ರಾಜ್ಯದಲ್ಲಿ ಏರುತ್ತಲೇ ಇದೆ ಕೊರೋನಾ ಆರ್ಭಟ: 1.29 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ ಕೊರೋನಾ ವೈರಸ್ ಆರ್ಭಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಜುಲೈ ಒಂದೇ ತಿಂಗಳಿನಲ್ಲಿ 1 ಲಕ್ಷ ಕೊರೋನಾ ಕೇಸ್ ದಾಖಲಾಗಿದೆ. ಈ ನಡುವೆ ಆಗಸ್ಟ್ ತಿಂಗಳಿನಲ್ಲಿಯೂ ಕೊರೋನಾ ಸ್ಫೋಟಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಆರ್ಭಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಜುಲೈ ಒಂದೇ ತಿಂಗಳಿನಲ್ಲಿ 1 ಲಕ್ಷ ಕೊರೋನಾ ಕೇಸ್ ದಾಖಲಾಗಿದೆ. ಈ ನಡುವೆ ಆಗಸ್ಟ್ ತಿಂಗಳಿನಲ್ಲಿಯೂ ಕೊರೋನಾ ಸ್ಫೋಟಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. 

ಆಗಸ್ಟ್ ತಿಂಗಳ ಮೊದಲ ದಿನವಾದ ಶನಿವಾರ ಒಂದೇ ದಿನ ರಾಜ್ಯದಲ್ಲಿ 5,172 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,29,287ಕ್ಕೆ ಏರಿಕೆಯಾಗಿದೆ. 

ಸೋಂಕು ಪೀಡಿತರ ಹಿಸ್ಟರಿ ಹಾಗೂ ಪ್ರಾಥಮಿಕ, ದ್ವಿತೀಯ ಸಂಪರ್ಕಗಳನ್ನು ಪತ್ತೆಹಚ್ಚಲು ಸಾಧ್ಯವಾಗದ ಇನ್ನೂ 47,947 ಪ್ರಕರಣಗಳಿದ್ದು, ಈ ಪ್ರಕರಣಗಳ ತನಿಖೆ ಇನ್ಮನೂ ಪ್ರಗತಿಯಲ್ಲಿದೆ. ಈ ಪೈಕಿ 12,604 ಐಎಲ್ಐ, 2,698 ಸಾರಿ ಪ್ರಕರಣಗಳೆಂದು ಹೇಳಲಾಗುತ್ತಿದೆ. 

ರಾಜ್ಯದ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಪರೀಕ್ಷೆಗಳಿಗೆ ಹೋಲಿಸಿದರೆ, ಬೆಂಗಳೂರಿನಲ್ಲಿಯೇ ಅತಿ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಕಳೆದ 10 ದಿನಗಳಲ್ಲಿ ಪ್ರತಿ ಮಿಲಿಯನ್‌ಗೆ 8,571 ಪರೀಕ್ಷೆಗಳು ನಡೆದಿವೆ. ಬೆಂಗಳೂರಿನಲ್ಲಿ ನಿನ್ನೆ 1,852 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಮೈಸೂರು 365, ಬಳ್ಳಾರಿ 269, ಕಲಬುರಗಿ 219 ಮತ್ತು ಬೆಳಗಾವಿಯಲ್ಲಿ (219) ಪ್ರಕರಣಗಳು ದಾಖಲಾಗಿವೆ. 

ಇನ್ನು ನಿನ್ನೆ ಒಂದೇ ದಿನ ರಾಜ್ಯದಲ್ಲಿ 98 ಸಾವುಗಳು ಸಂಭವಿಸಿದ್ದು, ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ 2,412 ಕ್ಕೆ ತಲುಪಿದೆ. ಶಿವಮೊಗ್ಗದ 96 ವರ್ಷದ ವೃದ್ಧ, ಧಾರವಾಡದ 34 ವರ್ಷದ ಸಾರಿ ರೋಗದಿಂದ ಬಳಲುತ್ತಿದ್ದ ವ್ಯಕ್ತಿ ಶನಿವಾರ ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿನ್ನೂ ಮರಣ ಪ್ರಮಾಣ ಶೇಕಡ 1 ಕ್ಕಿಂತ ಹೆಚ್ಚಾಗಿಯೇ ಇದ್ದು, ಪ್ರಸ್ತುತ ರಾಜ್ಯದಲ್ಲಿ ಮರಣ ಪ್ರಮಾಣ ಶೇಕಡಾ 1.87 ರಷ್ಟಿದೆ.

ಈ ನಡುವ 602 ರೋಗಿಗಳು ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿದ್ದಾರೆಂದು ಘೋಷಿಸಲಾಗಿದ್ದು, ಇವರಿಗೆ ಐಸಿಯುಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಅವರಲ್ಲಿ 338 ಮಂದಿ ಬೆಂಗಳೂರಿನವರಾಗಿದ್ದಾರೆಂದು ಹೇಳಲಾಗುತ್ತಿದೆ. ಇನ್ನು ರಾಜ್ಯದಲ್ಲಿ ಚೇತರಿಕೆ ಪ್ರಮಾಣವು ಶೇಕಡಾ 41.52 ರಷ್ಟಿದ್ದು, ನಿಧಾನಗತಿಯಲ್ಲಿ ಈ ಸಂಖ್ಯೆ ಏರಿಕೆಯಾಗುತ್ತಿದೆ. ಶನಿವಾರ ಒಂದೇ ದಿನ 3,860 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com