ಕೋವಿಡ್-19 ಚೇತರಿಕೆ ಪ್ರಮಾಣ: ರಾಜ್ಯದಲ್ಲಿ ಶೇ.11.37, ಬೆಂಗಳೂರಿನಲ್ಲಿ ಶೇ.20.75ಕ್ಕೆ ಏರಿಕೆ

 ರಾಜ್ಯದಲ್ಲಿ ಕೋವಿಡ್-19 ಚೇತರಿಕೆ ಪ್ರಮಾಣದಲ್ಲಿ ಪ್ರಗತಿಯಾಗಿದ್ದು,ವಾರದೊಳಗೆ ಶೇ.11.37ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿನ ಚೇತರಿಕೆ ಪ್ರಮಾಣ ಶೇ. 29.59 ರಿಂದ ಶೇ. 20.75ಕ್ಕೆ ಏರಿಕೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಚೇತರಿಕೆ ಪ್ರಮಾಣದಲ್ಲಿ ಪ್ರಗತಿಯಾಗಿದ್ದು,ವಾರದೊಳಗೆ ಶೇ.11.37ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿನ ಚೇತರಿಕೆ ಪ್ರಮಾಣ ಶೇ. 29.59 ರಿಂದ ಶೇ. 20.75ಕ್ಕೆ ಏರಿಕೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

ಜುಲೈ 30ರಂದು 46, 694 ಜನರು ರಾಜ್ಯದಲ್ಲಿ ಗುಣಮುಖರಾಗಿದ್ದರು. ವಾರದೊಳಗೆ 80 ಸಾವಿರದ  290 ಮಂದಿ ಗುಣಮುಖರಾಗಿದ್ದಾರೆ.  ರಾಜ್ಯದಲ್ಲಿ ಸಾವಿನ ಪ್ರಮಾಣ ಕೂಡಾ ಕಡಿಮೆಯಾಗಿದೆ.  ರಾಜ್ಯದಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ 42 ಜನರು ಸಾವನ್ನಪ್ಪುತ್ತಿದ್ದರೆ ದೆಹಲಿಯಲ್ಲಿ 204, ಮಹಾರಾಷ್ಟ್ರದಲ್ಲಿ 134, ತಮಿಳುನಾಡಿನಲ್ಲಿ 58 ಪುದುಚೇರಿಯಲ್ಲಿ 42 ಜನರು ಸಾವಿಗೀಡಾಗುತ್ತಿದ್ದಾರೆ ಎಂದು ಸುಧಾಕರ್ ಹೇಳಿದರು.

ಬೆಂಗಳೂರಿನಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ 121 ಜನರು ಸಾವನ್ನಪ್ಪುತ್ತಿದ್ದಾರೆ. ಮುಂಬೈಯಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ 529, ಚೆನ್ನೈ 313, ಪುಣೆ 258, ಅಹಮದಾಬಾದ್ 224, ದೆಹಲಿ 204 ಮತ್ತು ಕೊಲ್ಕತ್ತಾ 191 ಜನರು ಸಾವಿಗೀಡಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ವಾರದ ಹಿಂದೆ ದಿನವೊಂದಕ್ಕೆ 3000 ಆಂಟಿಜಿನ್ ಟೆಸ್ಟ್ ಮಾಡಲಾಗುತಿತ್ತು. ಆದರೆ, ಈಗ ಈ ಸಂಖ್ಯೆ 16 ಸಾವಿರಕ್ಕೆ ಹೆಚ್ಚಳವಾಗಿದೆ. ಇದನ್ನು 10 ಪಟ್ಟು ಹೆಚ್ಚಳ ಮಾಡುವ ನಿಟ್ಟಿನಲ್ಲಿ ನಿರ್ಧರಿಸಿದ್ದೇವೆ.ಆದರೆ ಮಾನವ ಸಂಪನ್ಮೂಲ ಕೊರತೆಯಿದೆ. ಆದ್ದರಿಂದ ಪ್ರತಿದಿನ ವಾಕ್ ಇನ್ ಸಂದರ್ಶನ ಏರ್ಪಡಿಸಲಾಗುತ್ತಿದೆ. ಎಲ್ಲಾ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೊಬೈಲ್ ಟೆಸ್ಟಿಂಗ್ ಘಟಕಗಳು
ಹಾಗೂ 700 ಅಂಬ್ಯುಲೆನ್ಸ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com