ಪೊಲೀಸ್ ಕಾರಿನ ಮೇಲೆ ಕಲ್ಲು ತೂರಿ ಆರೋಪಿಗಳು ಪರಾರಿ

ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಕೋಲಾರ ಜಿಲ್ಲಾ ಪಂಚಾಯತ್ ರಸ್ತೆಯ ಅರಹಳ್ಳಿ ಗೇಟ್ ಬಳಿ ಶುಕ್ರವಾರ ರಾತ್ರಿ ನಡೆದಿದೆ.
ಪೋಲೀಸ್ ಫೈರಿಂಗ್
ಪೋಲೀಸ್ ಫೈರಿಂಗ್

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಕೋಲಾರ ಜಿಲ್ಲಾ ಪಂಚಾಯತ್ ರಸ್ತೆಯ ಅರಹಳ್ಳಿ ಗೇಟ್ ಬಳಿ ಶುಕ್ರವಾರ ರಾತ್ರಿ ನಡೆದಿದೆ.

ಡಿಸಿಪಿ ಶಶಿಕುಮಾರ್ ಈ ಕುರಿತು ಪ್ರತಿಕ್ರಿಯಿಸಿ, ನಂದಿನಿ ಲೇಔಟ್ ಠಾಣೆ ಎಸ್ಐ ನವೀದ್ ಅವರು, ಸಿಬ್ಬಂದಿಯೊಂದಿಗೆ ಕೊಲೆ ಹಾಗೂ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲು ಖಾಸಗಿ ಕಾರಿನಲ್ಲಿ ಕೋಲಾರಕ್ಕೆ ತೆರಳಿದ್ದರು.

ಮತ್ತೊಂದು ಕಾರಿನಲ್ಲಿ ಬಂದಿದ್ದ ಆರೋಪಿಗಳು ಅರಹಳ್ಳಿ ಗೇಟ್ ಬಳಿ ವಾಹನ ನಿಲ್ಲಿಸಿ ಕೆಳಗಿಳಿದಿದ್ದರು. ನಂತರ ಅವರನ್ನು ಬಂಧಿಸಲು ಪೊಲೀಸರು ಮುಂದಾದಾಗ ಆರೋಪಿಗಳು ಪರಾರಿಯಾಗಲು ಯತ್ನಿಸಿ ಡ್ರಾಗರ್ ನಿಂದ ಮುಖ್ಯ ಪೇದೆ ಸಿದ್ದರಾಮಣ್ಣ ಸೇರಿ ಇಬ್ಬರೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ಆತ್ಮರಕ್ಷಣೆಗಾಗಿ ಸಿದ್ದರಾಮಣ್ಣ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಆರೋಪಿಗಳಿಗೆ ಶರಣಾಗುವಂತೆ ಸೂಚಿಸಿದ್ದರು. ಆದರೆ, ಇದ್ಯಾವುದನ್ನು ಲೆಕ್ಕಿಸದ ಆರೋಪಿಗಳು ಮತ್ತೆ ಪೊಲೀಸರ ಕಾರಿನ ಮೇಲೆ ಕಲ್ಲು ತೂರಿ ಪರಾರಿಯಾಗಿದ್ದಾರೆ ಎಂದು ಅವರು ತಿಳಿಸಿದರು.

ನಂದಿನಿ ಲೇಔಟ್ ಠಾಣೆ ಎಸ್ ಐ ನವೀದ್ ಮತ್ತು ಪೊಲೀಸ್ ಸಿಬ್ಬಂದಿ ಸಮವಸ್ತ್ರ ಧರಿಸದೆ ಮಫ್ತಿಯಲ್ಲಿದ್ದರು. ಪರಾರಿಯಾದ ದುಷ್ಕರ್ಮಿಗಳು ಮೊದಲಿಗೆ ಯುವಕನೊಬ್ಬನಿಗೆ ಬೆದರಿಸಿ ಬೈಕ್ ಕಸಿದುಕೊಂಡು ಪರಾರಿಯಾಗಿದ್ದು, ಸ್ವಲ್ಪ ದೂರ ತೆರಳಿದ ನಂತರ ಆ ಬೈಕ್ ಸರಿಯಿಲ್ಲ ಎಂಬ ಕಾರಣಕ್ಕೆ ಮತ್ತೊಂದು ಬೈಕ್ ದೋಚಿ ಪರಾರಿಯಾಗಿದ್ದರು ಎಂದು ಅವರು ತಿಳಿಸಿದರು.

ಪರಾರಿಯಾಗಿರುವ ದುಷ್ಕರ್ಮಿಗಳ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ. ಎನ್ ಕೌಂಟರ್ ಆಗಿದ್ದ ಸ್ಲಂ ಭರತ್ ನ ಕಡೆಯವರಿಂದ ಬೆದರಿಕೆಯಿರುವ ಕಾರಣಕ್ಕೆ ಮುಖ್ಯ ಪೇದೆ ಸಿದ್ದರಾಮಣ್ಣ ಅವರಿಗೆ ಇಲಾಖೆಯಿಂದ ರಿವಲ್ವಾರ್ ನೀಡಲಾಗಿತ್ತು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com