ಕೆಆರ್ ಪುರಂ ಮೆಟ್ರೋ ಕಾಮಗಾರಿ ಹಿನ್ನಲೆ: 2 ದೇಗುಲಗಳ ತೆರವು

ಬಹು ನಿರೀಕ್ಷಿತ ಕೆಆರ್ ಪುರಂ ನಲ್ಲಿನ ಮೆಟ್ರೋ ಕಾಮಗಾರಿ ವೇಗ ಕಾಮಗಾರಿ ಪಡೆದುಕೊಂಡಿದ್ದು, ಕಾಮಗಾರಿಗೆ ಅಡ್ಡಿಯಾಗಿದ್ದ ರಸ್ತೆ ಅಗಲೀಕರಣ ಕಾರ್ಯ ಇದೀಗ ಭರದಿಂದ ಸಾಗಿದೆ.
ಕೆಆರ್ ಪುರಂ ಮೆಟ್ರೋ ಕಾಮಗಾರಿ
ಕೆಆರ್ ಪುರಂ ಮೆಟ್ರೋ ಕಾಮಗಾರಿ

ಬೆಂಗಳೂರು: ಬಹು ನಿರೀಕ್ಷಿತ ಕೆಆರ್ ಪುರಂ ನಲ್ಲಿನ ಮೆಟ್ರೋ ಕಾಮಗಾರಿ ವೇಗ ಕಾಮಗಾರಿ ಪಡೆದುಕೊಂಡಿದ್ದು, ಕಾಮಗಾರಿಗೆ ಅಡ್ಡಿಯಾಗಿದ್ದ ರಸ್ತೆ ಅಗಲೀಕರಣ ಕಾರ್ಯ ಇದೀಗ ಭರದಿಂದ ಸಾಗಿದೆ.

ಬೈಯ್ಯಪ್ಪನಹಳ್ಳಿ-ವೈಟ್ ಫೀಲ್ಡ್ ಮಾರ್ಗದಲ್ಲಿ ಬರುವು ಜ್ಯೋತಿಪುರ, ಕೆಆರ್ ಪುರಂ ಮೆಟ್ರೋ ನಿಲ್ದಾಣಗಳಿಗಾಗಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಇಲ್ಲಿನ ಸುಮಾರು 2 ದೇಗುಲಗಳು ಸೇರಿದಂತೆ 74 ಕಟ್ಟಡಗಳನ್ನು ವಶಕ್ಕೆ ಪಡೆದಿರುವ ಬಿಎಂಆರ್ ಸಿಎಲ್ ಶೀಘ್ರವೇ ಇವುಗಳನ್ನು ತೆರವುಗೊಳಿಸಲಿದೆ. ಈ  ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು ಅತ್ಯಂತ ಹೆಚ್ಚು ಟ್ರಾಫಿಕ್ ಇರುವ ಟಿನ್ ಫ್ಯಾಕ್ಟರಿ ಪ್ರದೇಶದಲ್ಲಿ ತೆರವು ಕಾರ್ಯಾಚರಣೆ ಸವಾಲಿನದ್ದು. ವಾಹನಗಳ ಸಂಚಾರ ನಿಭಾಯಿಸಿಕೊಂಡು ತೆರವು ಮಾಡಬೇಕು ಎಂದು ಹೇಳಿದ್ದಾರೆ. 

2 ನಿಲ್ದಾಣಗಳ ಪೈಕಿ ಒಂದು ಕೆಆರ್ ಪುರಂ ಜಂಕ್ಷನ್ ನಲ್ಲಿ ತಲೆ ಎತ್ತಲಿದ್ದು, ಮತ್ತೊಂದು ವೈಟ್ ಫೀಲ್ಡ್ (ರೀಚ್ 1)ನಲ್ಲಿ ನಿರ್ಮಾಣವಾಗಲಿದೆ. ಇದೇ ಲೈನ್ ನಲ್ಲಿಯೇ ಕೆಆರ್ ಪುರಂನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ (Phase-2B Line) ಕಾಮಗಾರಿ ಕೂಡ ನಡೆಯಲಿದೆ ಎಂದು  ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾಮಗಾರಿ ನಿಮಿತ್ತ ಇಲ್ಲಿನ 2 ಪ್ರಮುಖ ದೇಗುಲಗಳೂ ಸೇರಿದಂತೆ ಒಟ್ಟು 74 ಕಟ್ಟಡಗಳನ್ನು ತೆರವು ಮಾಡಲಾಗುತ್ತದೆ. ಈ ಸಂಬಂಧ ಈಗಾಗಲೇ 24 ಕಟ್ಟಡಗಳನ್ನು ವಶಕ್ಕೆ ಪಡೆಯಲಾಗಿದ್ದು, ಇಂಜಿನಿಯರಿಂಗ್ ಸೆಲ್ ಗೆ ತೆರವು ಮಾಡಲು ಸೂಚಿಸಲಾಗಿದೆ. ಬಾಕಿ 50 ಕಟ್ಟಡಗಳು  ವಿವಾದದಲ್ಲಿದ್ದು ಈ ಬಗ್ಗೆ ಶೀಘ್ರ ವಿವಾದ ಬಗೆ ಹರಿಸಿಕೊಂಡು ಕಟ್ಡವವನ್ನು ವಶಕ್ಕೆ ಪಡೆಯಲಾಗುತ್ತದೆ. ಆಗಸ್ಟ್3ಕ್ಕೆ ಇದರ ವಿಚಾರಣೆ ಇದೆ ಎಂದು ಹೇಳಿದ್ದಾರೆ. 

ರಸ್ತೆ ಅಗಲೀಕರಣಕ್ಕಾಗಿ 11,200 ಸ್ಕ್ವೇರ್ ಮೀಟರ್ ಭೂಮಿ ಅಗತ್ಯವಿದ್ದು, ಸ್ಥಳೀಯ ನಿವಾಸಿಗಳು ತಮ್ಮ ಕಟ್ಜಡಗಳನ್ನು ವಶಕ್ಕೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ದೇಗುಲಗಳ ಟ್ರಸ್ಟಿಗಳು ಸಕಾರಾತ್ಮಕವಾಗಿದ್ದು, ತೆರವಿಗೆ ಸಹಕಾರಿಸಿದ್ದಾರೆ. ಈಗಾಗಲೇ ಪರಿಹಾರವಾಗಿ ದೇಗುಲಗಳಿಗೆ 9 ಕೋಟಿ ರೂ ಪಾವತಿ  ಮಾಡಲಾಗಿದೆ. 1,057 ಸ್ಕ್ವೇರ್ ಮೀಟರ್ ಭೂಮಿಯಲ್ಲಿರುವ ಮನೆಗಳು, ಮುತ್ಯಾಲಮ್ಮ ದೇಗುಲವನ್ನು ವಶಕ್ಕೆ ಪಡೆಯಲಾಗಿದೆ. ಇದಕ್ಕಾಗಿ 6.85 ಕೋಟಿ ರೂ ಪರಿಹಾರ ನೀಡಲಾಗಿದೆ. ಅಂತೆಯೇ ಇಲ್ಲಿನ ಓಂ ಶಕ್ತಿ ದೇಗುಲ ಮತ್ತು ಇತರೆ ಕಟ್ಟಡಗಳಿರುವ 259.36ಸ್ಕ್ವೇರ್ ಮೀಟರ್ ಭೂಮಿಯನ್ನು ವಶಕ್ಕೆ  ಪಡೆಯಬೇಕಿದೆ. ಇದಕ್ಕಾಗಿ ದೇಗುಲದ ಟ್ರಸ್ಟಿಗಳಿಗೆ 2.25 ಕೋಟಿರೂ ಪರಿಹಾರ ನೀಡಿದ್ದೇವೆ. ದೇಗುಲವನ್ನೂ ಕೂಡ ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com