ಹೊಸಪೇಟೆ: ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್ ವಿರುದ್ದ ಜಾತಿ ನಿಂದನೆ ಕೇಸ್!

ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್ ವಿರುದ್ದ ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಕೇಸ್ ದಾಖಲಾಗಿದೆ.
ಪರಮೇಶ್ವರ್ ನಾಯ್ಕ್
ಪರಮೇಶ್ವರ್ ನಾಯ್ಕ್

ಹೊಸಪೇಟೆ: ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್ ವಿರುದ್ದ ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಕೇಸ್ ದಾಖಲಾಗಿದೆ. 

ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಪಿ.ಟಿ.ಪರಮೇಶ್ವರನಾಯ್ಕ್ ಕಳೆದ ನಾಲ್ಕು ದಿನಗಳ ಹಿಂದೆ ತಾಲೂಕಿನ ಕುರುವತ್ತಿ ಗ್ರಾಮದ ಬಳಿಯ ಗುತ್ತೆಮ್ಮನ ಗುಡ್ಡಕ್ಕೆ ಬೇಟಿ ನೀಡಿ ಕಳ್ಳರನ್ನ ನಿಂದಿಸುವ ಭರದಲ್ಲಿ ಎರಡು ಗ್ರಾಮಗಳ ಒಂದು ಸಮುದಾಯವನ್ನ ನಿಂದನೆ ಮಾಡಿದ್ದರು, ಇದರಿಂದ ರೊಚ್ಚಿಗೆದ್ದಿರುವ ಹರಪನಹಳ್ಳಿ ತಾಲೂಕಿನ ಅಗ್ರಹಾರ ಗ್ರಾಮದ ಜನಗಳು ನಿನ್ನೆ ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ದೂರು ದಾಖಲು ಮಾಡಿದ್ದಾರೆ, 

ಏನಿದು ಪ್ರಕರಣ:
ಇನ್ನು ಕುರಿ ಕಳ್ಳತನಮಾಡಿ ಸಿಕ್ಕಿ ಬಿದ್ದದ್ದ ಇಬ್ಬರು ಖದೀಮರನ್ನ ನಿಂದಿಸುವ ಭರದಲ್ಲಿ ಜಾತಿ ನಿಂದನೆಮಾಡಿರುವ ಪಿ.ಟಿ.ಪಿ. ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ.  ಕಳೆದ ನಾಲ್ಕು ದಿನಗಳ ಹಿಂದೆ ಹೂವಿನಹಡಗಲಿ ತಾಲೂಕಿನ ಕುರುವತ್ತಿ ಬಳಿಯ ಗುತ್ತೆಮ್ಮನ ಗುಡ್ಡದಲ್ಲಿ ಕುರಿ ಕದಿಯಲು ಹೋಗಿ ಸಿಕ್ಕಿಬಿದ್ದಿದ್ದ ಇಬ್ಬರು ಖದೀಮರನ್ನ ಹಿಗ್ಗಾ ಮುಗ್ಗಾ ಥಳಿಸಿದ್ದ ಕುರಿಗಾಯಿಗಳು, ಕುರಿಗಳ ಜೊತೆ ಕಳ್ಳರನ್ನ ಸಹ ಕೂಡ ಕೂಡಿ ಹಾಕಿದ್ದರು.

ವಿಷಯ ತಿಳಿದು ಘಟನಾ ಸ್ಥಳಕ್ಕೆ ಬೇಟಿ ನೀಡಿದ ಪಿ.ಟಿ.ಪರಮೇಶ್ವರನಾಯ್ಕ್ ಕುರಿಗಾಹಿಗಳನ್ನ ಬೆಂಬಲಿಸಿ ಕಳ್ಳರ ವಿರುದ್ದ ಹರಿಹಾಯ್ದಿದ್ದರು. ಅಲ್ಲದೆ ಖದೀಮರನ್ನ ನಿಂದಿಸುವ ಭರದಲ್ಲಿ ಒಂದು ಜಾತಿಯನ್ನ ಮತ್ತು ಎರಡು ಗ್ರಾಮಗಳ ಜನಗಳನ್ನ ನಿಂದಿಸಿದ್ದರು.

ಇದರಿಂದ ಕೆರಳಿರುವ ಎರಡು ಗ್ರಾಮಗಳ ಜನಗಳು ಪಿ.ಟಿ.ಪಿ.ವಿರುದ್ದ ತಿರುಗಿಬಿದ್ದಿದ್ದಾರೆ. ಅಲ್ಲದೆ ಕಳ್ಳತನ ಪ್ರಕರಣದಲ್ಲಿ ಬಾಗಿಯಾಗಿರುವ ಯಾರೊಬ್ಬರು ಪಿ.ಟಿ.ಪಿ. ನಿಂದನೆ ಮಾಡಿದ ಸಮುದಾಯದವರು ಇಲ್ಲ, ಬದಲಾಗಿ ಪಿ.ಟಿ.ಪಿ‌. ಸಮುದಾಯದ ಮೂರು ಜನ ಕಳ್ಳರು ಪ್ರಕರಣದಲ್ಲಿ ಭಾಗಿಯಾಗಿದ್ದರೂ ಅವರ ಸಮುದಾಯವನ್ನ ತೆಗಳದೆ ಬೇರೆ ಸಮುದಾಯವನ್ನ
ನಿಂದಿಸಿರುವುದು ಈ ಜನಗಳ ಆಕ್ರೋಶಕ್ಕೆ ಕಾರಣವಾಗಿದೆ. 

ಇನ್ನು ಕಳೆದ ನಾಲ್ಕು ದಿನಗಳ ಹಿಂದ ನಡೆದ ಈ ಕುರಿ ಕಳ್ಳತನ ಪ್ರಕರಣಕ್ಕೆ ಸಂಭಂದಿಸಿದಂತೆ ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ, ಅಲ್ಲದೆ ಕಳ್ಳತನ ಆರೋಪಿಗಳನ್ನ ಬಂದಿಸಿರುವ ಹಿರೇಹಡಗಲಿ ಪೊಲೀಸರು ನಾಲ್ವರು ಖದೀಮರನ್ನ ಜೈಲಿಗೆ ಕೂಡ ಅಟ್ಟಿದ್ದಾರೆ, ಪ್ರಕರಣಕ್ಕೆ ಸಂಭಂದಿಸಿದಂತೆ ತನಿಖೆ ಇನ್ನೂ ಮುಂದುವರೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com