ಕೊರೋನಾ ಕಾಲದಲ್ಲಿ ಹೆಚ್ಚಿದ ಕೃಷಿ ಚಟುವಟಿಕೆ: ರಾಜ್ಯದಲ್ಲಿ ಅಧಿಕ ಫಸಲಿನ ನಿರೀಕ್ಷೆ

ಕೊರೋನಾ ಲಾಕ್ ಡೌನ್ ಕೆಲವರ ಪಾಲಿಗೆ ಶಾಪವಾಗಿದ್ದರೇ ಮತ್ತೆ ಕೆಲವರ ಪಾಲಿಗೆ ವರವಾಗಿದೆ, ಮುಂಗಾರು ಉತ್ತಮವಾಗಿದ್ದು, ರೈತರು ಬಿತ್ತನೆ ಕಾರ್ಯದಲ್ಲಿ ಮುಳುಗಿದ್ದಾರೆ, ಖಾರೀಫ್ ಋತುವಿನಲ್ಲಿ ಕೃಷಿ ಚಟುವಟಿಕೆಗಳು ಸಕ್ರಿಯವಾಗಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೋನಾ ಲಾಕ್ ಡೌನ್ ಕೆಲವರ ಪಾಲಿಗೆ ಶಾಪವಾಗಿದ್ದರೇ ಮತ್ತೆ ಕೆಲವರ ಪಾಲಿಗೆ ವರವಾಗಿದೆ, ಮುಂಗಾರು ಉತ್ತಮವಾಗಿದ್ದು, ರೈತರು ಬಿತ್ತನೆ ಕಾರ್ಯದಲ್ಲಿ ಮುಳುಗಿದ್ದಾರೆ, ಖಾರೀಫ್ ಋತುವಿನಲ್ಲಿ ಕೃಷಿ ಚಟುವಟಿಕೆಗಳು ಸಕ್ರಿಯವಾಗಿವೆ.

ರಾಜ್ಯ ಕೃಷಿ ಇಲಾಖೆಯ ಅಂಕಿ ಅಂಶಳ ಪ್ರಕಾರ 73 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಈಗಾಗಲೇ 50 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಕಾರ್ಯ ನಡೆದಿದೆ ಎಂದು ತಿಳಿಸಿದೆ.  ಶೇ. 68 ರಷ್ಟು ಗುರಿ ಪೂರೈಸುವ ಉದ್ದೇಶ ಹೊಂದಿದೆ.

ರಾಜ್ಯವು ಮಳೆಗಾಲದ ಎರಡನೇ ತಿಂಗಳಲ್ಲಿದೆ ಮತ್ತು ಮುಂದಿನ ಎರಡು ವಾರಗಳಲ್ಲಿ ಅವರು ಉದ್ದೇಶಿತ ಬಿತ್ತನೆ ಪ್ರಮಾಣ ಮುಟ್ಟಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಜುಲೈ ತಿಂಗಳ ಅಂತ್ಯದವರೆಗೆ 44.99 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ನಡೆದಿತ್ತು. ಆದರೆ ಈ ವರ್ಷ  ಲಕ್ಷ ಹೆಕ್ಟೇರ್ ಹೆಚ್ಚುವರಿ ಬಿತ್ತನೆಯಾಗಿದೆ.

ವಲಸೆ ಬಂದವರಿಂದ ಹಳ್ಳಿಗಳಲ್ಲಿ ಬಿತ್ತನೆ ಕೆಲಸ ಹೆಚ್ಚಿದೆ. ವಲಸೆ ಬಂದ ಕಾರ್ಮಿಕರು ಹಳ್ಳಿಗಳಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ, ಹೀಗಾಗಿ ಹಲವು ವರ್ಷಗಳಿಂದ ಕೃಷಿ ಕೆಲಸ ನಡೆಯದೇ ಉಳಿದಿದ್ದ ಭೂಮಿಯಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತಿವೆ. ಈ ಬಾರೀ 73 ಲಕ್ಷ ಹೆಕ್ಟೇರ್ ಭೂಮಿಯಲ್ಲು ಕೃಷಿ ಚಟುವಟಿಕೆ ನಡೆಯುವ ಗುರಿ ಹೊಂದಲಾಗಿದೆ
ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಬಾರಿ ಕೃಷಿ ಕಾರ್ಮಿಕರು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿರುವುದರಿಂದ ಈ ಬಾರಿ ಉತ್ತಮ ಬೆಳೆಯಾಗುವ ಸಾಧ್ಯತೆಯಿದೆ ಎಂದು ಸಚಿವ ಕೃಷಿ ಪಾಟೀಲ್ ತಿಳಿಸಿದ್ದಾರೆ. ಇದು ಕೃಷಿಕರಿಗೆ ಉತ್ತಮವಾಗಿದ್ದು ಉತ್ತಮ ಬೆಳೆ ಬೆಳೆಯಾಗುವ ನೀರಿಕ್ಷೆಯಿದೆ ಎಂದು ತಿಳಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ ಇದು ಕೇವಲ 30 ಲಕ್ಷ ಹೆಕ್ಟೇರ್ ಮತ್ತು 50 ಲಕ್ಷ ಹೆಕ್ಟೇರ್ ನಡುವೆ ಇತ್ತು. ಪ್ರತಿ ವರ್ಷ, ಮಾನ್ಸೂನ್ ಅಥವಾ ಕಡಿಮೆ ಮಳೆಯ ಪ್ರಾರಂಭದಲ್ಲಿ ವಿಳಂಬ ಉಂಟಾಗುತ್ತದೆ, ಇದರ ಪರಿಣಾಮವಾಗಿ ಬಿತ್ತನೆ ಕಡಿಮೆ ಪ್ರದೇಶವಾಗುತ್ತದೆ ಆದರೆ ಈ ವರ್ಷ ಉತ್ತಮ ಮಳೆಯಾಗಿದ್ದು ಕೃಷಿ ಕಾರ್ಮಿಕರು ಲಭ್ಯವಿರುವ ಕಾರಣ ಉತ್ತಮ ಫಸಲು ನಿರೀಕ್ಷೆ ಮಾಡಲಾಗಿದೆ ಎಂದು ಬೆಂಗಳೂರು ಕೃಷಿ ವಿವಿ ನಿವೃತ್ತ ರಿಜಿಸ್ಟ್ರಾರ್ ಪ್ರೊ. ರಾಜೇಗೌಡ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com