ಶ್ರೀರಾಮ ಭಕ್ತರಿಗೆ ತಯಾರಾಗುತ್ತಿರುವ ಲಡ್ಡುಗೆ 20 ಸಾವಿರ ಕೆಜಿ ನಂದಿನಿ ತುಪ್ಪ

ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ‘ಭೂಮಿ ಪೂಜೆಯಲ್ಲಿ ಈ ಸಂದರ್ಭದಲ್ಲಿ 1.25 ಲಕ್ಷಕ್ಕೂ ಹೆಚ್ಚು ‘ರಘುಪತಿ ಲಡ್ಡುʼಗಳನ್ನು ತಯಾರಿಸಲು ನಂದಿನಿ ತುಪ್ಪ ಕಳುಹಿಸಿಕೊಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ‘ಭೂಮಿ ಪೂಜೆಯಲ್ಲಿ ಈ ಸಂದರ್ಭದಲ್ಲಿ 1.25 ಲಕ್ಷಕ್ಕೂ ಹೆಚ್ಚು ‘ರಘುಪತಿ ಲಡ್ಡುʼಗಳನ್ನು ತಯಾರಿಸಲು ನಂದಿನಿ ತುಪ್ಪ ಕಳುಹಿಸಿಕೊಡಲಾಗಿದೆ.

ಈ ಲಡ್ಡು ತಯಾರಿಸಲು ಕೆಎಂಎಫ್  20 ಸಾವಿರ ಕೆಜಿ ನಂದಿನಿ ತುಪ್ಪವನ್ನು ಲಡ್ಡು ತಯಾರಿಸುವ ಹನುಮಾನ್ ದೇವಾಲಯಕ್ಕೆ ಕಳುಹಿಸಿದೆ, 15 ಕೆಜಿ ತೂಕದ ಟಿನ್ ಗಳನ್ನು ಟ್ರಕ್ ನಲ್ಲಿ ಕಳುಹಿಸಲಾಗಿದೆ ಎಂದು ಕೆಎಂಎಫ್ ಮ್ಯಾನೇಜಿಂಗ್ ಡೈರೆಕ್ಟರ್ ಬಿಸಿ ಸತೀಶ್ ಹೇಳಿದ್ದಾರೆ.

ಅಯೋಧ್ಯೆ ಬೆಂಗಳೂರಿನಿಂದ 1,800ಕಿಮೀ ದೂರವಿದೆ, ಹೀಗಿರುವಾಗ ಅಯೋಧ್ಯೆಯಲ್ಲಿ ಕರ್ನಾಟಕದ ಚಿತ್ರ ಹೇಗೆ ಬಂತು ಎಂಬ ಪ್ರಶ್ನೆಗೆ ಇಲ್ಲಿದೆ, ಪಾಟ್ನಾದಲ್ಲಿ ಲಡ್ಡು ತಯಾರಿಸುವ   ಹನುಮಾನ್ ದೇವಾಲಯ ಕೆಎಂಎಫ್ ನಿಂದ ತುಪ್ಪ ಖರೀದಿಸಿತ್ತು. ಈ ದೇವಾಲಯದ ಮ್ಯಾನೇಜರ್ ಶೇಷಾದ್ರಿ ಅವರು ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನವರಾಗಿದ್ದಾರೆ.

ಇವರು ಈ ಮೊದಲು ತಿರುಪತಿಯಲ್ಲಿ ಕೆಲಸ ಮಾಡುತ್ತಿದ್ದರು,  ತಿರುಪತಿಯಲ್ಲಿ ಲಡ್ಡು ಮಾಡಲು ನಂದಿನಿ ತುಪ್ಪ ಉಫಯೋಗಿಸುವುದರ ಬಗ್ಗೆ ಮಾಹಿತಿ ಇದ್ದ  ಇವರು ನಂದಿನಿ ತುಪ್ಪ ಬಳಸಲು ಮುಂದಾಗಿದ್ದಾರೆ, ಸುಮಾರು 60 ಮಂದಿ ಸಿಬ್ಬಂದಿ 1.5 ಲಕ್ಷ ಲಡ್ಡು ತಯಾರಿಸಲಿದ್ದಾರೆ, ಹಸುವಿನ ಹಾಲಿನ ಬದಲಾಗಿ ನಂದಿನಿ ತುಪ್ಪವನ್ನು ಬಳಸಲಾಗುತ್ತದೆ  ಎಂದು ಹೇಳಿದ್ದಾರೆ.

ಮಹಾದೇವ್ ಮಂದಿರ ಟ್ರಸ್ಟ್ ಈ ಒಟ್ಟು ಲಡ್ಡುಗಳ ಪೈಕಿ ಅಯೋಧ್ಯೆಯಲ್ಲಿರುವ ಭವ್ಯ ರಾಮ ದೇವಾಲಯದ ನಿರ್ಮಾಣ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳಲು ರಚಿಸಲಾಗಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ  ಸುಮಾರು 51,000 ಲಡ್ಡುಗಳನ್ನು ಹಸ್ತಾಂತರಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com