಾರ್ಯಗತವಾಗಿಲ್ಲ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com