ಸೆವೆನ್ ಹಿಲ್ಸ್ ಕಂಪನಿಯಿಂದ ಮೋಸ ಹೋದ ಹೂಡಿಕೆದಾರರು ದೂರು ನೀಡಲು ಮನವಿ

ಕೋಲಾರ ಮೂಲದ ಸೆವೆನ್ ಹಿಲ್ಸ್ ವಿವಿಧೋದ್ದೇಶ ಸೌಹಾರ್ದ ಕೋ-ಅಪರೇಟಿವ್ ಪ್ರೈ ಲಿಮಿಟೆಡ್ ನಲ್ಲಿ ಹಣ ಹೂಡಿಕೆದಾರರಿಗೆ ಮೋಸ ಮಾಡಲಾಗಿದೆ ಎಂದು ಆರೋಪಿಸಿ ದೂರು ದಾಖಲಾಗಿದೆ.

Published: 03rd August 2020 03:13 PM  |   Last Updated: 03rd August 2020 03:13 PM   |  A+A-


seven1

ಸಾಂದರ್ಭಿಕ ಚಿತ್ರ

Posted By : Lingaraj Badiger
Source : UNI

ಬೆಂಗಳೂರು: ಕೋಲಾರ ಮೂಲದ ಸೆವೆನ್ ಹಿಲ್ಸ್ ವಿವಿಧೋದ್ದೇಶ ಸೌಹಾರ್ದ ಕೋ-ಅಪರೇಟಿವ್ ಪ್ರೈ ಲಿಮಿಟೆಡ್ ನಲ್ಲಿ ಹಣ ಹೂಡಿಕೆದಾರರಿಗೆ ಮೋಸ ಮಾಡಲಾಗಿದೆ ಎಂದು ಆರೋಪಿಸಿ ದೂರು ದಾಖಲಾಗಿದೆ.

ಕಂಪನಿಯ ಅಧ್ಯಕ್ಷರು ಹಾಗೂ ನಿರ್ದೇಶಕರು ಹೂಡಿಕೆದಾರರಿಗೆ ಹಣ ವಾಪಸ್ಸು ನೀಡದೇ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಮಾಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಸೆವೆನ್ ಹಿಲ್ಸ್ ಕಂಪನಿಯ ಅಧ್ಯಕ್ಷ ಮತ್ತು ನಿರ್ದೇಶಕರು ವಿರುದ್ಧ ಹೂಡಿಕೆದಾರರಿಂದ ಒಟ್ಟು 14 ಪ್ರಕರಣಗಳು ದಾಖಲಾಗಿವೆ.

ಪಿಗ್ಮಿ, ಆರ್ ಡಿ, ಎಫ್ ಡಿ ಹಾಗೂ ವಿದ್ಯಾ ಯೋಜನೆ ಮತ್ತು ಕಲ್ಯಾಣ ಯೋಜನೆ ಹಾಗೂ ಇತರೆ ಯೋಜನೆಗಳಡಿಯಲ್ಲಿ ಹಣ ಹೂಡಿಕೆ ಮಾಡಲಾಗಿದ್ದು, ಹಣ ವಾಪಸ್ಸು ನೀಡದೇ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ತನಿಖೆಯನ್ನು ‌ಸಿಐಡಿ ಹೆಗಲಿಗೆ ನೀಡಲಾಗಿದೆ‌.

ಆದ್ದರಿಂದ ಸೆವೆನ್ ಹಿಲ್ಸ್ ವಿವಿಧೋದ್ದೇಶ ಸೌಹಾರ್ದ ಕೋ-ಅಪರೇಟಿವ್ ಪ್ರೈ ಲಿಮಿಟೆಡ್ ನಲ್ಲಿ ಹೂಡಿಕೆ ಮಾಡಿ ಮೋಸ ಹೊಂದಿದ ಗ್ರಾಹಕರು ಪೊಲೀಸ್ ಉಪಾಧೀಕ್ಷಕರು ಸತ್ಯವತಿ ಎಸ್, ಆರ್ಥಿಕ ಅಪರಾಧಗಳ ವಿಭಾಗ, ಆನೆಕ್ಸ್-2 ಬಿಲ್ಡಿಂಗ್, ಸಿಐಡಿ ಬೆಂಗಳೂರು‌ ಈ ವಿಳಾಸಕ್ಕೆ ಬಂದು ದೂರು ನೀಡಲು ಸೂಚಿಸಲಾಗಿದೆ.

Stay up to date on all the latest ರಾಜ್ಯ news
Poll
Babri Masjid

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp