ಮಂಡ್ಯ: ದೇವರ ಗರ್ಭಗುಡಿಯಲ್ಲೇ ಪೂಜಾರಿ ಸಾವು

ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದ ವೇಳೆ ಗರ್ಭಗುಡಿಯಲ್ಲೇ ಪೂಜಾರಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮಂಡ್ಯ ತಾಲೂಕಿನ ಮಂಗಲ ಗ್ರಾಮದಲ್ಲಿ ಜರುಗಿದೆ.

Published: 02nd August 2020 01:08 AM  |   Last Updated: 02nd August 2020 01:14 AM   |  A+A-


Priest falls to death while performing Malleshwara Swamy temple rituals in Mandya

ದೇವರ ಗರ್ಭಗುಡಿಯಲ್ಲೇ ಪೂಜಾರಿ ಸಾವು

Posted By : Srinivas Rao BV
Source : RC Network

ಮಂಡ್ಯ: ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದ ವೇಳೆ ಗರ್ಭಗುಡಿಯಲ್ಲೇ ಪೂಜಾರಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮಂಡ್ಯ ತಾಲೂಕಿನ ಮಂಗಲ ಗ್ರಾಮದಲ್ಲಿ ಜರುಗಿದೆ.

ಮಲ್ಲೇಶ್ವರಸ್ವಾಮಿ ದೇವಸ್ಥಾನದ ಪೂಜಾರಿ ಚಂದ್ರಶೇಖರ್(45) ಮೃತಪಟ್ಟವರಾಗಿದ್ದಾರೆ.

ಮೂಲಯಃ ಸಂತೇ ಕಸಲಗೆರೆಯ ನಿವಾಸಿಯಾದ ಚಂದ್ರಶೇಖರ್ ಹಲವು ವರ್ಷಗಳಿಂದ ಮಂಗಲ ಗ್ರಾಮದಲ್ಲಿನ ಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜಾರಿಯಾಗಿದ್ದು ದೇವರ ಸೇವಾಕಾಯಕ ಮಾಡುತ್ತಿದ್ದರು, ವರಮಹಾಲಕ್ಷ್ಮಿ ಹಬ್ಬದ ದಿನವಾದ ಶುಕ್ರವಾರ ಮಧ್ಯಾಹ್ನ ದೇವಾಯದಲ್ಲಿ ಮಲ್ಲೇಶ್ವರಸ್ವಾಮಿಗೆ ಪೂಜೆ ಮಾಡುತ್ತಿದ್ದರು, ಈ ವೇಳೆ, ಗರ್ಭಗುಡಿಯಲ್ಲೇ ಎದೆ ನೋವು ಕಾಣಿಸಿಕೊಂಡು ಬಿದ್ದಿದ್ದಾರೆ. ಇದನ್ನು ಕಂಡ ಸ್ಥಳಿಯ ಭಕ್ತರು ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿದ್ದಾರೆ.

ಮೃತ ಚಂದ್ರು ಅವರಿಗೆ ಪತ್ನಿ ಹಾಗೂ ಐವರು ಸೋದರಿಯರು ಇದ್ದಾರೆ. ಸುಮಾರು 12 ವರ್ಷದ ಹಿಂದೆ ಮದುವೆಯಾಗಿದ್ದ ಚಂದ್ರಶೇಖರ್‌ಗೆ ಮಕ್ಕಳಾಗಿರಲಿಲ್ಲ. ಇದೇ ಕೊರಗಿನಲ್ಲಿದ್ದ ದಂಪತಿಯು ಮಗುವೊಂದನ್ನು ದತ್ತು ತೆಗೆದುಕೊಳ್ಳುವ ಆಲೋಚನೆಯಲ್ಲಿದ್ದರು. ಆದರೆ, ಆ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಚಂದ್ರು ಸಾವನ್ನಪ್ಪಿದ್ದಾರೆ.

ವರದಿ ನಾಗಯ್ಯ

Stay up to date on all the latest ರಾಜ್ಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp