ರಾಮಲಲ್ಲಾಗೆ ತಾತ್ಕಾಲಿಕ ದೇಗುಲದಿಂದ ಮುಕ್ತಿ: 500 ವರ್ಷಗಳ ಬಳಿಕ ಜನ್ಮಸ್ಥಾನಕ್ಕೆ ಶ್ರೀರಾಮ, ರಾಜ್ಯದಲ್ಲೂ ಶ್ರೀರಾಮನ ಜಪ

ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಭೂಮಿ ನೆರವೇರುವುದರೊಂದಿಗೆ ಶ್ರೀರಾಮನಿಗೆ ಕೊನೆಗೂ ತಾತ್ಕಾಲಿಕ ಜಾಗದಿಂದ ಮುಕ್ತಿ ಸಿಗುವ ಕಾಲ ಹತ್ತಿರಕ್ಕೆ ಬಂದಿದೆ.  ದಶರಥ ಪುತ್ರ, ಅಯೋಧ್ಯಾಧೀಶ ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಕುರಿತ ಕೋಟ್ಯಾಂತರ ಭಾರತೀಯರ ಕನಸು ನನಗಾಸುವ ಕ್ಷಣ ಹತ್ತಿರ ಬಂದಿದ್ದು...

Published: 05th August 2020 09:16 AM  |   Last Updated: 05th August 2020 12:48 PM   |  A+A-


file photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಭೂಮಿ ನೆರವೇರುವುದರೊಂದಿಗೆ ಶ್ರೀರಾಮನಿಗೆ ಕೊನೆಗೂ ತಾತ್ಕಾಲಿಕ ಜಾಗದಿಂದ ಮುಕ್ತಿ ಸಿಗುವ ಕಾಲ ಹತ್ತಿರಕ್ಕೆ ಬಂದಿದೆ.  ದಶರಥ ಪುತ್ರ, ಅಯೋಧ್ಯಾಧೀಶ ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಕುರಿತ ಕೋಟ್ಯಾಂತರ ಭಾರತೀಯರ ಕನಸು ನನಗಾಸುವ ಕ್ಷಣ ಹತ್ತಿರ ಬಂದಿದ್ದು, ಇಂದು ಮಧ್ಯಾಹ್ನ 12.44ರ ಶುಭ ಮುಹೂರ್ತದಲ್ಲಿ ಅಯೋಧ್ಯಯಲ್ಲಿ ರಾಮ ಮಂದಿರಕ್ಕೆ ಪ್ರಧಾನಿ ಮೋದಿಯವರು ಭೂಮಿ ಪೂಜೆ ನೆರವೇರಿಸುತ್ತಿದ್ದು, ಈ ವೇಳೆ ರಾಜ್ಯದಲ್ಲಿರುವ ಎಲ್ಲಾ ದೇಗುಲಗಳಲ್ಲು ಶ್ರೀರಾಮನ ಜಪ ಮುಗಿಲು ಮುಟ್ಟಲಿದೆ. 

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬುಧವಾರ ನಡೆಯಲಿರುವ ಶ್ರೀರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಶಿಲಾನ್ಯಾಸ ಕಾರ್ಯಕ್ರಮ ನಿರ್ವಿಘ್ನವಾಗಿ ನೆರವೇರುವಂತೆ ರಾಜ್ಯದಲ್ಲಿನ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಪಾರ್ಥನೆ ಸಲ್ಲಿಸುವಂತೆ ಮುಜರಾಯಿ ಇಲಾಖೆ ಸೂಚನೆ ನೀಡಿದೆ. 

ಇದೇ ವೇಳೆ ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಮತ್ತು ಪ್ರತೀ ಮನೆಗಳಲ್ಲಿ ಇಷ್ಟ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ರಾಮ ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆಯುವಂತೆ ಪ್ರಾರ್ಥಿಸಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಕೂಡ ಟ್ವೀಟ್ ಮೂಲಕ ಜನತೆಗೆ ಮನವಿ ಮಾಡಿಕೊಂಡಿದ್ದಾರೆ. 

ರಾಜ್ಯ ಬಿಜೆಪಿ ಘಟಕ ಕೂಡ ಕಾರ್ಯಕರ್ತರ ಬಳಿ ಮನವಿ ಮಾಡಿಕೊಂಡಿದ್ದು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ವೇಳೆ ಬಿಜೆಪಿ ಕಾರ್ಯಕರ್ತರು ಬಹಿರಂಗವಾಗಿ ಮೆರವಣಿಗೆ, ಪಟಾಕಿ ಹಚ್ಚಬಾರದು. ಕಾರ್ಯಕರ್ತರು ಪ್ರತೀ ಮನೆಗಳಲ್ಲಿ ದೀಪ ಹಚ್ಚಿ ಸಂಭ್ರಮಿಸಬೇಕೆಂದು ಸೂಚಿಸಿದೆ ಎಂದು ತಿಳಿದುಬಂದಿದೆ. 

Stay up to date on all the latest ರಾಜ್ಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp