ಶಿವಾಜಿನಗರದ ಬ್ರಾಡ್‌ವೇ ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ!

ಬೆಂಗಳೂರು ನಗರದಲ್ಲಿ ಕೋವಿಡ್‌ ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ಶಿವಾಜಿನಗರದ ಬ್ರಾಡ್‌ವೇ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಒದಗಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
ಬ್ರಾಡ್‌ವೇ ಆಸ್ಪತ್ರೆ
ಬ್ರಾಡ್‌ವೇ ಆಸ್ಪತ್ರೆ

ಬೆಂಗಳೂರು: ಬೆಂಗಳೂರು ನಗರದಲ್ಲಿ ಕೋವಿಡ್‌ ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ಶಿವಾಜಿನಗರದ ಬ್ರಾಡ್‌ವೇ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಒದಗಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

ಮುಂದಿನ ಎರಡು ವಾರಗಳಲ್ಲಿ ಆಸ್ಪತ್ರೆಯಲ್ಲಿ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ದೊರೆಯಲಿದೆ. ಈಗಾಗಲೇ ವಿಕ್ಟೋರಿಯಾ, ಬೌರಿಂಗ್ ಸೇರಿದಂತೆ 16 ಸರ್ಕಾರಿ ಆಸ್ಪತ್ರೆಗಳನ್ನು ಸೋಂಕಿತರ ಚಿಕಿತ್ಸೆಗೆ ಮೀಸಲಿರಿಸಲಾಗಿದೆ.

ಶಿವಾಜಿನಗರದ ಬ್ರಾಡ್‌ವೇ ಆಸ್ಪತ್ರೆಯು ಕೊರೋನಾ ವ್ಯವಸ್ಥೆಗೆ ಮಾರ್ಪಡಿಸಲು ಸಿದ್ಧವಾಗಿದೆ. ಇದೀಗ ಆಸ್ಪತ್ರೆಯಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳಿವೆ. ಮುಂದಿನ 12-15 ದಿನಗಳಲ್ಲಿ ಕಾರ್ಯಾರಂಭ ಆರಂಭವಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ. 

ಆಸ್ಪತ್ರೆಗೆ ನಿನ್ನೆಯಷ್ಟೇ ಭೇಟಿ ನೀಡಿದ ಅವರು ಪರಿಶೀಲನೆ ನಡೆಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡಲು 160 ಹಾಸಿಗೆ ವ್ಯವಸ್ಥೆಗಳಿವೆ. ಜೊತೆಗೆ ಆಕ್ಸಿಜನ್ ಸೌಲಭ್ಯ ಕೂಡ ಇದೆ. ತುರ್ತು ನಿಗಾಘಟಕದಲ್ಲಿ 30 ಹಾಸಿಗೆಗಳಿವೆ. ಇದರ ಸಮರ್ಪಕ ನಿರ್ವಹಣೆಗೆ ಅಗತ್ಯವಿರುವ ಸಿಬ್ಬಿಂದಿಗಳನ್ನು ನಿಯೋಜಿಸಲಾಗಿದ್ದು, ಇದಕ್ಕೆ ಅಗತ್ಯ ಮೂಲಕ ಸೌಕರ್ಯ ಒದಗಿಸಲು ನೆರವಾದ ಇನ್ಫೋಸಿಸ್ ಪ್ರತಿಷ್ಠಾನ ಮುಖ್ಯಸ್ಥರಾದ ಡಾ.ಸುಧಾಮೂರ್ತಿಯವರಿಗೆ ಸರ್ಕಾರದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆಂದು ತಿಳಿಸಿದ್ದಾರೆ. 

ಆಸ್ಪತ್ರೆಯಲ್ಲಿ ವೈದ್ಯರು, 60 ನರ್ಸ್'ಗಳು ಮತ್ತು ಮೂವರು ನರ್ಸಿಂಗ್ ಅಧೀಕ್ಷಕರು, ಆರು ಲ್ಯಾಬ್ ತಂತ್ರಜ್ಞರು, ಮೂವರು ವಿಕಿರಣಶಾಸ್ತ್ರ ತಂತ್ರಜ್ಞರು, 60 ಗ್ರೂಪ್ ಡಿ ಸಿಬ್ಬಂದಿ ಮತ್ತು 15 ಭದ್ರತಾ ಸಿಬ್ಬಂದಿ ಅಗತ್ಯವಿದೆ. ಅತೀವ್ರ ಸೋಂಕಿನಿಂದ ಬಳಲುತ್ತಿರುವವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಇದಕ್ಕಾಗಿ ಅಗತ್ಯ ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುತ್ತಿದೆ. “ಈ ವರೆಗೂ, ನರ್ಸ್ ಗಳು, ನರ್ಸಿಂಗ್ ಅಧೀಕ್ಷಕರು, ಗ್ರೂಪ್ ಡಿ ಸಿಬ್ಬಂದಿ, ವಿಕಿರಣಶಾಸ್ತ್ರ ತಂತ್ರಜ್ಞರು ಮತ್ತು ಭದ್ರತಾ ಸಿಬ್ಬಂದಿಯನ್ನು ಪಡೆದುಕೊಂಡಿದ್ದೇವೆ. ಆದರೆ ವೈದ್ಯರ ಕೊರತೆಯಿದೆ ಎಂದಿದ್ದಾರೆ.

66 ವೈದ್ಯರ ಅಗತ್ಯವಿದೆ. ಈಗಾಗಲೇ 6 ಮಂದಿ ವೈದ್ಯರು ಸೇರ್ಪಡೆಗೊಂಡಿದ್ದಾರೆ. ಇದೀಗ ಅರವಳಿಕೆ ತಜ್ಞರು, ವೈದ್ಯರು, ಕ್ರಿಟಿಕಲ್ ಕೇರ್ ಯುನಿಟ್ ವೈದ್ಯರು, ಕರ್ತವ್ಯನಿರತ ವೈದ್ಯರು ಹಾಗೂ ಇತರೆ ವೈದ್ಯರುಗಳ ಅಗತ್ಯವಿದೆ. ಎಲ್ಲರನ್ನೂ ಗುತ್ತಿಗೆ ಆಧಾರದ ಮೇಲೆ ಸೇರ್ಪಡೆಗೊಳಿಸಲಾಗುತ್ತಿದೆ. ಅಗತ್ಯಬಿದ್ದರೆ, ಖಾಸಗಿ ಆಸ್ಪತ್ರೆಗಳ ವೈದ್ಯರನ್ನು ಸೇರ್ಪಡೆಗೊಳಿಸಲಾಗುತ್ತದೆ. ಶೀಘ್ರದಲ್ಲೇ ಆಸ್ಪತ್ರೆಯ ಕಾರ್ಯಾರಂಭವಾಗುತ್ತದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com