ಕೊರೋನಾ ಚಿಕಿತ್ಸೆಗೆ ರೂ.7.4 ಲಕ್ಷ ಬಿಲ್: ಆಸ್ಪತ್ರೆ ವಿರುದ್ಧ ಮಾನವ ಹಕ್ಕು ಸಂಘಟನೆಯ ಸದಸ್ಯರು ಪ್ರತಿಭಟನೆ

ಕೊರೋನಾ ಸೋಂಕಿತ ರೋಗಿಗೆ ಚಿಕಿತ್ಸೆ ನೀಡಿದ ಬಳಿಕ ರೂ.7 ಲಕ್ಷ ಮಾಡಿರುವ ನಗರದ ಸೇಂಟ್ ಫಿಲೋಮಿನಾ ಆಸ್ಪತ್ರೆಯ ವಿರುದ್ಧ ರೋಗಿಯ ಸಂಬಂಧಿಕರು ಹಾಗೂ ಮಾನವ ಹಕ್ಕುಗಳ ಸಂಘಟನೆಯ ಸದಸ್ಯರು ಮೌನವಾಗಿ ಪ್ರತಿಭಟನೆ ನಡೆಸಿದ್ದಾರೆ. 
ಸೇಂಟ್ ಫಿಲೋಮಿನಾ ಆಸ್ಪತ್ರೆ
ಸೇಂಟ್ ಫಿಲೋಮಿನಾ ಆಸ್ಪತ್ರೆ

ಬೆಂಗಳೂರು: ಕೊರೋನಾ ಸೋಂಕಿತ ರೋಗಿಗೆ ಚಿಕಿತ್ಸೆ ನೀಡಿದ ಬಳಿಕ ರೂ.7 ಲಕ್ಷ ಮಾಡಿರುವ ನಗರದ ಸೇಂಟ್ ಫಿಲೋಮಿನಾ ಆಸ್ಪತ್ರೆಯ ವಿರುದ್ಧ ರೋಗಿಯ ಸಂಬಂಧಿಕರು ಹಾಗೂ ಮಾನವ ಹಕ್ಕುಗಳ ಸಂಘಟನೆಯ ಸದಸ್ಯರು ಮೌನವಾಗಿ ಪ್ರತಿಭಟನೆ ನಡೆಸಿದ್ದಾರೆ. 

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ನಗರದ ಪಾಟ್ರಿಟೌನ್ ನಿವಾಸಿ ಸುಮಾರು 33 ವರ್ಷದ ಮಹಿಳೆಯನ್ನು ಜುಲೈ.9ರಂದು ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಿದ್ದರು. 21 ದಿನ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆ ಸಂದರ್ಭದಲ್ಲಿ ಚಿಕಿತ್ಸಾ ವೆಚ್ಚ ರೂ.7 ಲಕ್ಷ ಬಿಲ್ ಪಾವತಿಸುವಂತೆ ಆಸ್ಪತ್ರೆ ತಿಳಿಸಿದೆ. 

ಆಸ್ಪತ್ರೆಗೆ ದಾಖಲು ಮಾಡಿದಾಗ 1 ಲಕ್ಷ ಕಟ್ಟುವಂತೆ ತಿಳಿಸಿದ್ದರು. ಆಗ ನಮ್ಮ ಬಳಿ ಅಷ್ಟೊಂದು ಹಣವಿರಲಿಲ್ಲ. ರೂ.10,000 ಇರುವುದಾಗಿ ತಿಳಿಸಿದ್ದೆವು. ಈ ವೇಳೆ ಆಸ್ಪತ್ರೆ ಸಿಬ್ಬಂದಿಗಳು ಎಷ್ಟಿದೆಯೋ ಅಷ್ಟೇ ಕಡ್ಡುವಂತೆ ತಿಳಿಸಿದರು. ಬಳಿ ರೂ.35,00 ತಂದು ಕಟ್ಟಿದ್ದೆವು. ಆರಂಭದಲ್ಲಿ ಕೆಸಿ ಜನರಲ್ ಆಸ್ಪತ್ರೆಗೆ ಹೋಗಿದ್ದೆವು. ಅಲ್ಲಿನ ಸಿಬ್ಬಂದಿಗಳು ಹಾಸಿಗೆ ಇಲ್ಲ ಎಂದಿದ್ದರು, ಬಳಿಕ ನಾವು ಸೇಂಟ್ ಫಿಲೋಮಿನಾ ಆಸ್ಪತ್ರೆ ಕರೆತಂದಿದ್ದೆವು. ಚಿಕಿತ್ಸೆ ನೀಡಿದ ಬಳಿಕ ಆಸ್ಪತ್ರೆಯವರು ಇದೀಗ ರೂ.7.4 ಲಕ್ಷ ಬಿಲ್ ಮಾಡಿದ್ದಾರೆಂದು ಮಹಿಳೆಯ ಪತಿ ಆ್ಯಂಡ್ರೂ ಅವರು ಹೇಳಿದ್ದಾರೆ. 

ಈಗಾಗಲೇ ನಾವು ರೂ.2.5 ಲಕ್ಷ ಬಿಲ್ ಪಾವತಿ ಮಾಡಿದ್ದೇವೆ. ಆದರೆ, ಆಸ್ಪತ್ರೆಯವರು ಪೂರ್ತಿ ಹಣ ಪಾವತಿ ಮಾಡದ ಹೊರತು ರೋಗಿಯನ್ನು ಬಿಡುಗಡೆ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com