ಸಾವಿನ ನಿಖರ ಕಾರಣ ತಿಳಿಯಲು ಸಮಿತಿ ರಚಿಸಿ: ಬಿಬಿಎಂಪಿಗೆ ಡಿಸಿಎಂ ಸೂಚನೆ

ನಗರದಲ್ಲಿ ಕೋವಿಡ್ ನಿಂದ ಸಾವಿನ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ನಿಖರ ಕಾರಣಗಳನ್ನು ತಿಳಿಯಲು ಉನ್ನತ ಮಟ್ಟದ ಅಧಿಕಾರಿಗಳ ಪ್ರತ್ಯೇಕ ಸಮಿತಿ ರಚಿಸಲು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. 

Published: 05th August 2020 07:56 AM  |   Last Updated: 05th August 2020 07:56 AM   |  A+A-


Deputy Chief Minister Dr.CN Ashwathnarayan

ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ

Posted By : Manjula VN
Source : ANI

ಬೆಂಗಳೂರು: ನಗರದಲ್ಲಿ ಕೋವಿಡ್ ನಿಂದ ಸಾವಿನ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ನಿಖರ ಕಾರಣಗಳನ್ನು ತಿಳಿಯಲು ಉನ್ನತ ಮಟ್ಟದ ಅಧಿಕಾರಿಗಳ ಪ್ರತ್ಯೇಕ ಸಮಿತಿ ರಚಿಸಲು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. 

ಕೋವಿಡ್ ಸಂಬಂಧ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಹಾಗೂ ಇತರೆ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಗರದಲ್ಲಿ ಸಾವಿನ ಪ್ರಕರಣಗಳು ಹೆಚ್ಚಾಗಲು ನಿಖರ ಕಾರಣಗಳನ್ನು ತಿಳಿಯರು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿ ರಚಿಸಬೇಕು. ಆ ಸಮಿತಿಯು ಕೋವಿಡ್ ಚಿಕಿತ್ಸೆ ತಡವಾಗಿ ಸಾವು ಹೆಚ್ಚಾಗುತ್ತಿದೆಯೇ, ಆಸ್ಪತ್ರೆಗಳ ಬೆಡ್ ಕೊರತೆ ಅಥವಾ ವಿಳಂಬವಾಗುತ್ತಿದೆಯೇ ಅಥವಾ ಚಿಕಿತ್ಸಾ ವಿಧಾನದಲ್ಲಿ ಏನಾದರೂ ಲೋಪಗಳಾಗುತ್ತಿವೆಯಾ ಎಂಬುದು ಸೇರಿದಂತೆ ಬೇರೆ ಬೇರೆ ಕಾರಣಗಳೇನು ಎಂಬುದನ್ನು ಅಧ್ಯಯನ ಮಾಡಿ ವರದಿ ಕೊಡಬೇಕು. 

ಇದಕ್ಕಾಗಿ ಸಮಿತಿ ಸದಸ್ಯರು ಸರ್ಕಾರಿ ಹಾಗೂ ಖಾಸಗಿ ಎರಡೂ ರೀತಿಯ ಆಸ್ಪತ್ರೆಗಳಲ್ಲಿನ ದಾಖಲಾತಿ, ಚಿಕಿತ್ಸಾ ವಿಧಾನಗಳನ್ನು ನಿರಂತರವಾಗಿ ಪರಿಶೀಲಿಸಬೇಕು. ಆ ವರದಿ ಆಧರಿಸಿ ಯಾವುದೇ ರೀತಿಯ ಲೋಪಗಳಾಗುತ್ತಿದ್ದರೆ ಸರಿಪಡಿಸಿಕೊಂಡು ಸಾವಿನ ಪ್ರಮಾಣ ಕಡಿಮೆ ಮಾಡಲು ಕ್ರಮವಹಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. 

ಯಾವ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ ಎಷ್ಟು ಹಾಸಿಗೆ ಮೀಸಲಿವೆ ಅದರಲ್ಲಿ ಎಷ್ಟು ಭರ್ತಿಯಾಗಿವೆ, ಎಷ್ಟು ಹಾಸಿಗೆ ಮೀಸಲಿವೆ ಅದರಲ್ಲಿ ಎಷ್ಟು ಭರ್ತಿಯಾಗಿವೆ, ಅಷ್ಟು ಖಾಲಿ ಇವೆ? ಎಂಬ ರಿಯಲ್ ಟೈಮ್ ಮಾಹಿತಿ ವೆಬ್'ಸೈಟ್ ನಲ್ಲಿ ನಿಗದಿತ ಗಂಟೆಗಳಿಗೊಮ್ಮೆ ಅಪ್ ಡೇಟ್ ಆಗುತ್ತಿರಬೇಕು. ಈ ಮಾಹಿತಿ ಸಾರ್ವಜನಿಕರಿಗೂ ಆನ್'ಲೈನ್ ನಲ್ಲಿ ಲಭ್ಯವಾಗುತ್ತಿರಬೇಕೆಂದಿದ್ದಾರೆ. 

Stay up to date on all the latest ರಾಜ್ಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp