ಕೊರೋನಾ ಸಂದರ್ಭದಲ್ಲೂ 52 ಹೆರಿಗೆ: ಸೋಂಕಿತ ಮಹಿಳೆಯರ ಡೆಲಿವರಿ ಮಾಡಿಸಿ ಹೆಗ್ಗಳಿಕೆಗೆ ಪಾತ್ರವಾದ ಮೈಸೂರು ಆಸ್ಪತ್ರೆ!

ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಅದರಲ್ಲೂ ಕೊರೋನಾ ಬಂದ್ಮೇಲಂತೂ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಒಂದಿಲ್ಲೊಂದು ಭಯಾನಕ ವರದಿಗಳು ಬರುತ್ತಲೇ ಇವೆ. ಆದರೆ. ಇಲ್ಲೆದರ ನಡುವೆ 52 ಸೋಂಕಿತರ ಮಹಿಳೆಯರಿಗೆ ಹೆರಿಗೆ ಮಾಡಿಸಿದ ಹೆಗ್ಗಳಿಕೆಗೆ ಮೈಸೂರು ಆಸ್ಪತ್ರೆ ಪಾತ್ರವಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಅದರಲ್ಲೂ ಕೊರೋನಾ ಬಂದ್ಮೇಲಂತೂ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಒಂದಿಲ್ಲೊಂದು ಭಯಾನಕ ವರದಿಗಳು ಬರುತ್ತಲೇ ಇವೆ. ಆದರೆ. ಇಲ್ಲೆದರ ನಡುವೆ 52 ಸೋಂಕಿತರ ಮಹಿಳೆಯರಿಗೆ ಹೆರಿಗೆ ಮಾಡಿಸಿದ ಹೆಗ್ಗಳಿಕೆಗೆ ಮೈಸೂರು ಆಸ್ಪತ್ರೆ ಪಾತ್ರವಾಗಿದೆ. 

ಮೈಸೂರಿನ ವಿವಿ ಪುರಂ ನಲ್ಲಿರುವ ಸರ್ಕಾರಿ ಹೆರಿಗೆ ಆಸ್ಪತ್ರೆ ಕಳೆದ ಒಂದೂವರೆ ತಿಂಗಳಿನಿಂದ 52 ಮಂದಿ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ್ದು, ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡುವಂತೆ ಮಾಡಿದೆ. 

ಕೊರೋನಾ ಸೋಂಕು ವ್ಯಾಪಕವಾಗುತ್ತಿದ್ದ ಹಿನ್ನೆಲೆಯಲ್ಲಿ ನಗರ ಲಕ್ಷ್ಮಿ ದೇವಮ್ಮ ಶಂಕರಶೆಟ್ಟಿ ಹೆರಿಗೆ ಆಸ್ಪತ್ರೆಯನ್ನು ಕೋವಿಡ್ ಕೇರ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿತ್ತು. ಆಸ್ಪತ್ರೆಯಲ್ಲಿ ಸೋಂಕಿತ ಗರ್ಭಿಣಿಯರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಈ ವರೆಗೂ ಈ ಆಸ್ಪತ್ರೆಯಲ್ಲಿ 77 ಮಂದಿ ಸೋಂಕಿತರ ಗರ್ಭಿಣಿಯರಿಗೆ ಹೆರಿಗೆ ಮಾಡಿಸಲಾಗಿದೆ. 

ಈ ಆಸ್ಪತ್ರೆಯಲ್ಲಿ ಕೇವಲ 30 ಹಾಸಿಗೆಯಷ್ಟೇ ಇದ್ದು, ಜೂ.20 ರಂದು ದಾಖಲಾಗಲು ಬಂದಿದ್ದ ಗರ್ಭಿಣಿ ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಮಹಿಳೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದು, ಜು.31ರವರೆಗೆ 52 ಮಹಿಳೆಯರಿಗೆ ಆಸ್ಪತ್ರೆ ಹೆರಿಗೆ ಮಾಡಿಸಿದೆ. ಇದರಲ್ಲಿ 41 ಮಹಿಳೆಯರಿಗೆ ಸಿ-ಸೆಕ್ಷನ್ ಮೂಲಕ ಡೆಲಿವರಿ ಮಾಡಿಸಲಾಗಿದೆ. 

ಸ್ತ್ರೀರೋಗತಜ್ಞರು, ಶಸ್ತ್ರಚಿಕಿತ್ಸಕರು, ಅರಿವಳಿಕೆ ತಜ್ಞರು ಮತ್ತು ಮಕ್ಕಳ ವೈದ್ಯರ ತಂಡವು ತರಬೇತಿ ಪಡೆದ ನರ್ಸ್ ಗಳೊಂದಿಗೆ ಸೇವೆಯನ್ನು ನೀಡುತ್ತಿದೆ. ವೈರಸ್ ಜೊತೆಗಿರುವುದು ಮತ್ತು ಆಸ್ಪತ್ರೆಯಲ್ಲಿರುವ ಸೀಮಿತ ವಸ್ತುಗಳುಮತ್ತು ಸಾಧನಗಳನ್ನು ಬಳಸಿಕೊಂಡು ನರ್ಸ್'ಗಳು ಮತ್ತು ವೈದ್ಯರಿಗೆ ಕೆಲಸ ಮಾಡುವುದು ಅಷ್ಟು ಸುಲಭವಾಗಿರುವುದಿಲ್ಲ. ಈಗಾಗಲೇ ಆಸ್ಪತ್ರೆಯ ಇಬ್ಬರು ಸಿಬ್ಬಂದಿಗಳಲ್ಲಿ ಕೊರೋನಾ ಪಾಸಿಟಿವ್ ಬಂದಿದ್ದು, ಕ್ವಾರಂಟೈನ್ ನಲ್ಲಿದ್ದಾರೆಂದು ಆಸ್ಪತ್ರೆಯ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ. 

ಹೋಂ ಐಸೋಲೇಷನ್ ಅವಧಿಯನ್ನು ಪೂರ್ಣಗೊಳಿಸಿದ್ದು, ಇದೀಗ ಅವರು ಮತ್ತೆ ಕೆಲಸಕ್ಕೆ ಮರು ಸೇರ್ಪಡೆಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಈಗಲೂ 55 ವರ್ಷಕ್ಕೂ ಮೇಲ್ಪಟ್ಟ ನರ್ಸ್ ಗಳು ಕೆಲಸ ಮಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಕೊರೋನಾದಿಂದ ಈ ವರೆಗೂ ಒಂದೇ ಒಂದು ಸಾವು ಕೂಡ ಸಂಭವಿಸಿಲ್ಲ ಎಂದು ಡಾ.ಮಾಲತಿಯವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com