ಶೂನ್ಯ ಬಡ್ಡಿದರದಲ್ಲಿ ಸಾಲ: ಮೀನುಗಾರಿಕೆ, ಹೈನೋದ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಲಾಭದ ನಿರೀಕ್ಷೆ

ಕರ್ನಾಟಕ ಸರ್ಕಾರ 2 ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುತ್ತಿರುವ ಹಿನ್ನೆಲೆಯಲ್ಲಿ  ಹೈನುಗಾರಿಕೆ ಮತ್ತು ಮೀನುಗಾರಿಕೆಲ್ಲಿ ಹೆಚ್ಚಳವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕ ಸರ್ಕಾರ 2 ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುತ್ತಿರುವ ಹಿನ್ನೆಲೆಯಲ್ಲಿ  ಹೈನುಗಾರಿಕೆ ಮತ್ತು ಮೀನುಗಾರಿಕೆಲ್ಲಿ ಹೆಚ್ಚಳವಾಗಿದೆ.

ನಗರ ಪ್ರದೇಶಗಳಲ್ಲಿ ಉದ್ಯೋಗ ಕಳೆದುಕೊಂಡ ಮತ್ತು ತಮ್ಮ ಗ್ರಾಮಗಳು ಮತ್ತು ಪಟ್ಟಣಗಳಿಗೆ ಮರಳಿದ ಜನರಿಗೆ ಸಹಾಯ ಇದರಿಂದ ಸಹಾಯವಾಗುತ್ತದೆ ನಿರೀಕ್ಷಿಸಲಾಗಿದೆ.

ಇದುವರೆಗೆ ಕರ್ನಾಟಕ ಸರ್ಕಾರ 3 ಲಕ್ಷ ರು ವರೆಗೆ ರೈತರಿಗೆ ಬೆಳೆ ಸಾಲ ನೀಡುತ್ತಿದೆ, ಹೀಗಾಗಿ ಹೈನುಗಾರಿಕೆ ಮತ್ತು ಮೀನುಗಾರಿಕೆಗೂ ಕೂಡ ಸಾಲ ನೀಡಲು ನಿರ್ಧರಿಸಿದೆ. ಆದರೆ 2 ಲಕ್ಷ ರು ವರೆಗೆ ಮಾತ್ರ ನೀಡಲು ನಿರ್ಘರಿಸಿದೆ. ಇದರಿಂದಾಗಿ ಶೂನ್ಯ ಬಡ್ಡಿದರದಲ್ಲಿ ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಸಾಲ ನೀಡುವ ಮೊದಲ ರಾಜ್ಯ ಕರ್ನಾಟಕವಾಗಿದೆ.

ಎಲ್ಲಾ ಮೂರು ಅಥವಾ ಎರಡು ಕ್ಷೇತ್ರಗಳಲ್ಲಿ ಸಾಲ ಪಡೆಯಲು ಬಯಸುವ ರೈತರಿಗೆ 3 ಲಕ್ಷಕ್ಕಿಂತ ಅಧಿಕ ಸಾಲ ನೀಡುವುದಿಲ್ಲ.  ರಾಜ್ಯದಲ್ಲಿ 14 ಹಾಲು ಉತ್ಪಾದಕರ ಸಹಕಾರ ಸಂಘವಿದ್ದು 25 ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ, ಅದರಲ್ಲಿ 10 ಲಕ್ಷ ರೈತರು ಹಾಲು ಪೂರೈಸುತ್ತಿದ್ದು, ಸುಮಾರು 6 ಸಾವಿರ ಮೀನುಗಾರರು ಮೀನುಗಾರಿಕಾ ಸಂಘಗಳಲ್ಲಿ ಸದಸ್ಯರಾಗಿದ್ದಾರೆ. ಇವರೆಲ್ಲರಿಗೂ ಶೂನ್ಯ ಬಡ್ಡಿದರದಲ್ಲಿ ಸಾಲ ಸಿಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com