ಕರಾವಳಿ ಜನತೆಗೆ ಶುಭಸುದ್ದಿ!  ದಕ್ಷಿಣ ಕನ್ನಡದಲ್ಲಿ ಟಿಸಿಎಸ್ 500 ಕೋಟಿ ಹೂಡಿಕೆ,  4,000 ಉದ್ಯೋಗ ಸೃಷ್ಟಿ

ಕರ್ನಾಟಕದ ಕರಾವಳಿಗೆ ಶುಭಸುದ್ದಿ! ದೇಶದ ಪ್ರಮುಖ ಸಾಫ್ಟ್‌ವೇರ್ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಕಡಲ ತಡಿಯ ನಗರಿ ಮಂಗಳೂರಿನಲ್ಲಿ ವಿಶಾಲವಾದ ಕಚೇರಿಯನ್ನು ತೆರೆಯಲು ಯೋಜಿಸುತ್ತಿದೆ. 
ಟಿಸಿಎಸ್
ಟಿಸಿಎಸ್

ಮಂಗಳೂರು: ಕರ್ನಾಟಕದ ಕರಾವಳಿಗೆ ಶುಭಸುದ್ದಿ! ದೇಶದ ಪ್ರಮುಖ ಸಾಫ್ಟ್‌ವೇರ್ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಕಡಲ ತಡಿಯ ನಗರಿ ಮಂಗಳೂರಿನಲ್ಲಿ ವಿಶಾಲವಾದ ಕಚೇರಿಯನ್ನು ತೆರೆಯಲು ಯೋಜಿಸುತ್ತಿದೆ.

ಈ ವರ್ಷದ ಮಾರ್ಚ್‌ನಿಂದ 27,107.39 ಕೋಟಿ ರೂ.ಗಳ ಬಂಡವಾಳವನ್ನು ಕರ್ನಾಟಕದಲ್ಲಿ ಹೂಡಿಕೆ ಮಾಡಲು ತೀರ್ಮಾನಿಸಿರುವ ಟಿಸಿಎಸ್ ಗೆ  37 ಯೋಜನೆಗಳಿಗೆ ಕರ್ನಾಟಕ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಇನ್ನು ಈ ಯೋಜನೆಗಳು ರಾಜ್ಯದಲ್ಲಿ 46,000 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ

6,136.97 ಕೋಟಿ ಮೌಲ್ಯದ 85 ಯೋಜನೆಗಳು 31,648 ಉದ್ಯೋಗಗಳನ್ನು ಸೃಷ್ಟಿಸಲಿವೆ ಮತ್ತು 18,989.02 ಕೋಟಿ ಮೌಲ್ಯದ 16 ಯೋಜನೆಗಳಿಂದ ಇನ್ನೂ 10,000 ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ಹೇಳಲಾಗಿದೆ.

ಬಳ್ಲಾರಿಯಲ್ಲಿರುವ ಜೆಎಸ್‌ಡಬ್ಲ್ಯು ವಿಜಯನಗರ ಮೆಟಾಲಿಕ್ಸ್ ಲಿಮಿಟೆಡ್ 13,026 ಕೋಟಿ ರೂ., ಸಂಶೋಧನೆ ಮತ್ತು ಪ್ರಾಯೋಗಿಕ ಅಭಿವೃದ್ಧಿ ಸೇವೆಗಳಿಗಾಗಿ ಬೆಂಗಳೂರಿನ ಸೀಮೆನ್ಸ್ ಹೆಲ್ತ್‌ಕೇರ್ 1,085.30 ಕೋಟಿ ರೂ. ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟಿಸಿಎಸ್ 500 ಕೋಟಿ ರೂ.ಗಳ ಹೂಡಿಕೆಗೆ ಈಗಾಗಲೇ ಅನುಮೋದನೆ ನೀಡಿದೆ.

ಸಾಪ್ಸ್ ಲ್ಯಾಬ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಂಗಳೂರಿನ ಹೊರವಲಯದಲ್ಲಿರುವ ಹೈಟೆಕ್ ರಕ್ಷಣಾ ಮತ್ತು ಏರೋಸ್ಪೇಸ್ ಪಾರ್ಕ್ (ಐಟಿ ವಲಯ) ಗಾಗಿ 499 ಕೋಟಿ ರೂ. ಹೂಡಿಕೆಗೆ ಒಪ್ಪಿದ್ದು  ಐದು ವರ್ಷಗಳ ಅವಧಿಯಲ್ಲಿ ಹೂಡಿಕೆಯ ವೆಚ್ಚವನ್ನು 490 ಕೋಟಿ ರೂ.ಗಳಿಂದ 1,000 ಕೋಟಿಗೆ ಹೆಚ್ಚಿಸಲಾಗುವುದು ಎಂದು ಕಂಪನಿ ತಿಳಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ 38 ಎಕರೆ ಪ್ರದೇಶದಲ್ಲಿ ಟಿಸಿಎಸ್ ತನ್ನ ಕ್ಯಾಂಪಸ್ ತೆರೆಯಲಿದೆ. ಇದು ಸಂಪೂರ್ಣವಾಗಿಕಾರ್ಯರೂಪಕ್ಕೆ ಬಂದ ನಂತರ  4,000 ಕ್ಕೂ ಹೆಚ್ಚು ಜನರು ಉದ್ಯೋಗ ಪಡೆಯುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com