5.5 ಕೋಟಿ ರೂ. ವೆಚ್ಚದಲ್ಲಿ ರಾಮನಗರದ 1 ಲಕ್ಷ 4 ಸಾವಿರ ಕುಟುಂಬಗಳಿಗೆ ಆಹಾರ ಕಿಟ್: ಎಚ್ ಡಿ ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಅವರೊಡನೆ ಪುತ್ರ-ಸೊಸೆ ನವದಂಪತಿ ನಿಖಿಲ್-ರೇವತಿ ಕೈಯಿಂದ ಜಿಲ್ಲೆಯ ಜನರಿಗೆ ಉಚಿತ ಆಹಾರ ಕಿಟ್ ವಿತರಿಸಿದರು.

Published: 28th April 2020 02:30 PM  |   Last Updated: 28th April 2020 02:30 PM   |  A+A-


meal kits

ಆಹಾರ ವಿತರಣೆಯ ಚಿತ್ರ

Posted By : Vishwanath S
Source : UNI

ರಾಮನಗರ: ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಅವರೊಡನೆ ಪುತ್ರ-ಸೊಸೆ ನವದಂಪತಿ ನಿಖಿಲ್-ರೇವತಿ ಕೈಯಿಂದ ಜಿಲ್ಲೆಯ ಜನರಿಗೆ ಉಚಿತ ಆಹಾರ ಕಿಟ್ ವಿತರಿಸಿದರು.

ಮಗನ ಮದುವೆಗೆ ಆಹ್ವಾನಿಸುವ ಮೂಲಕ ಜನತೆಯ ಋಣಕ್ಕೆ ಕೃತಜ್ಞತೆ ಸಲ್ಲಿಸುವ ಆಸೆಯನ್ನು ಲಾಕ್‌ ಡೌನ್‌ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ರಾಮನಗರ ಮತ್ತು ಚನ್ನಪಟ್ಟಣ ತಾಲೂಕಿನ ಸುಮಾರು ಒಂದು ಲಕ್ಷ ಕುಟುಂಬಕ್ಕೆ ದಿನಸಿ ಕಿಟ್ ನೀಡುವ ಮೂಲಕ ನೆರವೇರಿಸಿ ಧನ್ಯವಾದ ಸಲ್ಲಿಸಿದ್ದಾರೆ.

ಇಂದು ಅನ್ನಂ ಪರಬ್ರಹ್ಮ ದಿನಸಿ ಕಿಟ್ ನೀಡುವ ಮೂಲಕ ಕಾರ್ಯಕ್ಕೆ ಸಾಂಕೇತಿಕ ಚಾಲನೆ ನೀಡಲಾಯಿತು. ಹೆಚ್.ಡಿ.ಕುಮಾರಸ್ವಾಮಿಯವರು ಮತ್ತು ರಾಮನಗರ ಶಾಸಕರಾದ ಅನಿತಾ ಕುಮಾರಸ್ವಾಮಿಯವರು ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ನಿಖಿಲ್ ಕುಮಾರ್ "ಅನ್ನಂ ಪರಬ್ರಹ್ಮ" ದಿನಸಿ ವಸ್ತುಗಳ ಕಿಟ್ ವಿತರಣೆಗೆ ರಾಮನಗರದಲ್ಲಿ ಆರಂಭಿಕವಾಗಿ ಸಾಂಕೇತಿಕವಾಗಿ ಚಾಲನೆ ನೀಡಿದರು.

ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ರಾಮನಗರ, ಚನ್ನಪಟ್ಟಣಕ್ಕೆ ಸುಮಾರು 60 ಸಾವಿರ ಆಹಾರದ ಕಿಟ್ ನೀಡಬೇಕೆಂಬ ಉದ್ದೇಶವಿದೆ. ತಾರತಮ್ಯವಿಲ್ಲದೆ ಎಲ್ಲರಿಗೂ ದಿನಸಿ ಕಿಟ್ ಸಿಗುವಂತೆ ಮಾಡಲಾಗಿದೆ. ರಾಮನಗರದಲ್ಲಿಯೇ ಮಗ ನಿಖಿಲ್ ಮದುವೆ ಮಾಡಬೇಕೆಂಬ ಆಸೆಯಿತ್ತು. ಆದರೆ ಕೊರೊನಾದಿಂದಾಗಿ ಅದು ಸಾಧ್ಯವಾಗಲಿಲ್ಲ. ಈಗ ಸುಮಾರು 5.5 ಕೋಟಿ ರೂ. ವೆಚ್ಚದಲ್ಲಿ ರಾಮನಗರದ 1 ಲಕ್ಷ ದ 4 ಸಾವಿರ ಕುಟುಂಬಗಳಿಗೆ ಪ್ರತಿ ಮನೆ ಮನೆಗೆ ಪಕ್ಷದ ಮುಖಂಡರು ಕಾರ್ಯಕರ್ತರು ಕೂಪನ್ ಮಾದರಿಯಲ್ಲಿ ಆಹಾರದ ಕಿಟ್ ವ್ಯವಸ್ಥಿತವಾಗಿ ನೀಡಲಿದ್ದಾರೆ. ಇದು ಯಾವುದೇ ಕಾರಣಕ್ಕೂ ದುರುಪಯೋಗವಾಗದಂತೆ ಕ್ರಮವಹಿಸಲಾಗಿದೆ ಎಂದರು.

Stay up to date on all the latest ರಾಜ್ಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp