ಕೊರೋನಾ ಹೆಚ್ಚಳ: ಎಂದಿನಂತೆ ನ್ಯಾಯಾಲಯ ಕಲಾಪ ಪುನಾರಂಭ ಸದ್ಯಕ್ಕಂತು ಇಲ್ಲ ಎಂದ ಹೈಕೋರ್ಟ್

ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಕೋವಿಡ್ ಸೋಂಕಿಗೆ ತುತ್ತಾದ ಕಾರಣ ಮುಂದಿನ ದಿನಗಳಲ್ಲಿ ನ್ಯಾಯಾಲಯಗಳ ಸಾಮಾನ್ಯ ಕಾರ್ಯಚಟುವಟಿಕೆಯನ್ನು ಪುನಃಸ್ಥಾಪಿಸುವುದು ಕಷ್ಟ ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ತಿಳಿಸಿದೆ.
ಕೊರೋನಾ ಹೆಚ್ಚಳ: ಎಂದಿನಂತೆ ನ್ಯಾಯಾಲಯ ಕಲಾಪ ಪುನಾರಂಭ ಸದ್ಯಕ್ಕಂತು ಇಲ್ಲ ಎಂದ ಹೈಕೋರ್ಟ್

ಬೆಂಗಳೂರು: ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಕೋವಿಡ್ ಸೋಂಕಿಗೆ ತುತ್ತಾದ ಕಾರಣ ಮುಂದಿನ ದಿನಗಳಲ್ಲಿ ನ್ಯಾಯಾಲಯಗಳ ಸಾಮಾನ್ಯ ಕಾರ್ಯಚಟುವಟಿಕೆಯನ್ನು ಪುನಃಸ್ಥಾಪಿಸುವುದು ಕಷ್ಟ ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ತಿಳಿಸಿದೆ.

“ಕರ್ನಾಟಕದಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳು ಕೋವಿಡ್-19 ಗೆ ತುತ್ತಾಗಿದ್ದಾರೆ ಮತ್ತು ಕಳೆದ ಒಂದು ತಿಂಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಪಾಸಿಟಿವ್ ಟೆಸ್ಟ್  ಮತ್ತು ಕ್ವಾರಂಟೈನ್ ನಲಿರುವ  ಹೆಚ್ಚಿನ ಸಂಖ್ಯೆಯ ನ್ಯಾಯಾಲಯಗಳ ನೌಕರರ ಬಗ್ಗೆ ನ್ಯಾಯಾಂಗ ಗಮನಿಸಿದೆ. ”ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿನಗಿ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ.

ಬೆಂಗಳೂರಿನ ಪ್ರಧಾನ ಪೀಠದಲ್ಲಿ 45 ಸಿಬ್ಬಂದಿ ನಿನ್ನೆ ತನಕ ಕೋವಿಡ್ ಸೋಂಕಿಗೆ ಪಾಸಿಟಿವ್ ಆಗಿ ವರದಿ ಪಡೆದಿದ್ದಾರೆ. ಹಾಗೆಯೇ ಅನೇಕರು ಪರೀಕ್ಷೆಯ ವರದಿಗಳಿಗಾಗಿ ಕಾಯುತ್ತಿದ್ದಾರೆ ಎಂದು ನ್ಯಾಯಾಲಯ ಗಮನಿಸಿದೆ. ಅನೇಕ ನ್ಯಾಯಾಂಗ ಅಧಿಕಾರಿಗಳು ಮತ್ತು ನೌಕರರು ಸಹ ಕ್ವಾರಂಟೈನ್ ನಲ್ಲಿದ್ದಾರೆ. 

ಏತನ್ಮಧ್ಯೆ, ರಾಜ್ಯದ ಎಲ್ಲಾ ಬಾರ್ಯೂನಿಯನ್ ಗಳ ಸದಸ್ಯರನ್ನು ಪ್ರತಿನಿಧಿಸುವ ಬೆಳಗಾವಿ ಬಾರ್ ಅಸೋಸಿಯೇಷನ್ ​​ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದ ಪತ್ರವನ್ನು ಪರಿಗಣಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ನ್ಯಾಯಪೀಠ, ಎರಡು ವಾರಗಳಲ್ಲಿ ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದಿದೆ. 

 ಬಾರ್ ಸದಸ್ಯರು ತಾವು ದಾನವನ್ನು ಬಯಸುತ್ತಿಲ್ಲ ಮತ್ತು 5 ಲಕ್ಷ ರೂ.ವರೆಗಿನ ಸಾಲ ಮಂಜೂರು ಮಾಡ್ಅಲು ಕೋರಿದ್ದಾರೆ. ವಕೀಲರು, ಗುಮಾಸ್ತರ ಮನವಿಯನ್ನು ಪರಿಗಣಿಸಿ ಮತ್ತು ಅವರು ಸಂಕಷ್ಟದಲ್ಲಿರುವ ಕಾರಣ ಆರ್ಥಿಕ ಸಹಾಯವನ್ನು ನೀಡುವಂತೆ ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com