ಬಿಟ್​ಕಾಯಿನ್ ನಲ್ಲಿ ಲಾಭದ ಆಸೆ ಹುಟ್ಟಿಸುವ ದಂಧೆ ಸಕ್ರಿಯ: ಯುವಕನಿಗೆ 85 ಸಾವಿರ ರೂ. ವಂಚನೆ

ಬಿಟ್‌ ಕಾಯಿನ್ ಅಥವಾ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಮುಗ್ಧ ಜನರನ್ನು ವಂಚಿಸುವ ಬೃಹತ್ ಜಾಲವೊಂದು ರಾಜಧಾನಿ ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಕಾರ್ಯಾಚರಿಸುತ್ತಿದ್ದು, ಹಲವು ನಿರುದ್ಯೋಗಿಗಳು ಹಣದ ಆಸೆಗಾಗಿ ಬಲಿಯಾಗುತ್ತಿದ್ದಾರೆ.

Published: 03rd August 2020 02:50 PM  |   Last Updated: 03rd August 2020 02:50 PM   |  A+A-


1 lakh Income Tax notices sent to Bitcoin investors

ಸಾಂದರ್ಭಿಕ ಚಿತ್ರ

Posted By : Lingaraj Badiger
Source : UNI

ಬೆಂಗಳೂರು: ಬಿಟ್‌ ಕಾಯಿನ್ ಅಥವಾ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಮುಗ್ಧ ಜನರನ್ನು ವಂಚಿಸುವ ಬೃಹತ್ ಜಾಲವೊಂದು ರಾಜಧಾನಿ ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಕಾರ್ಯಾಚರಿಸುತ್ತಿದ್ದು, ಹಲವು ನಿರುದ್ಯೋಗಿಗಳು ಹಣದ ಆಸೆಗಾಗಿ ಬಲಿಯಾಗುತ್ತಿದ್ದಾರೆ.

ಸಾಮಾಜಿಕ ಜಾಲತಾಣ ಮೂಲಕ ಯುವಕನ ಸ್ನೇಹ ಬೆಳೆಸಿ ಬಿಟ್​ಕಾಯಿನ್ ರೂಪದಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಗಳಿಸುವ ಆಸೆ ಹುಟ್ಟಿಸಿ 85 ಸಾವಿರ ರೂ. ವಂಚಿಸಿರುವ ಖದೀಮನ ಪತ್ತೆಗೆ ದಕ್ಷಿಣ ವಿಭಾಗ ಸೈಬರ್ ಕ್ರೈಂ ಪೊಲೀಸರು ಶೋಧ ನಡೆಸಿದ್ದಾರೆ.

ಟಿ.ಆರ್.ನಗರ ನಿವಾಸಿ ಶ್ರೀಗಣೇಶ್ ಗೆ. ಟೆಲಿಗ್ರಾಂ ಆಪ್​ನಲ್ಲಿ ಅಪರಿಚಿತರು ಯುವಕನನ್ನು ಸಂರ್ಪಸಿದ್ದರು. 'ಕ್ರಿಪೋ› ಕರೆನ್ಸಿ ಖರೀದಿಸಿ ಅದನ್ನು ಬಿಟ್​ಕಾಯಿನ್ ರೂಪದಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿದ್ದರು. ನಂತರ ಶ್ರೀಗಣೇಶ್ ಹಂತಹಂತವಾಗಿ 85 ಸಾವಿರ ರೂ. ವರ್ಗಾವಣೆ ಮಾಡಿದ್ದ. ಹಣ ಸಂದಾಯದ ಬಳಿಕ ಆರೋಪಿಗಳು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ದೂರು ನೀಡಿದ್ದು, ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ ತಿಂಗಳಿಗೆ 25 ಸಾವಿರದಿಂದ 50 ಸಾವಿರ ರೂಪಾಯಿವರೆಗೆ ಹಣ ಸಂಪಾದಿಸಬಹುದು ಎಂಬ ಸಂದೇಶ ವಾಟ್ಸಪ್‌ಗೆ ಬರುತ್ತದೆ. ಝೂಮ್ ಆಪ್‌ನಲ್ಲಿ ನಡೆಯುವ ತರಗತಿಗೆ ಕುಳಿತುಕೊಂಡರೆ ಆಪ್‌ ಡೌನ್‌ ಲೋಡ್ ಮಾಡುವ ಕುಳಿತು ತಿಳಿಸಿಕೊಡಲಾಗುತ್ತದೆ. 2400 ರೂಪಾಯಿ ನೋಂದಣಿ ಶುಲ್ಕ ಪಾವತಿಸಿ ಅದಕ್ಕೆ ಸೇರಿದ ಬಳಿಕ ಇನ್ನಷ್ಟು ಜನರನ್ನು ಸೇರಿಸಬೇಕು. 

ಜನ ಹೆಚ್ಚಾದಂತೆ ನಿಮ್ಮ ವರ್ಜುವಲ್ ಖಾತೆಗೆ ಹಣ ಬರುತ್ತದೆ. ಅದನ್ನು ನಿರ್ದಿಷ್ಟ ಬಿಟ್ ಕಾಯಿಲ್ ಬ್ಯಾಂಕುಗಳಲ್ಲಿ ನಗದೀಕರಿಸಬಹುದು ಎಂದು ಹೇಳಲಾಗುತ್ತದೆ. 

ಇದನ್ನು ನಂಬಿ ಹಲವು ಯುವಕರು ಹಣ ತೊಡಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಇಲ್ಲಿ ಅಪರಿಚಿತ ವ್ಯಕ್ತಿಗಳೇ ಇರುವುದರಿಂದ ವಿಶ್ವಾಸಾರ್ಹತೆ ಪ್ರಶ್ನೆ ಉದ್ಘವಿಸುವುದೇ ಇಲ್ಲ. ಎಲ್ಲವೂ ಆನ್‌ಲೈನ್‌ ನಲ್ಲಿ ನಡೆಯುವುದರಿಂದ ಎಲ್ಲವೂ ಗೌಪ್ಯವಾಗಿರುತ್ತದೆ.

Stay up to date on all the latest ರಾಜ್ಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp