ಮುಂಬೈ ಕರ್ನಾಟಕ, ಕರಾವಳಿ-ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆ ಜಲಾಶಯಗಳಿಗೆ ಭಾರೀ ಒಳಹರಿವು

ಕಳೆದ ಕೆಲ ದಿನಗಳಿಂದ ಉತ್ತರ ಕರ್ನಾಟಕ ಹಾಗೂ ಕರಾವಳಿ, ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದೆ. ನದಿಗಳು ತುಂಬಿ ಹರಿಯುತ್ತಿದ್ದು,ಹಳ್ಳ-ಕೊಳ್ಳ,ನದಿಗಳು ಉಕ್ಕಿ ಹರಿಯುತ್ತಿವೆ.
ಜಲಾಶಯಗಳಿಂದ ನೀರಿನ ಒಳಹರಿವು
ಜಲಾಶಯಗಳಿಂದ ನೀರಿನ ಒಳಹರಿವು

ಬೆಂಗಳೂರು: ಕಳೆದ ಕೆಲ ದಿನಗಳಿಂದ ಉತ್ತರ ಕರ್ನಾಟಕ ಹಾಗೂ ಕರಾವಳಿ, ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದೆ. ನದಿಗಳು ತುಂಬಿ ಹರಿಯುತ್ತಿದ್ದು,ಹಳ್ಳ-ಕೊಳ್ಳ,ನದಿಗಳು ಉಕ್ಕಿ ಹರಿಯುತ್ತಿವೆ.

ಉತ್ತಮ ಮಳೆ ಹಿನ್ನಲೆಯಲ್ಲಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಿದೆ.ಮಹಾರಾಷ್ಟ್ರ ಮತ್ತು ಬೆಳಗಾವಿ ಭಾಗದಲ್ಲಿ ಹೆಚ್ಚಿನ ಮಳೆ ಸುರಿಯತ್ತಿರುವ ಹಿನ್ನೆಲೆಯಲ್ಲಿ  ಕೃಷ್ಣಾ ನದಿ ಉಕ್ಕಿ ಹರಿಯುತ್ತಿವೆ. ರಾಜ್ಯದ ವಿವಿಧ ಅಣೆಕಟ್ಟೆಗಳು ಭಾರೀ ನೀರು ಹರಿದು ಬರುತ್ತಿದ್ದು,ಜಲಾಶಯಗಳು ತುಂಬುವ ಸಾಧ್ಯತೆ ಹೆಚ್ಚಿದೆ.

ಕೊಡಗು, ವಯನಾಡು ಪ್ರದೇಶದಲ್ಲಿ ಮಳೆ ಹೆಚ್ಚಿರುವ ಕಾರಣ,ಕೆಆರ್ ಎಸ್, ಕಬಿನಿ, ಹಾರಂಗಿ, ಇತರೆ ಅಣೆಕಟ್ಟೆಗಳಿಗೆ ಯಥೇಚ್ಛವಾಗಿ ನೀರು ಹರಿದು ಬರುತ್ತಿದೆ. ಮೈಸೂರು ಭಾಗದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಚಿಕ್ಕಮಗಳೂರು,ಶಿವಮೊಗ್ಗ ಹಾಗೂ ಉತ್ತರ ಕನ್ನಡ ಭಾಗದಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ಲಿಂಗನಮಕ್ಕಿ ಡ್ಯಾಂನಲ್ಲೂ  ಒಳ ಹರಿವು ಹೆಚ್ಚಾಗಿದೆ. ಘಟಪ್ರಭಾ, ಮಲಪ್ರಭಾಮ ಹೇಮಾವತಿ ಭಾಗದಲ್ಲೂ  ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಆಲಮಟ್ಟಿ ಜಲಾಶಯ: ಹೆಚ್ಚಿನ ನೀರು ಹರಿದು ಬರುತ್ತಿರುವ ಕಾರಣ ಜಲಾಶಯ ಭರ್ತಿಯತ್ತ ಸಾಗಿದೆ.519 ಮೀಟರ್ ಎತ್ತರವಿರುವ ಜಲಾಶಯ 517.76 ಮೀಟರ್ ಭರ್ತಿಯಾಗಿದೆ.57 ಸಾವಿರ ಕ್ಯೂಸೆಕ್ಸ್ ಒಳಹರಿವಿದ್ದು16 ಸಾವಿರ ಕ್ಯೂಸೆನ್ಸ್ ನೀರನ್ನು ನದಿಗೆ ಬಿಡಲಾಗಿದೆ​. ಅಣೆಕಟ್ಟು ನೀರಿನ ಸಂಗ್ರಹ ಸಾಮರ್ಥ್ಯ- 119.26 ಟಿಎಂಸಿ ಇದ್ದು,ಇಂದಿನ ನೀರು ಸಂಗ್ರಹ- 94.36 ಟಿಎಂಸಿ ಇದೆ.

ಲಿಂಗನಮಕ್ಕಿ ಜಲಾಶಯ: ನೀರಿನ ಒಳಹರಿವು ದಿನೇ ದಿನೇ ಹೆಚ್ಚುತ್ತಿದ್ದು ಅಣೆಕಟ್ಟೆ ಭರ್ತಿಯಾಗಲೂ ನಿರಂತರವಾಗಿ ಕೆಲ ವಾರಗಳು ಮಳೆಯಾದರೆ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಲಿದೆ. ಪ್ರಸಕ್ತ ಅಣೆಕಟ್ಟೆ ಗರಿಷ್ಠ ಮಟ್ಟ-554.4 ಮೀಟರ್ ಇದ್ದು 151.75 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದೆ.ಇಂದಿನ ನೀರಿನ ಮಟ್ಟ- 543.05 ಮೀಟರ್​, ಇಂದು 047.05 ಟಿಎಂಸಿ ನೀರು ಸಂಗ್ರಹವಾಗಿದೆ.ಜಲಾಶಯಕ್ಕೆ 62,003 ಕ್ಯೂಸೆಕ್ಸ್​ ಒಳಹರಿವಿದೆ. 

ತುಂಗಾ ಜಲಾಶಯ : ಶಿವಮೊಗ್ಗ ಸೇರಿದಂತೆ ಮಲೆನಾಡಿನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ತುಂಬಾ ಜಲಾಶಯ ನೀರಿನಮ ಟ್ಟ ಭಾರಿ ಏರಿಕೆ ಕಂಡು ಬಂದಿದೆ. ಜಲಾಶಯದ ಗರಿಷ್ಠ ಸಾಮಾರ್ಥ್ಯ 588 ಮೀಟರ್ ಇದ್ದು ಇಂದು 587 ಮೀಟರ್ ನೀರು ತುಂಬಿದ್ದು ಜಲಾಶಯ ಭರ್ತಿ ಯಾಗಲು ಕೇವಲ 1 ಮೀಟರ್ ಮಾತ್ರ ಬಾಕಿ ಇದೆ.ಹೀಗಾಗಿ ಮುನ್ನಚ್ಚರಿಕೆ ಕ್ರಮವಾಗಿ ಒಳಹರಿವಿಗಿಂತ ಹೆಚ್ಚಿನ ನೀರನ್ನು ನದಿಪಾತ್ರಕ್ಕೆ ಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ- 103.16 ಟಿಎಂಸಿ ಆಗಿದ್ದು, ಇಂದು 98 ಟಿಎಂಸಿ ನೀರು ಸಂಗ್ರಹವಾಗಿದೆ.ಜಲಾಶಯಕ್ಕೆ 60,000 ಕ್ಯೂಸೆಕ್ಸ್ ಒಳಹರಿವಿದ್ದು​ 65000 ಕ್ಯೂಸೆನ್ಸ್ ನೀರನ್ನು ನದಿಗೆ ಬಿಡಲಾಗಿದೆ.

ಇತರ ಜಲಾಶಯಗಳ ನೀರಿನ ಮಟ್ಟ ಒಳ ಹಾಗೂ ಹೊರ ಹರಿವಿನ ಮಾಹಿತಿ:
ಘಟಪ್ರಭಾ ಜಲಾಶಯ : ಗರಿಷ್ಠ ಮಟ್ಟ-662.94 ಮೀಟರ್​,ಇಂದಿನ ನೀರಿನ ಮಟ್ಟ- 653.14 ಮೀಟರ್​,ಗರಿಷ್ಠ ಸಾಮರ್ಥ್ಯ- 48.98 ಟಿಎಂಸಿ,ನೀರು ಸಂಗ್ರಹ- 28.23 ಟಿಎಂಸಿ,ಇಂದಿನ  ಒಳಹರಿವು- 4355 ​ಕ್ಯೂಸೆಕ್ಸ್,ಇಂದಿನ ಹೊರ ಹರಿವು- 132 ಕ್ಯೂಸೆಕ್ಸ್ ಇದೆ​.

ಮಲಪ್ರಭಾ ಜಲಾಶಯ : ಗರಿಷ್ಠ ಮಟ್ಟ-633.83 ಮೀಟರ್​,ಇಂದಿನ ಮಟ್ಟ- 628.48 ಮೀಟರ್, ಗರಿಷ್ಠ ಸಾಮರ್ಥ್ಯ- 34.35 ಟಿಎಂಸಿ,ಇಂದಿನ ನೀರು ಸಂಗ್ರಹ- 17.72 ಟಿಎಂಸಿ,ನೀರನ ಒಳಹರಿವು- 2,955 ಕ್ಯೂಸೆಕ್ಸ್​,ಇಂದಿನ ಹೊರ ಹರಿವು- 164 ಕ್ಯೂಸೆಕ್ಸ್​ ಇದೆ.

ಹಾರಂಗಿ ಜಲಾಶಯ: ಗರಿಷ್ಠ ಮಟ್ಟ-871.42 ಮೀಟರ್​ ,ಇಂದಿನ ಮಟ್ಟ- 870.94 ಮೀಟರ್​, ಗರಿಷ್ಠ ಸಾಮರ್ಥ್ಯ- 8.50 ಟಿಎಂಸಿ, ಇಂದಿನ ನೀರು ಸಂಗ್ರಹ-7.71 ಟಿಎಂಸಿ,ಇಂದಿನ ಒಳಹರಿವು- 5486 ಕ್ಯೂಸೆಕ್ಸ್​ ,ಇಂದಿನ ಹೊರ ಹರಿವು- 5482 ಕ್ಯೂಸೆಕ್ಸ್​.

ಹೇಮಾವತಿ ಜಲಾಶಯ : ಗರಿಷ್ಠ ಮಟ್ಟ-890.63 ಮೀಟರ್,​ಇಂದಿನ ಮಟ್ಟ- 883.73 ಮೀಟರ್, ಗರಿಷ್ಠ ಸಾಮರ್ಥ್ಯ- 35.76 ಟಿಎಂಸಿ,ಇಂದಿನ ನೀರು ಸಂಗ್ರಹ- 18.9 2 ಟಿಎಂಸಿ,ಇಂದಿನ ಒಳಹರಿವು- 8625 ಕ್ಯೂಸೆಕ್ಸ್​,ಇಂದಿನ ಹೊರ ಹರಿವು- 630 ಕ್ಯೂಸೆಕ್ಸ್​.

ಕೆಆರ್​ಎಸ್​ ಜಲಾಶಯ​: ಗರಿಷ್ಠ ಸಂಗ್ರಹ ಸಾಮರ್ಥ್ಯ- 45.5 ಟಿಎಂಸಿ,ಇಂದಿನ ನೀರು ಸಂಗ್ರಹ- 33.05 ಟಿಎಂಸಿ,ಇಂದಿನ ಒಳಹರಿವು- 37,000 ಕ್ಯೂಸೆಕ್ಸ್​,ಇಂದಿನ ಹೊರ ಹರಿವು- 4,712 ಕ್ಯೂಸೆಕ್ಸ್​.

ಕಬಿನಿ ಜಲಾಶಯ : ಗರಿಷ್ಠ ಮಟ್ಟ-696.16 ಮೀಟರ್​,ಇಂದಿನ ಮಟ್ಟ- 694.90 ಮೀಟರ್​, ಗರಿಷ್ಠ ಸಾಮರ್ಥ್ಯ- 19.52 ಟಿಎಂಸಿ,ಇಂದಿನ ನೀರು ಸಂಗ್ರಹ-16.64 ಟಿಎಂಸಿ,ಇಂದಿನ ಒಳಹರಿವು- 26,056 ಕ್ಯೂಸೆಕ್ಸ್​,ಇಂದಿನ ಹೊರ ಹರಿವು- 22,058 ಕ್ಯೂಸೆಕ್ಸ್​ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com