ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ನಿರ್ವಿಘ್ನವಾಗಿ ಸಾಗಲಿ ಎಂದು ವಿಶೇಷ ಪೂಜೆ ಮಾಡಿದ್ದ ತಲಕಾವೇರಿ ಅರ್ಚಕ!

ಜಿಲ್ಲೆಯಲ್ಲಿ ಭಾರೀ ಮಳೆಗೆ ಭಾಗಮಂಡಲ ವ್ಯಾಪ್ತಿಯ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಕುಸಿದು ಬಿದ್ದು ತಲಕಾವೇರಿ ದೇವಸ್ಥಾನದ ಪ್ರಧಾನ ಅರ್ಚಕ ಟಿ ಎಸ್ ನಾರಾಯಣ ಆಚಾರ್ ಸೇರಿದಂತೆ 5 ಮಂದಿ ಕಣ್ಮರೆಯಾಗಿದ್ದು ಅವರ ಹುಡುಕಾಟ ಮುಂದುವರಿದಿದೆ. 
ಕಳೆದ ಮೇ 8ರಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ತಂಡ ತಲಕಾವೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅರ್ಚಕ ನಾರಾಯಣ್ ಆಚಾರ್ ಅಲ್ಲಿನ ಕೆಲಸಗಳ ಬಗ್ಗೆ ತೋರಿಸುತ್ತಿರುವುದು
ಕಳೆದ ಮೇ 8ರಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ತಂಡ ತಲಕಾವೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅರ್ಚಕ ನಾರಾಯಣ್ ಆಚಾರ್ ಅಲ್ಲಿನ ಕೆಲಸಗಳ ಬಗ್ಗೆ ತೋರಿಸುತ್ತಿರುವುದು

ಕೊಡಗು: ಜಿಲ್ಲೆಯಲ್ಲಿ ಭಾರೀ ಮಳೆಗೆ ಭಾಗಮಂಡಲ ವ್ಯಾಪ್ತಿಯ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಕುಸಿದು ಬಿದ್ದು ತಲಕಾವೇರಿ ದೇವಸ್ಥಾನದ ಪ್ರಧಾನ ಅರ್ಚಕ ಟಿ ಎಸ್ ನಾರಾಯಣ ಆಚಾರ್ ಸೇರಿದಂತೆ 5 ಮಂದಿ ಕಣ್ಮರೆಯಾಗಿದ್ದು ಅವರ ಹುಡುಕಾಟ ಮುಂದುವರಿದಿದೆ. 

ಇದಕ್ಕೂ ಮುನ್ನ ಅಂದರೆ ಮೊನ್ನೆ ಬುಧವಾರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿದ ದಿನ ದೇವಾಲಯ ನಿರ್ಮಾಣ ನಿರ್ವಿಘ್ನವಾಗಿ ನೆರವೇರಲಿ ಎಂದು ಪ್ರಧಾನ ಅರ್ಚಕರು ತಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಅದರ ವಿಡಿಯೊ ಇದೀಗ ವ್ಯಾಪಕವಾಗಿ ವೈರಲ್ ಆಗುತ್ತಿದೆ. 

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ತಂಡ ಕಳೆದ ಮೇ 8ರಂದ ತಲಕಾವೇರಿಯಲ್ಲಿ ಲಾಕ್ ಡೌನ್ ಪರಿಸ್ಥಿತಿಯನ್ನು ವರದಿ ಮಾಡಲು ತೆರಳಿದ್ದಾಗ, ಪತ್ರಿಕೆ ಪ್ರತಿನಿಧಿಗಳಿಗೆ ಪರಿಹಾರ ಕಾರ್ಯ ಅಪೂರ್ಣವಾಗಿರುವ ಬಗ್ಗೆ ಅರ್ಚಕ ನಾರಾಯಣ್ ಆಚಾರ್ ಕಳವಳ ವ್ಯಕ್ತಪಡಿಸಿದ್ದರು. 

ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷದ ಪ್ರವಾಹ, ಭೂಕುಸಿತ, ಅಪಾರ ಪ್ರಮಾಣದ ಸಾವು-ನೋವುಗಳನ್ನು ನೆನಪಿಸಿಕೊಳ್ಳುತ್ತಿರುವ ರೀತಿಯಲ್ಲಿ ಈ ವರ್ಷ ಕೂಡ ಮಳೆ, ಪ್ರವಾಹವಾಗುತ್ತಿದೆ. ಭೂಕುಸಿತ ನಂತರ ತಲಕಾವೇರಿ ದೇವಸ್ಥಾನದ ಪ್ರಧಾನ ಅರ್ಚಕ ಟಿ ಎಸ್ ನಾರಾಯಣ ಆಚಾರ್, ಅವರ ಪತ್ನಿ ಶಾಂತಾ, ಸಹೋದರ ಆನಂದತೀರ್ಥ ಹಾಗೂ ಮತ್ತಿಬ್ಬರು ಸಹಾಯಕ ಅರ್ಚಕರು ಕಣ್ಮರೆಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com