ಬೆಂಗಳೂರು: ಅಪರಿಚಿತ ವ್ಯಕ್ತಿ ಕಳಿಸಿದ ಲಿಂಕ್ ಕ್ಲಿಕ್ ಮಾಡಿ ಅಪಾಯಕ್ಕೆ ಸಿಲುಕಿದ ಮಹಿಳೆ

ಅಪರಿಚಿತ ವ್ಯಕ್ತಿ ಕಳುಹಿಸಿದ ಎಸ್ ಎಂಎಸ್ ಲಿಂಕ್ ಕ್ಲಿಕ್ ಮಾಡಿದ ಮಹಿಳೆಯೊಬ್ಬರು ತೊಂದರೆಗೆ ಸಿಲುಕಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಪರಿಚಿತ ವ್ಯಕ್ತಿ ಕಳುಹಿಸಿದ ಎಸ್ ಎಂಎಸ್ ಲಿಂಕ್ ಕ್ಲಿಕ್ ಮಾಡಿದ ಮಹಿಳೆಯೊಬ್ಬರು ತೊಂದರೆಗೆ ಸಿಲುಕಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ವ್ಯಕ್ತಿ ಕಳುಹಿಸಿದ ಲಿಂಕ್ ಕ್ಲಿಕ್ ಮಾಡಿದ್ದರಿಂದ ಮಹಿಳೆ ಫೋನ್ ಹ್ಯಾಕ್ ಆಗಿದ್ದು, ಆಕೆಯ ಮೊಬೈಲ್ ನಲ್ಲಿರುವ ಕಾಂಟ್ಯಾಕ್ಟ್ ನಂಬರ್ ಗಳಿಗೆ ಫೋರ್ನೋಗ್ರಾಪಿಕ್ ಚಿತ್ರಗಳು ರವಾನೆಯಾಗಿದ್ದು, ವಾಪಸ್ ಅವರ ಬೆತ್ತಲೆ ಫೋಟೋ ಕಳುಹಿಸುವಂತೆ ಒತ್ತಾಯಿಸಲಾಗಿದೆ.

ಬಸವನಗುಡಿ ನಿವಾಸಿಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ಜುಲೈ 29 ರಂದು ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿಯೂ ತಾನು ಒಂದು ಲಿಂಕ್ ಕಳುಹಿಸಿದ್ದು ಅದನ್ನು ಒಪನ್ ಮಾಡುವಂತೆ ಹೇಳಿದ್ದಾನೆ.

ಅದರಂತೆ ಮಹಿಳೆ ಲಿಂಕ್ ಕ್ಲಿಕ್ ಮಾಡಿದ್ದಾರೆ. ಅದಾದ ನಂತರ ಆಕೆಯ ವಾಟ್ಸಾಪ್ ಖಾತೆಯನ್ನು ಬೇರೋಬ್ಬರು ನಿಯಂತ್ರಿಸುತ್ತಿರುವುದು ತಿಳಿದು ಬಂದಿದೆ, ಆಕೆಯ ವಾಟ್ಸಾಪ್ ನಂಬರ್ ನಿಂದ ಆಕೆ ಫೋನ್ ನಲ್ಲಿದ್ದ ಕಾಂಟಾಕ್ಟ್ಸ್ ಗಳಿಗೆ ಆಕ್ಷೇಪಾರ್ಹ ಫೋಟೋ ಮತ್ತು ಮೆಸೇಜ್ ಬರುತ್ತಿರುವುದಾಗಿ ತಿಳಿಸಿದ್ದಾರೆ.

ಮಹಿಳೆಯ ವಾಟ್ಸಾಪ್ ನಂಬರ್ ಇಂದ ಬೇರೆ ವಾಟ್ಸಾಪ್ ಗುಂಪಿಗೆ ಪೋರ್ನ್ ವಿಡಿಯೋಗಳನ್ನು ಕಳುಹಿಸಲಾಗಿದೆ, ಈ ಸಂಬಂಧ ಜುಲೈ 31 ರಂದು ದೂರು ದಾಖಲಾಗಿದ್ದು ಸೈಬರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com