ರಾಮ ಮಂದಿರಕ್ಕೆ 'ಭದ್ರ' ಮುಹೂರ್ತ ನಿಗದಿಪಡಿಸಿದ್ದ ಗುರೂಜಿಯಿಂದ ಮೊಬೈಲ್ ನಲ್ಲಿ ಭೂಮಿಪೂಜೆ ವೀಕ್ಷಣೆ!

ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಮುಹೂರ್ತ ನಿಗದಿಪಡಿಸಿದ್ದ ಗುರೂಜಿ ವಿಜಯೇಂದ್ರ ಶರ್ಮಾ ಅವರು ಭೂಮಿಪೂಜೆಯನ್ನು ಮೊಬೈಲ್ ನಲ್ಲಿ ವೀಕ್ಷಣೆ ಮಾಡಿದರು. 
ಗುರೂಜಿ ವಿಜಯೇಂದ್ರ ಶರ್ಮಾ
ಗುರೂಜಿ ವಿಜಯೇಂದ್ರ ಶರ್ಮಾ

ಬೆಳಗಾವಿ: ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಮುಹೂರ್ತ ನಿಗದಿಪಡಿಸಿದ್ದ ಗುರೂಜಿ ವಿಜಯೇಂದ್ರ ಶರ್ಮಾ ಅವರು ಭೂಮಿಪೂಜೆಯನ್ನು ಮೊಬೈಲ್ ನಲ್ಲಿ ವೀಕ್ಷಣೆ ಮಾಡಿದರು. 

ಬೆಳಗಾವಿಯಲ್ಲಿ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಗುರೂಜಿ ವಿಜಯೇಂದ್ರ ಶರ್ಮಾ ಅವರು ನೆಲೆಸಿರುವ ಜಕ್ಕಿನ್ಹೊಂಡಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಭೂಮಿಪೂಜೆ ನೇರಪ್ರಸಾರವಾಗುತ್ತಿದ್ದ ಹಿನ್ನೆಲೆಯಲ್ಲಿ ಮೊಬೈಲ್ ಫೋನ್ ಮೂಲಕವೇ ಭೂಮಿಪೂಜೆಯನ್ನು ವೀಕ್ಷಿಸಿದ್ದಾರೆ. 

ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮುಹೂರ್ತ ನಿಗದಿ ಮಾಡಿದ ಬಳಿಕ ಅರ್ಚಕ ಹಾಗೂ ವಿದ್ವಾಂಸ ಪಂಡಿತ್ ಎನ್ಆರ್ ವಿಜಯೇಂದ್ರ ಶರ್ಮಾ ಅವರಿಗೆ ಹಲವು ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಲಾಗುತ್ತಿವೆ. ಕೂಡಲೇ ಮುಹೂರ್ತದ ದಿನಾಂಕ ಬದಲಿಸದೇ ಹೋದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಸುತ್ತಿದ್ದಾರೆಂದು ಶರ್ಮಾ ಅವರು ಹೇಳಿದ್ದರು. 

ವಿಜಯೇಂದ್ರ ಶರ್ಮಾ ಅವರು ಆಗಸ್ಟ್ 5 ರಂದು ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಭವ್ಯ ರಾಮಮಂದಿರಕ್ಕೆ ಭೂಮಿ ಪೂಜೆಗೆ ಮುಹೂರ್ತ ನಿಗದಿ ಮಾಡಿದ್ದರು. ಇವರು ನಿಗದಿ ಮಾಡಿದ್ದ ಮುಹೂರ್ತವನ್ನು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಒಪ್ಪಿಕೊಂಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com