ಮೊಬೈಲ್ ಬಳಸಬೇಡವೆಂದು ಬುದ್ಧಿ ಹೇಳಿದ್ದಕ್ಕೆ ತಾಯಿಯನ್ನು ಕೊಂದ ಮಗ.!

ಹೆಚ್ಚಾಗಿ ಮೊಬೈಲ್ ಫೋನ್ ಬಳಸಬೇಡ, ಓದಿನ ಕಡೆಗೆ ಗಮನಕೊಡು ಕಟ್ಟವರ ಸಹವಾಸ ಬಿಡು ಅಂತ ಬುದ್ಧಿ ಹೇಳಿದ ತಾಯಿಯನ್ನೇ ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿ ಮಗನನ್ನು ಶುಕ್ರವಾರ ಮಂಡ್ಯದ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಡ್ಯ: ಹೆಚ್ಚಾಗಿ ಮೊಬೈಲ್ ಫೋನ್ ಬಳಸಬೇಡ, ಓದಿನ ಕಡೆಗೆ ಗಮನಕೊಡು ಕಟ್ಟವರ ಸಹವಾಸ ಬಿಡು ಅಂತ ಬುದ್ಧಿ ಹೇಳಿದ ತಾಯಿಯನ್ನೇ ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿ ಮಗನನ್ನು ಶುಕ್ರವಾರ ಮಂಡ್ಯದ ಪೊಲೀಸರು ಬಂಧಿಸಿದ್ದಾರೆ.

ಮನು ಶರ್ಮಾ (21) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಈತ ಮಾಜಿ ಸಂಸದೆ ರಮ್ಯಾ ಮನೆ ಪಕ್ಕದಲ್ಲಿನ ವಿದ್ಯಾನಗರ ಕೆ.ಆರ್.ರಸ್ತೆಯ ಮನೆಯೊಂದರಲ್ಲಿ ವಾಸವಿದ್ದ ತನ್ನ ತಾಯಿ ಶ್ರೀ ಲಕ್ಷ್ಮಿ (46)ಯನ್ನು ಕಳೆದ ಜು.29 ರಂದು ಕೊಲೆ ಮಾಡಿ ಪರಾರಿಯಾಗಿದ್ದ.

ಘಟನೆ ಜುಲೈ 29ರಂದು ನಡೆದಿದ್ದು, ಜುಲೈ 30ರಂದು ಬೆಳಕಿಗೆ ಬಂದಿತ್ತು. ಮನೆಯ ಮಾಲೀಕ ರಮೇಶ್ ಜುಲೈ 30ರಂದು ನೀಡಿದ್ದ ದೂರಿನನ್ವಯ ನಗರದ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ಆರೋಪಿಯ ಬೆನ್ನಟ್ಟಿದ ಪೊಲೀಸರು ಮನುಶರ್ಮಾನನ್ನು ಶುಕ್ರವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಬಿಎಂ ವಿದ್ಯಾರ್ಥಿಯಾಗಿದ್ದ ಮನುಶರ್ಮನಿಗೆ ತಾಯಿ ಶ್ರೀಲಕ್ಷ್ಮಿ ಮೊಬೈಲ್ ಬಳಸದಂತೆ ನಿರ್ಬಂಧ ವಿಧಿಸಿದ್ದರು. ಪೋಲಿ ಸ್ನೇಹಿತರ ಜೊತೆ ಸಹವಾಸ ಬಿಡುವಂತೆ ತಿಳಿಸುತ್ತಿದ್ದರು, ಬುದ್ಧಿ ಹೇಳುತ್ತಿದ್ದರು. ಅಂತೆಯೇ ಜು.29 ರಂದು ಸಹ ತಾಯಿ ಶ್ರೀಲಕ್ಷ್ಮಿ ಮಗ ಮನುಶರ್ಮನಿಂದ ಪೋನ್ ಕಸಿದುಕೊಂಡು ಬುದ್ದಿ ಹೇಳುತ್ತಿದ್ದರು, ಇದರಿಂದ ಕೋಪಗೊಂಡು ತರಕಾರಿ ಕತ್ತರಿಸುವ ಚಾಕುವಿನಿಂದ ಇರಿದು ಮತ್ತು ಚಕ್ಕಲಿಹೊರಳಿನಿಂದ ತಲೆಗೆ ಹೊಡೆದು,ಕೊಲೆ ಮಾಡಿದ್ದಾಗಿ ಆರೋಪಿ ಮನುಶರ್ಮಾ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com