ರಕ್ಷಾ ಬಂಧನ ಸಮಯದಲ್ಲಿ ಸೋದರ-ಸೋದರಿಯರ ಮಧ್ಯೆ ಬೆಸುಗೆ ಹೆಚ್ಚಿಸಿದ ಅಂಚೆ ಕಚೇರಿಯ 'ರಾಖಿ ಪೋಸ್ಟ್'

ನಾಳೆ ರಕ್ಷಾಬಂಧನ, ಈ ಹಿನ್ನೆಲೆಯಲ್ಲಿ ಲಡಾಕ್ ಗಡಿಭಾಗದಲ್ಲಿರುವ 99 ಮಂದಿ ಸೈನಿಕರು ಸೇರಿದಂತೆ ಸೋದರರಿಗೆ 1,990 ಸಹೋದರಿಯರು ರಾಖಿ ಕಳುಹಿಸಿದ್ದಾರೆ. ನಾಳೆಯೇ ಪೋಸ್ಟ್ ನಲ್ಲಿ ರಾಖಿ ತಲುಪಲು ದೇಶಾದ್ಯಂತ ಇಂದು ಅಂಚೆ ಕಚೇರಿಯಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಾಳೆ ರಕ್ಷಾಬಂಧನ, ಈ ಹಿನ್ನೆಲೆಯಲ್ಲಿ ಲಡಾಕ್ ಗಡಿಭಾಗದಲ್ಲಿರುವ 99 ಮಂದಿ ಸೈನಿಕರು ಸೇರಿದಂತೆ ಸೋದರರಿಗೆ 1,990 ಸಹೋದರಿಯರು ರಾಖಿ ಕಳುಹಿಸಿದ್ದಾರೆ. ನಾಳೆಯೇ ಪೋಸ್ಟ್ ನಲ್ಲಿ ರಾಖಿ ತಲುಪಲು ದೇಶಾದ್ಯಂತ ಇಂದು ಅಂಚೆ ಕಚೇರಿಯಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ರಾಖಿ ಪೋಸ್ಟನ್ನು ಜುಲೈ 26ರಂದು ಆರಂಭಿಸಲಾಗಿದ್ದು 30ಕ್ಕೆ ಕೊನೆಮಾಡಲಾಗಿತ್ತು. ಕೇವಲ 5 ದಿನಗಳಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ಬಂದಿದ್ದು ಕೋವಿಡ್-19 ಸಮಯದಲ್ಲಿ ಜನರು ಹೊರಗೆ ಹೋಗಿ ಅಂಗಡಿಗಳಿಂದ ರಾಖಿ ಕಳುಹಿಸುವ ಬದಲು ಪೋಸ್ಟ್ ನಲ್ಲಿ ರಾಖಿ ಕಳುಹಿಸುವುದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಬೆಂಗಳೂರು ವಿಭಾಗದ ಪೋಸ್ಟ್ ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಬಾಬು ಹೇಳಿದ್ದಾರೆ.

ಈ ವರ್ಷ ಇನ್ನು ಉಳಿದ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಗಿಫ್ಟ್ ಮತ್ತು ಪಾರ್ಸೆಲ್ ಸೇವೆಗಳನ್ನು ಸಹ ಆರಂಭಿಸಲು ಇಲಾಖೆ ಚಿಂತನೆ ನಡೆಸುತ್ತಿದೆ ಎಂದರು.

ಕೋವಿಡ್-19 ಸಮಯದಲ್ಲಿ ಹೊರಗೆ ಹೋಗಿ ರಾಖಿ ಖರೀದಿಸಲು ಸಾಧ್ಯವಾಗದಿರುವವರಿಗೆ ಅಂಚೆ ಕಚೇರಿ ಈ ರೀತಿ ಆನ್ ಲೈನ್ ಖರೀದಿಸಿ ತಮ್ಮ ಪ್ರೀತಿಯ ಸೋದರರಿಗೆ ಕಳುಹಿಸುವ ಅವಕಾಶ ಮಾಡಿಕೊಟ್ಟಿರುವುದು ಉಪಯೋಗವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com