ಕೋವಿಡ್ ರೋಗಿಗಳ ಸಹಾಯಕ್ಕೆ ಎಚ್ ಎಎಲ್ ನಿಂದ ಎರಡು ಆಂಬ್ಯುಲೆನ್ಸ್ ಕೊಡುಗೆ

ಕೋವಿಡ್ ರೋಗಿಗಳಿಗೆ ನೆರವಾಗಲು ಎಚ್ಎಎಲ್ ಸಂಸ್ಥೆಯು ಎರಡು ಆಂಬ್ಯುಲೆನ್ಸ್ ಗಳನ್ನು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಆಂಬ್ಯುಲೆನ್ಸ್ ಗಳನ್ನು ಇಂದು ಹಸ್ತಾಂತರಿಸಿಕೊಂಡರು..
ಡಾ. ಕೆ. ಸುಧಾಕರ್ ಅವರಿಗೆ ಆಂಬ್ಯುಲೆನ್ಸ್ ಕೀ ಹಸ್ತಾಂತರ
ಡಾ. ಕೆ. ಸುಧಾಕರ್ ಅವರಿಗೆ ಆಂಬ್ಯುಲೆನ್ಸ್ ಕೀ ಹಸ್ತಾಂತರ

ಬೆಂಗಳೂರು: ಕೋವಿಡ್ ರೋಗಿಗಳಿಗೆ ನೆರವಾಗಲು ಎಚ್ಎಎಲ್ ಸಂಸ್ಥೆಯು ಎರಡು ಆಂಬ್ಯುಲೆನ್ಸ್ ಗಳನ್ನು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಆಂಬ್ಯುಲೆನ್ಸ್ ಗಳನ್ನು ಇಂದು
 ಹಸ್ತಾಂತರಿಸಿಕೊಂಡರು..

ಓಲ್ಡ್ ಏರ್ ಪೋರ್ಟ್ ರಸ್ತೆಯ ಎಚ್ಎಎಲ್ನ ಕೋವಿಡ್ ಆರೈಕೆ ಕೇಂದ್ರ ದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಎಚ್ ಎಎಲ್ ಸಂಸ್ಥೆಯಿಂದ 2 ಆಂಬ್ಯುಲೆನ್ಸ್ ಗಳನ್ನು ನೀಡಲಾಯಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 200 ಹಾಸಿಗೆ ಇರುವ ಎಚ್ ಎಎಲ್ ನ ಕೋವಿಡ್ ಕೇಂದ್ರಕ್ಕೆ ಭೇಟಿ‌ ನೀಡಿ ಪರಿಶೀಲಿಸಿದ್ದು,ಅಚ್ಚುಕಟ್ಟಾ ಗಿ ನಡೆಯುತ್ತಿದೆ.ಈಗ ಈ ಪ್ರತಿಷ್ಠಿತ ಎಚ್ ಎಎಲ್ ಸಂಸ್ಥೆಯು ಸಿಎಸ್ ಆರ್ ಯೋಜನೆಯಡಿ ಎರಡು ಆಂಬ್ಯುಲೆನ್ಸ್ ಗಳನ್ನು ಬೌರಿಂಗ್ ಮತ್ತು ಲೇಡಿ  ಕರ್ಜ ನ್ ಆಸ್ಪತ್ರೆಗೆ ಉಚಿತವಾಗಿ ನೀಡಿದೆ.ಈ ಮೂಲಕ ಎಚ್ಎಎಲ್ ಮತ್ತಷ್ಟು ಜವಾ ಬ್ದಾರಿಯನ್ನು ತೆಗೆದುಕೊಂಡಿದೆ.ಈ ಸಂಸ್ಥೆಗೆ ಸರ್ಕಾರದ ಪರವಾಗಿ ಕೃತ ಜ್ಞತೆ ಅರ್ಪಿಸುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com