ಪಾಟ್ ಹೋಲ್ ರಾಜಾ ಕೆಲಸ
ಪಾಟ್ ಹೋಲ್ ರಾಜಾ ಕೆಲಸ

ಬೆಂಗಳೂರು ರಸ್ತೆಗುಂಡಿಗಳಿಗೆ ಮುಕ್ತಿ ನೀಡಲು ಬಂದ 'ಪಾಟ್ ಹೋಲ್ ರಾಜ'

ಮಳೆಗಾಲ, ಬಾಯಿತೆರೆದು ಅಪಾಯಕ್ಕೆ ಆಹ್ವಾನ ನೀಡುತ್ತಿರುವ ರಸ್ತೆಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಹರಸಾಹಸ ಪಡುತ್ತಿರುವ ಹೊತ್ತಿನಲ್ಲೇ ಬೆಂಗಳೂರು ಮೂಲದ ಸಂಸ್ಥೆಯೊಂದು ರಸ್ತೆಗುಂಡಿಗಳನ್ನು ಮುಚ್ಚುವ ಕಾಯಕ ಮಾಡುತ್ತಿದೆ.

ಬೆಂಗಳೂರು: ಮಳೆಗಾಲ, ಬಾಯಿತೆರೆದು ಅಪಾಯಕ್ಕೆ ಆಹ್ವಾನ ನೀಡುತ್ತಿರುವ ರಸ್ತೆಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಹರಸಾಹಸ ಪಡುತ್ತಿರುವ ಹೊತ್ತಿನಲ್ಲೇ ಬೆಂಗಳೂರು ಮೂಲದ ಸಂಸ್ಥೆಯೊಂದು ರಸ್ತೆಗುಂಡಿಗಳನ್ನು ಮುಚ್ಚುವ ಕಾಯಕ ಮಾಡುತ್ತಿದೆ.

ಹೌದು..ರಸ್ತೆ ಗುಂಡಿ ವಿಚಾರವಾಗಿ ಕೋರ್ಟ್ ನಿಂದ ಯಾವಾಗಲೂ ಬೈಸಿಕೊಳ್ಳುವ ಬಿಬಿಎಂಪಿ ರಸ್ತೆಗುಂಡಿಗಳನ್ನು ಮುಚ್ಚಲು ವರ್ಷಂ ಪ್ರತಿ ಹರಸಾಹಸ ಪಡುತ್ತಿರುತ್ತದೆ. ಆದರೆ ಇಲ್ಲೊಂದು ಸ್ವಯಂ ಸೇವಕ ಸಂಸ್ಥೆ ಸದ್ದಿಲ್ಲದೇ ರಸ್ತೆಗುಂಡಿಗಳನ್ನು ಮುಚ್ಚುವ ಕಾಯಕ ಮಾಡುತ್ತಿದೆ. 'ಪಾಟ್ ಹೋಲ್ ರಾಜ' ಎಂಬ  ಸಂಸ್ಥೆಯು ರಸ್ತೆಗುಂಡಿಗಳನ್ನು ಮುಚ್ಚುವ ಕಾಯಕ ಮಾಡುತ್ತಿದ್ದು, ಭಾರತದ ವಾಯುಸೇನಯಲ್ಲಿ ಪೈಲಟ್ ಆಗಿದ್ದ ಪ್ರತಾಪ್ ಭೀಮಸೇನ ರಾವ್ ಈ ಸಂಸ್ಥೆ ಸ್ಥಾಪಿಸಿದ್ದಾರೆ. ಈ ಸಂಸ್ಥೆ ಮೂಲಕ ಸಾರ್ವಜನಿಕರಿಂದಲೇ ಹಣ ಸಂಗ್ರಹಿಸಿ ರಸ್ತೆಯ ಹೊಂಡಗಳನ್ನು ಮುಚ್ಚುವ ಕಾರ್ಯದಲ್ಲಿ ಈ ತಂಡ ನಿರತವಾಗಿದೆ. 

ಈ ಬಗ್ಗೆ ಮಾತನಾಡಿರುವ ಪಾಟ್ ಹೋಲ್ ರಾಜಾ ಸಂಸ್ಥೆಯ ಸಹ ಸಂಸ್ಥಾಪಕ ಸೌರಭ್ ಕುಮಾರ್ ಅವರು, ಕಳೆದ ಮೂರು ವರ್ಷಗಳಿಂದ ನಾವು ಈ ಕಾರ್ಯವನ್ನು ಮಾಡುತ್ತಿದ್ದೇವೆ. ಪ್ರತೀ ಬಾರಿ ಗುಂಡಿ ಮುಚ್ಚಿದಾಗಲೂ ಏನೋ ತಿಳಿಯಿದ ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ. ಅಂತೆಯೇ ಇದೊಂದು ಲಾಭ  ರಹಿತ ಸಂಸ್ಥೆಯಾಗಿದ್ದು, ದೇಶದಲ್ಲಿರುವ ರಸ್ತೆಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು ನಮ್ಮ ಗುರಿಯಾಗಿದೆ. ಅಷ್ಟೇ ಅಲ್ಲ ನಮ್ಮ ಈ ಕಾರ್ಯದಿಂದ ಕೆಲಸ ಕಳೆದುಕೊಂಡ ನೀಲಿ ಕಾಲರ್ ಕೆಲಸಗಾರರಿಗೂ ಕೆಲಸ ಸಿಕ್ಕಂತಾಗುತ್ತದೆ. ಲಾಕ್ ಡೌನ್ ಸಂದರ್ಭದಲ್ಲಿ ಸಾಕಷ್ಟು ಮಂದಿ  ಉದ್ಯೋಗ ಕಳೆದುಕೊಂಡಿದ್ದರು. ಊಟಕ್ಕಾಗಿ ಪರದಾಡಿದ್ದರು. ಇಂತಹವರ ನೆರವಿಗೆ ಪಾಟ್ ಹೋಲ್ ರಾಜಾ ಸಂಸ್ಥೆ ಧಾವಿಸಿತ್ತು. ನಮ್ಮ ಸಂಸ್ಥೆ ಸುಮಾರು 1 ಕೋಟಿ ಮಂದಿಗೆ ಆಹಾರ ಒದಗಿಸಿತ್ತು ಎಂದು ಹೇಳಿದ್ದಾರೆ.

ಈ ಹಿಂದೆ ನಾವು ಸೇವಾ ರೂಪದಲ್ಲಿ ಈ ಕಾರ್ಯಕ್ಕಾಗಿ ಸ್ವಯಂ ಸೇವಕರನ್ನು ಆಹ್ವಾನಿಸುತ್ತಿದ್ದೆವು. ಆದರೆ ಈಗ ಸಂಸ್ಥೆ ಬೆಳೆದಂತೆಯೇ ಸಿಬ್ಬಂದಿಗಳನ್ನು ನೇಮಿಸಿಕೊಂಡು ಅವರಿಗೆ ತರಬೇತಿ ನೀಡಿ ಇದನ್ನೇ ಅವರಿಗೆ ಕೆಲಸವನ್ನಾಗಿ ನೀಡುತ್ತಿದ್ದೇವೆ. ಇದರಿಂದ ಅವರಿಗೆ ಕನಿಷ್ಠ ವೇತನವಾದರೂ ದೊರೆಯುತ್ತಿದೆ ಎಂಬ  ಸಮಾಧಾನ ನಮಗಿದೆ ಎಂದು ಸೌರಭ್ ಕುಮಾರ್ ಹೇಳಿದರು. ಇನ್ನು ನಿನ್ನೆ ಈ ತಂಡ ಲಾಲ್ ಭಾಗ್ ಮತ್ತು ಹೆಚ್ ಬಿಆರ್ ಲೇಔಟ್ ನಲ್ಲಿ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಮಾಡಿದೆ. ಪ್ರತೀ ಸಿಬ್ಬಂದಿಗೆ 400 ರಿಂದ 500 ರೂ ದಿನಗೂಲಿ ನೀಡಲಾಗಿದೆ. ಅಂತೆಯೇ ನಮ್ಮ ಸಂಸ್ಥೆಯೇ ಅವರಿಗೆ ಊಟದ ವ್ಯವಸ್ಥೆ ಕೂಡ  ಮಾಡಿತ್ತು. ಕೇವಲ ಗುಂಡಿಗಳನ್ನು ಮುಚ್ಚುವುದು ಮಾತ್ರವಲ್ಲದೇ ಈ ಕಾರ್ಯದಿಂದ ಕಾರ್ಮಿಕರಿಗೆ ನೆರವಾಗುವುದೂ ಕೂಡ ನಮ್ಮ ಉದ್ದೇಶವಾಗಿತ್ತು. 

ಲಾಕ್ ಡೌನ್ ಸಂದರ್ಭದಲ್ಲಿ ನಾವು ಆಹಾರ ಹಂಚುವಾಗ ಕೆಲ ಮಂದಿಯ ಪರಿಚಯವಾಗಿತ್ತು, ಅವರಿಂದಲೇ ನಮ್ಮ ಈ ಕಾರ್ಯಕ್ಕೆ ನೆರವು ಕೂಡ ದೊರೆಯುತ್ತಿದೆ. ಸಾರ್ವಜನಿಕರು ಕರೆ ಮಾಡಿ ರಸ್ತೆಗುಂಡಿಗಳ ಕುರಿತು ಮಾಹಿತಿ ನೀಡುತ್ತಾರೆ. ಸ್ವಯಂ ಅವರೇ ಮುಂದೆ ಬಂದು ನಮ್ಮ ಕಾರ್ಯಕ್ಕೆ ಧನ ಸಹಾಯ  ಮಾಡುತ್ತಾರೆ. ನಾವು ಇಷ್ಟಕ್ಕೆ ನಿಲ್ಲಲ್ಲಿಲ್ಲ. ಇದೀಗ ನಮ್ಮದೇ ಆದಲ ವೆಬ್ ಸೈಟ್ ತೆರಿದಿದ್ದು, ಅಲ್ಲಿ ನಮ್ಮ ಕಾರ್ಯಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳೂ ಇವೆ. ಸಿಬ್ಬಂದಿಗಳೊಂದಿಗೆ ಸಂಪರ್ಕ, ಕೆಲಸದ ಕುರಿತು ಮಾಹಿತಿ, ಅಲ್ಲದೆ ನಮ್ಮ ನೆಟ್ ವರ್ಕ್ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬಿತ್ಯಾದಿ ಅಂಶಗಳು  ಅದರಲ್ಲಿವೆ.

ವೆಬ್ ಸೈಟ್ ಸಿಬ್ಬಂದಿಗಳ ನಡುವಿನ ಸಂವಹನ ಕೊರತೆಯನ್ನು ನೀಗಿಸುತ್ತದೆ. ಅಂತೆಯೇ ಯಾರಾದರೂ ಕಟ್ಟಡ ಕಾರ್ಮಿಕರಿಗಾಗಿ ಶೋಧ ನಡೆಸುತ್ತಿದ್ದರೆ ಅಂತವರಿಗೂ ನಮ್ಮ ವೆಬ್ ಸೈಟ್ ನೆರವಾಗಲಿದೆ ಎಂದು ಸೌರಭ್ ಕುಮಾರ್ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com