ಮುಖ್ಯಮಂತ್ರಿಗೆ ಕೊರೋನಾ ಪಾಸಿಟಿವ್: ಕ್ವಾರಂಟೈನ್ ಗೆ ಒಳಗಾದ ರಾಜ್ಯಪಾಲರು, ಸಚಿವರು

ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಆಪ್ತ ಕಾರ್ಯದರ್ಶಿ, ಸಹಾಯಕರು, ಭದ್ರತಾ ಸಿಬ್ಬಂದಿಗೆ ಕೊರೋನಾ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಅವರ ಸಂಪರ್ಕಕ್ಕೆ ಬಂದಿದ್ದ ವರಿಗೆ ಕೊರೋನಾ ತಾಪಾಸಣೆ ನಡೆಸಲಾಗುತ್ತಿದೆ.
ವಜೂಬಾಯಿ ವಾಲಾ
ವಜೂಬಾಯಿ ವಾಲಾ

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಆಪ್ತ ಕಾರ್ಯದರ್ಶಿ, ಸಹಾಯಕರು, ಭದ್ರತಾ ಸಿಬ್ಬಂದಿಗೆ ಕೊರೋನಾ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಅವರ ಸಂಪರ್ಕಕ್ಕೆ ಬಂದಿದ್ದ ವರಿಗೆ ಕೊರೋನಾ ತಾಪಾಸಣೆ ನಡೆಸಲಾಗುತ್ತಿದೆ.

ರಾಜ್ಯಪಾಲ ವಜೂಬಾಯಿ ವಾಲಾ ಅವರು ಆಪ್ತ ಕಾರ್ಯದರ್ಶಿ ಕೊರೋನಾ ಟೆಸ್ಟಿಂಗ್ ಒಳಗಾಗಿದ್ದು ಅವರಿಗೆ ಕೊರೋನಾ ನೆಗೇಟಿವ್ ವರದಿ ಬಂದಿದೆ.ಆದರೂ ಒಂದು ವಾರಗಳ ಕಾಲ ಕ್ವಾರಂಟೈನ್ ಒಳಗಾಗುತ್ತಿರುವುದಾಗಿ ರಾಜಭವನದ ಪತ್ರಿಕಾ ಪ್ರಕಟಣೆ ಮಾಹಿತಿ ನೀಡಿದೆ.

ಇನ್ನು ಕಳೆದ ಕೆಲ ದಿನಗಳಿಂದ ಮುಖ್ಯಮಂತ್ರಿ ಅವರ ನೇರ ಸಂಪರ್ಕಕ್ಕೆ ಒಳಗಾಗಿದ್ದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಆಟಿಜೆಟ್ ಟೆಸ್ಟಿಂಗ್ ಒಳಗಾಗಿದ್ದು ಕೊರೋನಾ ನೆಗೇಟಿವ್ ವರದಿ ಬಂದಿದೆ. ಜೊತೆಗೆ ನಾಲ್ಕು ದಿನ ಗಳು ಕ್ವಾರಂಟೈನ್ ಒಳಗಾಗುವುದಾಗಿ ಅವರು ತಿಳಿಸಿದ್ದಾರೆ.

ಕಂದಾಯ ಸಚಿವ ಆರ್.ಅಶೋಕ್, ನಗರಾಭಿವೃದ್ದಿ ಸಚಿವ ಬಿ.ಎ.ಬಸವರಾಜ್ ಅವರು ಸೆಲ್ಫ್ ಕ್ವಾರಂಟೈನ್ ಒಳ ಗಾಗಿದ್ದಾರೆ.ಆದರೆ ಡಿಸಿಎಂ ಡಾ.ಅಶ್ವಥ್ ನಾರಾಯಣ್, ಡಿಸಿಎಂ ಲಕ್ಷ್ಮಣ್ ಸವದಿ, ಡಿಸಿಎಂ ಗೋವಿಂದ ಕಾರಜೋಳ ಕ್ವಾರಂಟೈನ್ ಗೆ ಒಳಗಾಗಿಲ್ಲ ಎನ್ನಲಾಗಿದೆ.

ಮುಖ್ಯಮಂತ್ರಿ ಅವರ ನೇರ ಸಂಪರ್ಕಕ್ಕೆ ಒಳಗಾಗಿರುವ ಮುಖ್ಯ ಕಾರ್ಯದರ್ಶಿ,ಅಪರ ಮುಖ್ಯಕಾರ್ಯದರ್ಶಿ, ಡಿಜಿಪಿ ಪ್ರವೀಣ್ ಸೂದ್, ಗುಪ್ತಚರ ಎಡಿಜಿಪಿ, ಹಾಗೂ ಇತರೆ ಅಧಿಕಾರಿಗಳು ಕ್ವಾರಂಟೈನ್ ಗಗೆ ಒಳಗಾಗದೆ ಕರ್ತವ್ಯ ನಿರ್ವಹಿಸುತ್ತಿರುವುದು ಮಾಹಿತಿ ಇದೆ.

ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿ ಮುಖ್ಯಮಂತ್ರಿ ಭೇಟಿ ಮಾಡಿದ ಕಮಲ್ ಪಂತ್ ಸೆಲ್ಫ್ ಕ್ವಾರಂಟೈನ್ ಒಳಗಾಗಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com