ಚಿಕ್ಕೋಡಿ; ಭಾರೀ ಗಾಳಿಗೆ ಶೆಡ್ ಕುಸಿದು 3 ಸಾವಿರಕ್ಕೂ ಅಧಿಕ ಕೋಳಿಗಳು ಸಾವು

ಬಿರುಗಾಳಿ ಸಹಿತ ಭಾರೀ ಮಳೆಗೆ ಸುಮಾರು 3 ಸಾವಿರಕ್ಕೂ ಅಧಿಕ ಕೋಳಿಗಳು ಸಾವನ್ನಪ್ಪಿದ ಧಾರುಣ ಘಟನೆ ಚಿಕ್ಕೋಡಿಯಲ್ಲಿ ಸಂಭವಿಸಿದೆ.
ಗಾಳಿಗೆ ಕುಸಿದ ಕೋಳಿ ಫಾರ್ಮ್ ಶೆಡ್
ಗಾಳಿಗೆ ಕುಸಿದ ಕೋಳಿ ಫಾರ್ಮ್ ಶೆಡ್

ಚಿಕ್ಕೋಡಿ: ಬಿರುಗಾಳಿ ಸಹಿತ ಭಾರೀ ಮಳೆಗೆ ಸುಮಾರು 3 ಸಾವಿರಕ್ಕೂ ಅಧಿಕ ಕೋಳಿಗಳು ಸಾವನ್ನಪ್ಪಿದ ಧಾರುಣ ಘಟನೆ ಚಿಕ್ಕೋಡಿಯಲ್ಲಿ ಸಂಭವಿಸಿದೆ.

ಚಿಕ್ಕೋಡಿಯ ನಿಪ್ಪಾಣಿ ತಾಲೂಕಿನ ಅಮಲ್ಜರಿ ಗ್ರಾಮದಲ್ಲಿ ನಡೆದಿದ್ದು, ಸುಮಾರು 10 ಸಾವಿರಕ್ಕೂ ಅಧಿಕ ಕೋಳಿಗಳಿದ್ದ ಕೋಳ್ ಫಾರ್ಮ್ ನ ಒಂದು ಭಾಗ ಕುಸಿದ ಪರಿಣಾಮ ಸ್ಥಳದಲ್ಲಿಯೇ 3 ಸಾವಿರಕ್ಕಿಂತ ಹೆಚ್ಚು ಕೋಳಿಗಳು ಮೃತಪಟ್ಟಿವೆ.

ಬೆಳಿಗ್ಗೆಯಿಂದ ಭೀಕರ ಬಿಸಿಲಿನಿಂದ ಚಿಕ್ಕೋಡಿ ಜಿಲ್ಲೆ ತತ್ತರಿಸಿತ್ತು. ಆದರೆ ಸಂಜೆ ಆಗುತ್ತಿದ್ದಂತೆ ಮಳೆ ಬರುವ ನಿರೀಕ್ಷೆ ಇತ್ತು. ಆದರೆ ಭೀಕರ ಗಾಳಿ ಜೊತೆ ಅಲ್ಪ ಪ್ರಮಾಣದ ಮಳೆ ಬಿದ್ದರಿಂದ ಶೆಡ್ ನಲ್ಲಿ ನಿರ್ಮಾಣವಾಗಿದ್ದ ಫಾರ್ಮ್ ನಲ್ಲಿದ್ದ ಕೋಳಿಗಳು ಸಾವನ್ನಪ್ಪಿವೆ. ಭಾರಿ ಗಾಳಿಗೆ  ಕೋಳಿಗಳನ್ನು ಇಡಲಾಗಿದ್ದ ಶೆಡ್ ಕುಸಿದಿದ್ದು, ಶೆಡ್ ನಡಿಯಲ್ಲಿದ್ದ ಕೋಳಿಗಳು ಸಾವನ್ನಪ್ಪಿವೆ.

ರಮೇಶ ರಾಮಲಿಂಗೇ ಎಂಬುವರಿಗೆ ಸೇರಿದ ಕೋಳಿ ಫಾರ್ಮ್ ಇದಾಗಿದ್ದು, ಸುಮಾರು ೩೦ ಲಕ್ಷ ರೂಪಾಯಿ ನಷ್ಟವಾಗಿದೆ. ಇನ್ನೇನು ಮಾರಾಟ ಮಾಡಲು ಮುಂದಾಗುವ ಹೊತ್ತಿನಲ್ಲಿ ಇಂತಹ ದುರ್ಘಟನೆ ನಡೆದಿದ್ದು ಬೇಸರ ವ್ಯಕ್ತ ಪಡಿಸಿದ್ದಾನೆ. ಕೊರೋನಾ ಎಪೆಕ್ಟ್ ನಿಂದ ಕೋಳಿ ಫಾರ್ಮ್  ಜೀವ ಇಲ್ಲದಂತ್ತಾಗಿತ್ತು. ಆದರೆ ಈಗ ಕೋಳಿ ಫಾರ್ಮ್ ಗೆ ಮತ್ತಷ್ಟು ಹೊಡೆತದಿಂದ ಸಾಲದ ಸುಳಿಯಲ್ಲಿ ರೈತ ಸಿಲುಕಿಕೊಂಡಿದ್ದು ತಾಲೂಕಾಡಳಿತ ಹಾಗೂ ಜಿಲ್ಲಾಡಳಿತ ಯಾವ ರೀತಿ ಸಹಾಯ ಮಾಡುತ್ತದೆ ಕಾದು ನೋಡಬೇಕಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com