ಇನ್ನೆರಡು ವಾರಗಳಲ್ಲಿ ಮತ್ತೆ ದಾನ ಮಾಡುತ್ತೇನೆ: ಕರ್ನಾಟಕದ ಮೊದಲ ಪ್ಲಾಸ್ಮಾ ಡೋನರ್

ವಿಶ್ವದಾದ್ಯಂತ ಕೊರೋನಾ ವೈರಸ್ ಅಟ್ಟಹಾಸ ಮೆರೆಯುತ್ತಿದ್ದು, ವೈರಸ್ ಮಟ್ಟಹಾಕಲು ಇನ್ನು ಯಾವುದೇ ಔಷಧಿಗಳನ್ನು ಕಂಡು ಹಿಡಿದಿಲ್ಲ. ಆದರೆ, ಈ ನಡುವೆ ರೋಗಿಗಳನ್ನು ಸೋಂಕಿನಿಂದ ರಕ್ಷಿಸಲು ಪ್ಲಾಸ್ಮಾ ಥೆರಪಿಯನ್ನು ಉತ್ತಮ ರಾಮಬಾಣವೆಂದು ಹೇಳಲಾಗುತ್ತಿದೆ. ಹೀಗಾಗಿ ಕೊರೋನಾಗೆ ಪರ್ಯಾಯ ಚಿಕಿತ್ಸೆಯ ಭರವಸೆ ಸಿಕ್ಕಿದಂತಾಗಿದೆ. ಈಗಾಗಲೇ ರಾಜ್ಯ ಸರ್ಕಾರ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವಿಶ್ವದಾದ್ಯಂತ ಕೊರೋನಾ ವೈರಸ್ ಅಟ್ಟಹಾಸ ಮೆರೆಯುತ್ತಿದ್ದು, ವೈರಸ್ ಮಟ್ಟಹಾಕಲು ಇನ್ನು ಯಾವುದೇ ಔಷಧಿಗಳನ್ನು ಕಂಡು ಹಿಡಿದಿಲ್ಲ. ಆದರೆ, ಈ ನಡುವೆ ರೋಗಿಗಳನ್ನು ಸೋಂಕಿನಿಂದ ರಕ್ಷಿಸಲು ಪ್ಲಾಸ್ಮಾ ಥೆರಪಿಯನ್ನು ಉತ್ತಮ ರಾಮಬಾಣವೆಂದು ಹೇಳಲಾಗುತ್ತಿದೆ. ಹೀಗಾಗಿ ಕೊರೋನಾಗೆ ಪರ್ಯಾಯ ಚಿಕಿತ್ಸೆಯ ಭರವಸೆ ಸಿಕ್ಕಿದಂತಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಈ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರದ ಅನುಮತಿಯನ್ನೂ ಕೂಡ ಪಡೆದಿದ್ದು, ಚಿಕಿತ್ಸೆಗೆ ಚಾಲನೆ ನೀಡಿದೆ. ಆದರೆ, ಚಿಕಿತ್ಸೆಗೆ ಡೋನರ್ ಗಳ ಕೊರತೆ ಎದುರಾಗಿದ್ದು, ಇದೇ ಮೊದಲ ಬಾರಿಗೆ ರಾಜ್ಯದ ಇಬ್ಬರು ವ್ಯಕ್ತಿಗಳು ಪ್ಲಾಸ್ಮಾ ದಾನ ಮಾಡಲು ಮುಂದಾಗಿದ್ದಾರೆ. 

ಕೊರೋನಾ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆದು ಇದೀಗ ಗುಣಮುಖರಾಗಿರುವ ಬೆಂಗಳೂರು ಮೂಲಕ 40 ವರ್ಷದ ವ್ಯಕ್ತಿಯ ದೇಹಲಿಂದ ಪ್ಲಾಸ್ಮಾ ತೆಗೆಯಲಾಗುತ್ತಿದೆ. ರಾಜ್ಯದಲ್ಲಿ ಪ್ಲಾಸ್ಮಾ ಡೊನೇಟ್ ಮಾಡಲುವ ಮೂಲಕ ಮೊದಲ ವ್ಯಕ್ತಿ ಇವರಾಗಲಿದ್ದಾರೆ. 

ಕೇರಳ ಮೂಲದ ಇರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಇತ್ತೀಚೆಗಷ್ಟೇ ದುಬೈನಿಂದ ಬೆಂಗಳೂರಿಗೆ ಬಂದಿದ್ದರು. ಇವರಿಗೆ ಈ ವೇಳೆ ಸೋಂಕು ಪತ್ತೆಯಾಗಿದ್ದು, ಪ್ರಸ್ತುತ ಸೋಂಕಿನಿಂದ ಗುಣಮುಖರಾಗಿ ಪ್ಲಾಸ್ಮಾ ದಾನ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಒಂದ ಬಾರಿ ಪ್ಲಾಸ್ಮಾ ದಾನ ಮಾಡಿದ್ದು, ಇದೀಗ ಇನ್ನೆರೆಡು ವಾರಗಳಲ್ಲಿ ಮತ್ತೆ ಪ್ಲಾಸ್ಮಾ ದಾನ ಮಾಡುವುದಾಗಿ ತಿಳಿಸಿದ್ದಾರೆ. 

ಏಪ್ರಿಲ್ 14 ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದೆ. ಪ್ಲಾಸ್ಮಾ ಥೆರಲಿಯನ್ನು ಡಾ.ವಿಶಾಲ್ ರಾವ್ ಅವರು ನಡೆಸುತ್ತಿದ್ದಾರೆಂಬ ಮಾಹಿತಿ ತಿಳಿಯಿತು. ಹೀಗಾಗಿ ಅವರನ್ನು ಸಂಪರ್ಕಿಸಿ, ನಾನೇ ಸ್ವಯಂ ಪ್ರೇರಿತನಾಗಿ ಪ್ಲಾಸ್ಮಾ ದಾನ ಮಾಡಲು ಮುಂದಾಗಿದ್ದೇನೆ. ಕೊರೋನಾಗೆ ಇನ್ನೂ ಯಾವುದೇ ಚಿಕಿತ್ಸೆಗಳೂ ಬಂದಿಲ್ಲ. ಚಿಂತಾಜನಕ ಸ್ಥಿತಿಯಲ್ಲಿರುವ ಜನರಿಗೆ ನನ್ನಿಂದ ಜೀವ ಉಳಿಯುತ್ತಿದೆ ಎಂದರೆ, ನಾನು ಅದೃಷ್ಟವಂತನೆಂದುಕೊಳ್ಳುತ್ತೇನೆ. ಗುಣಮುಖರಾಗಿರುವ ಮತ್ತಷ್ಟು ಜನರೂ ಕೂಡ ದಾನ ಮಾಡಲು ಮುಂದೆ ಬಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ. 

ಆರಂಭದಲ್ಲಿ ಕೆಲ ಹಿಂಜರಿಕೆಗಳು ಇದ್ದೇ ಇರುತ್ತದೆ. ನಾನು ಮೊದಲ ದಾನಿಯಾಗಿದ್ದೆ. ಆದರೂ, ಎಲ್ಲಾ ಪ್ರಕ್ರಿಯೆಗಳೂ ಮೃದುವಾಗಿಯೇ ನಡೆದವು. ಎಲ್ಲವೂ ಸೇರಿ ಗಂಟೆಯಷ್ಟು ಕಾಲ ಹಿಡಿಯಿತು. ದಾನ ಮಾಡಿದ ಬಳಿಕ ನಿಶಕ್ತಿ ಭಾಸವೇನೂ ಆಗಲಿಲ್ಲ. ಎರಡು ವಾರಗಳ ಬಳಿಕ ಮತ್ತೆ ದಾನ ಮಾಡಬಹುದು ಎಂದು ಹೇಳಿದ್ದಾರೆ. ಮತ್ತೆ ದಾನ ಮಾಡುತ್ತೇನೆಂದು ತಿಳಿಸಿದ್ದಾರೆ. 

ಈ ನಡುವೆ ಸ್ವಿಟ್ಜರ್ಲ್ಯಾಂಡ್ ನಿಂದ ಮಾರ್ಚ್ 9 ರಂದು ಬಂದಿದ್ದ ಮಹಿಳೆಯೊಬ್ಬರಲ್ಲಿ ಮಾರ್ಚ್ 18 ರಂದು ಕೊರೋನಾ ಲಕ್ಷಣಗಳು ಕಂಡು ಬಂದಿದ್ದು, ಏಪ್ರಿಲ್ 6 ರಂದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೊರೋನ ಲಕ್ಷಣಗಳಾವುದೂ ಕಂಡು ಬಂದಿರಲಿಲ್ಲ. ಆದರೆ, ನಿಶಕ್ತಿಯಾಗುತ್ತಿತ್ತು. ವಾಸನೆ ಹಾಗೂ ರುಚಿಗಳಾವುದೂ ಗೊತ್ತಾಗುತ್ತಿರಲಿಲ್ಲ. ಹೀಗಾಗಿ ನಾನೇ ಸ್ವಯಂಪ್ರೇರಿತಳಾಗಿ ಪರೀಕ್ಷೆಗೊಳಗಾಗಿದ್ದೆ. ಸೋಮವಾರ ಡಾ.ವಿಶಾಲ್ ರಾವ್ ಅವರಿಂದ ಕರೆ ಬಂದಿತ್ತು. ದಾನ ಮಾಡುವ ಬಗ್ಗೆ ಮಾಹಿತಿ ನೀಡಿದ್ದರು. ಕೂಡಲೇ ನಾನೂ ಒಪ್ಪಿಗೆ ನೀಡಿದೆ. ಎಲ್ಲಾ ಪ್ರಕ್ರಿಯೆ ಮುಗಿಯಲು 40 ನಿಮಿಷ ಕಾಲಾವಕಾಶ ಬೇಕಾಯಿತು. ತುಂಬಾ ನೋವಾಗಲಿಲ್ಲ ಎಂದು ತಿಳಿಸಿದ್ದಾರೆ. 

ನನ್ನಿಂದ ಒಬ್ಬರ ಜೀವ ಉಳಿಯುತ್ತದೆ ಎಂದರೆ, ದಾನ ಮಾಡಲು ನಾನು ಸಿದ್ಧಳಿದ್ದೇನೆ. ಮತ್ತೊಮ್ಮೆ ದಾನ ಮಾಡಬಹುದು ಎಂದು ನನಗೆ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ, ಮತ್ತಷ್ಟು ಗುಣಮುಖರಾಗಿರುವ ವ್ಯಕ್ತಿಗಳೂ ಕೂಡ ಹೀಗೆಯೇ ಮುಂದೆ ಬಂದರೆ ಉತ್ತಮವಾಗಿರುತ್ತದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com