ಕೋವಿಡ್ ಔಷಧಿ, ಉಪಕರಣ ಖರೀದಿ ಖರ್ಚು ವೆಚ್ಚದ ಬಗ್ಗೆ ಆಡಿಟರ್ ಜನರಲ್ ರಿಂದ ತನಿಖೆಗೆ ಆದೇಶ: ಎಚ್.ಕೆ.ಪಾಟೀಲ್

ಕೋವಿಡ್ ಔಷಧ,ಉಪಕರಣ ಖರೀದಿ‌ ಸಂಬಂಧ ಎಲ್ಲಾ ಖರ್ಚು ಮತ್ತು ವೆಚ್ಚದ ಬಗ್ಗೆ ಸಮಗ್ರವಾಗಿ ವಿಶೇಷ ತನಿಖೆ ನಡೆಸಿ ಒಂದು ತಿಂಗಳ ಒಳಗಾಗಿ ಲೆಕ್ಕಪತ್ರ ಸಮಿತಿಗೆ ವರದಿ ನೀಡುವಂತೆ ಸಾರ್ಜನಿಕ ಲೆಕ್ಕಪತ್ರ ಸಮಿತಿಯು ಅಕೌಂಟೆಂಟ್ ಜನರಲ್‌ ಆಫ್ ಇಂಡಿಯಾ ಅವರಿಗೆ ಸೂಚಿಸಿದೆ

Published: 05th August 2020 08:09 AM  |   Last Updated: 05th August 2020 12:46 PM   |  A+A-


HK patil

ಎಚ್.ಕೆ ಪಾಟೀಲ್

Posted By : Shilpa D
Source : UNI

ಬೆಂಗಳೂರು: ಕೋವಿಡ್ ಔಷಧ,ಉಪಕರಣ ಖರೀದಿ‌ ಸಂಬಂಧ ಎಲ್ಲಾ ಖರ್ಚು ಮತ್ತು ವೆಚ್ಚದ ಬಗ್ಗೆ ಸಮಗ್ರವಾಗಿ ವಿಶೇಷ ತನಿಖೆ ನಡೆಸಿ ಒಂದು ತಿಂಗಳ ಒಳಗಾಗಿ ಲೆಕ್ಕಪತ್ರ ಸಮಿತಿಗೆ ವರದಿ ನೀಡುವಂತೆ ಸಾರ್ಜನಿಕ ಲೆಕ್ಕಪತ್ರ ಸಮಿತಿಯು ಅಕೌಂಟೆಂಟ್ ಜನರಲ್‌ ಆಫ್ ಇಂಡಿಯಾ ಅವರಿಗೆ ಸೂಚಿಸಿದೆ

ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಅವರು,ಕೊರೋನಾ ಸಂಬಂಧ ಔಷಧಿ,ಉಪಕರಣ ಸೇರಿದಂತೆ ಎಲ್ಲಾ ಖರೀದಿ ಹಾಗೂ ವೆಚ್ಚಗಳ ಬಗ್ಗೆ ಮಾಹಿತಿಯನ್ನು ಮಹಾಲೇಖ ಪಾಲಕರಿಗೆ ಸಲ್ಲಿಸ ಬೇಕು.

ಆಡಿಟರ್ ಜನರಲ್ ಅವರು ಒಂದು‌ ತಿಂಗಳಿನ‌ ಒಳಗಾಗಿ ವಿಶೇಷ ಆಡಿಟ್ ತಂಡಗಳನ್ನು ರಚಿಸಿ ಲೆಕ್ಕಪತ್ರಗಳನ್ನು ಆಡಿಟ್ ಮಾಡಿಸಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮುಂದೆ ವರದಿ ಮಂಡಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

Stay up to date on all the latest ರಾಜ್ಯ news
Poll
Babri Masjid

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp