ಅತ್ತ ಅಯೋಧ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸ, ಇತ್ತ ಅಂಜನಾದ್ರಿಯಲ್ಲಿ ವಿಶೇಷ ಪೂಜೆ

ರಾಮನ ಹೆಸರಿನೊಂದಿಗೆ ಹನುಮ ಎಂಬ ಇನ್ನೊಂದು ನಾಮ ಸೇರದಿದ್ದರೆ ಬಹುಶಃ ತೇತ್ರಾಯುಗದ ರಾಮ ಅಪೂರ್ಣನಾಗುತ್ತಾನೆ. ಅಂತಹ ಗುರು-ಶಿಷ್ಯರ ಬಾಂಧವ್ಯಕ್ಕೆ ಹೆಸರಾದವರು ರಾಮ-ಹನುಮ. ಇದೀಗ ರಾಮನಿಗೆ ಅಯೋಧ್ಯೆಯಲ್ಲಿ ಮಂದಿರ ನಿಮರ್ಾಣಕ್ಕೆ ಶಿಲನ್ಯಾಸ ನೆರವೇರುತ್ತಿದ್ದರೆ, ಇತ್ತ ಹನುಮನೂರಿನಲ್ಲಿ ಸಂಭ್ರಮಾಚರಣೆ ಮನೆ ಮಾಡಿದೆ.
ಅಂಜನಾದ್ರಿ ದೇವಸ್ತಾನ
ಅಂಜನಾದ್ರಿ ದೇವಸ್ತಾನ

ಗಂಗಾವತಿ: ರಾಮನ ಹೆಸರಿನೊಂದಿಗೆ ಹನುಮ ಎಂಬ ಇನ್ನೊಂದು ನಾಮ ಸೇರದಿದ್ದರೆ ಬಹುಶಃ ತೇತ್ರಾಯುಗದ ರಾಮ ಅಪೂರ್ಣನಾಗುತ್ತಾನೆ. ಅಂತಹ ಗುರು-ಶಿಷ್ಯರ ಬಾಂಧವ್ಯಕ್ಕೆ ಹೆಸರಾದವರು ರಾಮ-ಹನುಮ. ಇದೀಗ ರಾಮನಿಗೆ ಅಯೋಧ್ಯೆಯಲ್ಲಿ ಮಂದಿರ ನಿಮರ್ಾಣಕ್ಕೆ ಶಿಲನ್ಯಾಸ ನೆರವೇರುತ್ತಿದ್ದರೆ, ಇತ್ತ ಹನುಮನೂರಿನಲ್ಲಿ ಸಂಭ್ರಮಾಚರಣೆ ಮನೆ ಮಾಡಿದೆ.

ಹನುಮ ಉದಿಸಿದ ನಾಡು ಎಂದು ಖ್ಯಾತಿ ಪಡೆದ ತಾಲ್ಲೂಕಿನ ಆನೆಗೊಂದಿ ಹಾಗೂ ಹನುಮನಹಳ್ಳಿಗೂ ರಾಮಾಯಣಕ್ಕೂ ಬಿಡಿಸಲಾದ ನಂಟು. ಅಪಹರಣಕ್ಕೆ ಒಳಗಾಗಿದ್ದ ಸೀತೆಯನ್ನು ಹುಡುಕುತ್ತಾ ರಾಮ- ಲಕ್ಷ್ಮಣರಿಬ್ಬರೂ ಆನೆಗೊಂದಿಗೆ ಬಂದಿದ್ದರು ಎಂಬ ಪ್ರತೀತಿ ಇದೆ.

ಇದಕ್ಕೆ ಸಾಕ್ಷಿ ಎಂಬಂತೆ ರಾಮಾಯಣದ ಕಾಲಘಟ್ಟದಲ್ಲಿನ ಘಟನಾವಳಿಗಳಿಗೆ ಸಾಮ್ಯತೆಯಂತಿರುವ ಸಾಕಷ್ಟು ಪುರಾವೆ, ಸಾಕ್ಷ್ಯಗಳು, ಕುರುಹುಗಳು ಇಂದಿಗೂ ಕಾಣಸಿಕ್ಕುತ್ತವೆ. ಇದೆಲ್ಲವನ್ನೂ ಈ ಭಾಗದ ಇತಿಹಾಸಕರರು ಸಾಬೀತು ಪಡಿಸಿದ್ದಾರೆ.

ರಾಮಯಣದ ಕಥಾನಕದಲ್ಲಿ ಬರುವ ಪ್ರಮುಖ ಪಾತ್ರಧಾರಿ ಹನುಮ ಜನಿಸಿದ ಸ್ಥಳ ಅಂಜನಾದ್ರಿ ಬೆಟ್ಟ ಎಂಬ ಐತಿಹ್ಯವಿದೆ. ಅಲ್ಲದೇ ರಾಮಾಯಣದ ಕಾವ್ಯಸಂಕಲನದಲ್ಲಿ ಬರುವ ಕಿಷ್ಕಿಂಧೆ, ವಾಲಿ-ಸುಗ್ರೀವರ ಕದನದ ಕುರುಹುಗಳು ಆನೆಗೊಂದಿ ಪರಿಸರದಲ್ಲಿದೆ ಎಂದು ಹೇಳಲಾಗುತ್ತಿದೆ.

ಮುಖ್ಯವಾಗಿ ಆನೆಗೊಂದಿಯಲ್ಲಿರುವ ಚಿಂತಾಮಣಿ ಎಂಬ ದೇವಸ್ಥಾನವಿದ್ದು, ಇದು ರಾಮಾಯಣ ಕಾಲಘಟ್ಟಕ್ಕಿತಲೂ ಪ್ರಾಚೀನ ಕಾಲದ್ದು ಎಂದು ಹೇಳಲಾಗುತ್ತಿದೆ. ತುಂಗಭದ್ರಾ ನದಿಯ ಪೂರ್ವಭಾಗದಲ್ಲಿರುವ ಚಿಂತಾಮಣಿಗೆ ಶ್ರೀರಾಮನ ಭೇಟಿ ನೀಡಿದ್ದ.

ವಾಲಿ-ಸುಗ್ರೀವರ ಕದನದ ಸಂದರ್ಭದಲ್ಲಿ ನೆರವಾದ ಶ್ರೀರಾಮನ ವಾಲಿಯ ವಧೆ ಮಾಡಿದ ಸ್ಥಳ ಚಿಂತಾಮಣಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ರಾಮನಗಿಗಾಗಿ ಕಾದ ಶಬರಿ ಗುಹೆ ಹಾಗೂ ರಾಮ ನೀರು ಕುಡಿದು ಧಣಿವಾರಿಸಿಕೊಂಡ ಕೊಳ ಪಂಪಾಸರೋವರ ಇಂದಿಗೂ ಕಾಣಬಹುದು.

ಇದೆಲ್ಲಾ ನಂಬಿಕೆಯ ಹಿನ್ನೆಲೆ ಇಂದಿಗೂ ಉತ್ತರ ಭಾರತದ ನಾನಾ ರಾಜ್ಯಗಳಿಂದ ಅದರಲ್ಲೂ ವಿಶೇಷವಾಗಿ ಉತ್ತರ ಪ್ರದೇಶ ರಾಜ್ಯದಿಂದ ವರ್ಷಕ್ಕೆ ಲಕ್ಷಾಂತರ ಜನ ಭಕ್ತರು ಹನುಮ ಜನಿಸಿದ ಸ್ಥಳಕ್ಕೆ ತೀರ್ಥಯಾತ್ರೆ ಕೈಗೊಂಡು ಪುನಿತರಾಗುತ್ತಾರೆ.

ಅಯೋಧ್ಯಾ ರಾಮನ ಜನ್ಮ ಭೂಮಿಯಾದ ಉತ್ತರ ಪ್ರದೇಶದಲ್ಲಿನ ಪ್ರತಿಯೊಬ್ಬರು ಆನೆಗೊಂದಿ ಸಮೀಪದ ಹನುಮನ ಜನ್ಮ ಸ್ಥಳ ತೀರ್ಥಯಾತ್ರೆ ಕೈಗೊಂಡು ದರ್ಶನ ಮಾಡಿದರೆ ಮಾತ್ರ ಜನ್ಮ ಸಾರ್ಥಕ ಎಂಬ ಧಾಮರ್ಿಕ ನಂಬಿಕೆ ಬಹುತೇಕರಲ್ಲಿ ಇದೆ.

ಇದೇ ಕಾರಣಕ್ಕೆ ವರ್ಷದೂದ್ದಕ್ಕೂ ಉತ್ತರ ಪ್ರದೇಶದಿಂದ ಪ್ರತಿ ತಿಂಗಳೂ ಸಾವಿರಾರು ಯಾತ್ರಾಥರ್ಿಗಳು ಹನುಮನ ದರ್ಶನಕ್ಕೆ ಬರುತ್ತಾರೆ. ಇದೇ ಕಾರಣಕ್ಕೆ ಇದೀಗ ಹನುಮ ಹುಟ್ಟಿದ ಅಂಜನಾದ್ರಿ ವಿಶ್ವವಿಖ್ಯಾತವಾಗಿದ್ದು, ರಾಮ ಮಂದಿರ ಶಿಲನ್ಯಾಸದ ಸಂದರ್ಭದಲ್ಲಿ ಅಂಜನಾದ್ರಿಯಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ.

ವರದಿ: ಶ್ರೀನಿವಾಸ .ಎಂ.ಜೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com