ಚಿಕ್ಕಮಗಳೂರು: ಇಬ್ಬರು ಮಕ್ಕಳ ಜೊತೆ ಕೆರೆಗೆ ಹಾರಿದ ತಾಯಿ, ಮೂವರೂ ಸಾವು
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಇಬ್ಬರು ಹೆಣ್ಣು ಮಕ್ಕಳ ಜೊತೆ ತಾಯಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಬಳಿಯ ಹುಣಸೇಕೊಪ್ಪದಲ್ಲಿ ನಡೆದಿದೆ.
Published: 03rd August 2020 05:10 PM | Last Updated: 03rd August 2020 05:10 PM | A+A A-

ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಇಬ್ಬರು ಹೆಣ್ಣು ಮಕ್ಕಳ ಜೊತೆ ತಾಯಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಬಳಿಯ ಹುಣಸೇಕೊಪ್ಪದಲ್ಲಿ ನಡೆದಿದೆ.
ಹುಣಸೇಕೊಪ್ಪದ ಲಕ್ಷ್ಮಿ(35), ಸೌಜನ್ಯ(5) ಹಾಗೂ 2 ವರ್ಷದ ಆದ್ಯಾ ಮೃತಪಟ್ಟವರು.
ಕಳೆದ ನಾಲ್ಕು ದಿನಗಳಿಂದ ತಾಯಿ, ಮಕ್ಕಳು ನಾಪತ್ತೆಯಾಗಿದ್ದರು. ನಿನ್ನೆ ಹುಣಸೇಕೊಪ್ಪದ ಕಾಫಿ ತೋಟವೊಂದರ ಕೆರೆಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿದೆ.
ಪದೇ ಪದೇ ಲಕ್ಷ್ಮಿ ತವರು ಮನೆಗೆ ಹೋಗುತ್ತಿದ್ದರಿಂದ ಪತಿ ಆಗಾಗ ಜಗಳವಾಡುತ್ತಿದ್ದ ಹಿನ್ನೆಲೆಯಲ್ಲಿ ಬೇಸತ್ತು ಲಕ್ಷ್ಮಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸರು ಧಾವಿಸಿ ಮೃತ ಲಕ್ಷ್ಮಿಯ ಗಂಡನನ್ನ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ಮೃತ ಲಕ್ಷ್ಮಿಯ ಮನೆಯವರು ಗಂಡನ ಕಿರುಕುಳ ಎಂದು ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.