ಐಎಎಸ್ ಪರೀಕ್ಷೆ: ಬೆಂಗಳೂರಿನ ಜಯದೇವ್ ದೇಶಕ್ಕೆ 5ನೇ ರ್ಯಾಂಕ್, ರಾಜ್ಯದ ಟಾಪರ್

ಐಎಎಸ್, ಐಪಿಎಸ್ ಮತ್ತಿತರ ಹುದ್ದೆಗಳಿಗೆ ಯುಪಿಎಸ್'ಸಿ ನಡೆಸಿದ 2019ನೇ ಸಾಲಿನ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಬೆಂಗಳೂರಿನ ಸಿ.ಎಸ್.ಜಯದೇವ್ ಯುಪಿಎಸ್'ಸಿ ಪರೀಕ್ಷೆಯಲ್ಲಿ ದೇಶಕ್ಕೆ 5ನೇ ಹಾಗೂ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಐಎಎಸ್, ಐಪಿಎಸ್ ಮತ್ತಿತರ ಹುದ್ದೆಗಳಿಗೆ ಯುಪಿಎಸ್'ಸಿ ನಡೆಸಿದ 2019ನೇ ಸಾಲಿನ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಬೆಂಗಳೂರಿನ ಸಿ.ಎಸ್.ಜಯದೇವ್ ಯುಪಿಎಸ್'ಸಿ ಪರೀಕ್ಷೆಯಲ್ಲಿ ದೇಶಕ್ಕೆ 5ನೇ ಹಾಗೂ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾರೆ. 

ಕೇಂದ್ರ ಲೋಕಸೇವಾ ಆಯೋಗ ನಡೆಸುವ ಕೇಂದ್ರ ನಾಗರೀಕ ಸೇವ್ ಪರೀಕ್ಷೆಯಲ್ಲಿ 2019ನೇ ಸಾಲಿನ ಫಲಿತಾಂಶದಲ್ಲಿ ರಾಜ್ಯದ 42 ಮಂದಿ ಅಭ್ಯರ್ಥಿಗಳು ರ್ಯಾಂಕ್ ಪಡೆದುಕೊಂಡಿದ್ದಾರೆ. 

ಕೀರ್ತನಾ ಎಚ್ಎಸ್ (ಎಐಆರ್ 167), ಸಚಿನ್ ಹಿರೇಮಠ್ ಎಸ್ (213), ಹೇಮಾ ನಾಯಕ್ (225), ಅಭಿಷೇಕ್ ಗೌಡ ಎಂಜೆ (278), ಕೃತಿ ಬಿ (297), ವೆಂಕಟ್ ಕೃಷ್ಣ (336), ಮಿಥುನ್ ಎಚ್ಎನ್ (359), ವೆಂಕಟರಮಣ ಕವಡಿಕೇರಿ (364) . ವರುಣ್ ಬಿಆರ್ (ಎಐಆರ್ 395), ಮಂಜುನಾಥ್ ಆರ್ (406), ಹರೀಶ್ ಬಿಸಿ (409), ಯತೀಶ್ ಆರ್ (419), ಜಗದೀಶ್ ಅಡಹಳ್ಳಿ (440), ಸ್ಪರ್ಶ ನೀಲಗಿ (443), ವಿವೇಕ್ ಹೆಚ್.ಬಿ (444), ಆನಂದ್ ಕಲ್ಲಡಗಿ (446), ಮೊಹಮ್ಮದ್ ನಾಡಿಮುದ್ದೀನ್ (461), ಮೇಘನಾ ಕೆಟಿ (ಎಐಆರ್ 465), ಸೈಯದ್ ಜಹೇದ್ ಅಲಿ (476), ವಿವೇಕ್ ರೆಡ್ಡಿ ಎನ್ (485), ಹೇಮಂತ್ ಎನ್ (498), ಕಮ್ಮರುದ್ದೀನ್ (511), ವರುಣ್ ಕೆ ಗೌಡ (528), ಪ್ರಫುಲ್ ದೇಸಾಯಿ (532), ರಾಘವೇಂದ್ರ ಎನ್ (536), ಭಾರತ್ ಕೆ.ಆರ್ (545), ಪೃಥ್ವಿ ಎಸ್ ಹುಲ್ಲಟ್ಟಿ (582), ಸುಹಾಸ್ ಆರ್ (583),

ಅಭಿಲಾಶ್ ಶಶಿಕಾಂತ್ ಬದ್ದೂರ್ (591), ದರ್ಶನ ಕುಮಾರ್ ಎಚ್‌ಜಿ (594), ಸವಿತಾ ಗೋಟ್ಯಾಲ್ (626), ಪ್ರಜ್ವಾಲ್ ರಮೇಶ್ (646), ಪ್ರಿಯಾಂಕಾ ಕಾಂಬ್ಲೆ (617), ಗಜಾನಾನ ಬೇಲ್ (663), ಚೈತ್ರಾ ಎಎಂ (713), ಚಂದನ್ ಜಿಎಸ್ (777) ಮತ್ತು ಮಂಜೇಶ್ ಕುಮಾರ್ ಎಪಿ (800) ಅವರು ಉತ್ತಮ ರ‍್ಯಾಂಕ್‌‌ ಪಡೆಯುವುದರೊಂದಿಗೆ, ರಾಜ್ಯದಲ್ಲಿ ಮೊದಲ ಮೂವತ್ತರೊಳಗೆ ಸ್ಥಾನ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com