ಕೊರೋನಾ: ಮೈಸೂರು ಬಳಿಕ ಮಂಗಳೂರಿನಲ್ಲೂ ಮೊಬೈಲ್ ಕ್ಲಿನಿಕ್ ಆಗಿ ಪರಿವರ್ತನೆಗೊಂಡ ಕೆಎಸ್ಆರ್'ಟಿಸಿ ಬಸ್

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಈ ಹಿಂದೆ ಮೈಸೂರಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಕೆ ನಿಗಮ ಪ್ರಯಾಣಿಕ ಬಸ್ ವೊಂದನ್ನು ಮೊಬೈಲ್ ಕ್ಲಿನಿಕ್ ಆಗಿ ಪರಿವರ್ತಿಸಿತ್ತು. ಇದೀಗ ಮಂಗಳೂರಿನಲ್ಲಿಯೂ ಅದೇ ರೀತಿ ಕೆಎಸ್ಆರ್'ಟಿಸಿ ಬಸ್ಸನ್ನು ಮೊಬೈಲ್ ಕ್ಲಿನಿಕ್ ಆಗಿ ಪರಿವರ್ತಿಸಲಾಗಿದೆ. 
ಮೊಬೈಲ್ ಕ್ಲಿನಿಕ್ ಆಗಿ ಪರಿವರ್ತನೆಗೊಂಡ ಕೆಎಸ್ಆರ್'ಟಿಸಿ ಬಸ್
ಮೊಬೈಲ್ ಕ್ಲಿನಿಕ್ ಆಗಿ ಪರಿವರ್ತನೆಗೊಂಡ ಕೆಎಸ್ಆರ್'ಟಿಸಿ ಬಸ್

ಮಂಗಳೂರು: ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಈ ಹಿಂದೆ ಮೈಸೂರಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಕೆ ನಿಗಮ ಪ್ರಯಾಣಿಕ ಬಸ್ ವೊಂದನ್ನು ಮೊಬೈಲ್ ಕ್ಲಿನಿಕ್ ಆಗಿ ಪರಿವರ್ತಿಸಿತ್ತು. ಇದೀಗ ಮಂಗಳೂರಿನಲ್ಲಿಯೂ ಅದೇ ರೀತಿ ಕೆಎಸ್ಆರ್'ಟಿಸಿ ಬಸ್ಸನ್ನು ಮೊಬೈಲ್ ಕ್ಲಿನಿಕ್ ಆಗಿ ಪರಿವರ್ತಿಸಲಾಗಿದೆ. 

ಕೊರೋನಾ ವಿರುದ್ಧ ಹೋರಾಡುವ ಸಲುವಾಗಿ ಸರ್ಕಾರ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸುತ್ತಿದ್ದು, ಇದರಂತೆ ಸೋಂಕಿತರಿಗೆ ಚಿಕಿತ್ಸೆ ನೀಡಲು ಸುಲಭವಾಗಲು ಬಸ್ ಗಳನ್ನು ಮೊಬೈಲ್ ಕ್ಲಿನಿಕ್ ಗಳನ್ನಾಗಿ ಪರಿವರ್ತಿಸುತ್ತಿದೆ. 

ಸುಮಾರು ರೂ.50,000 ವೆಚ್ಚದಲ್ಲಿ ಈ ಬಸ್ ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡಿರುವ ಈ ವಿಶೇಷ ಬಸ್ಸಿನಲ್ಲಿ ವೈದ್ಯರಿಗೆ ಪ್ರತ್ಯೇಕ ಕ್ಯಾಬಿನ್, ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಔಷಧಿ ಬಾಕ್ಸ್, ಕೈತೊಳೆದುಕೊಳ್ಳಲು ವಾಷ್ ಬೇಸಿನ್, ಸ್ಯಾನಿಟೈಸರ್, ಸೋಪ್ ಆಯಿಲ್, ಪ್ರತ್ಯೇತ ನೀರಿನ ವ್ಯವಸ್ಥೆ, ಫ್ಯಾನ್ ನ್ನು ಅಳವಡಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com