ಕೊರೋನಾಗೆ ತತ್ತರಿಸಿದ ಕರುನಾಡು: ಬೆಂಗಳೂರಿನಲ್ಲಿ ದಾಖಲೆಯ 2665 ಸೇರಿ 7,178 ಪ್ರಕರಣ ಪತ್ತೆ, 1.72 ಲಕ್ಷ ಸೋಂಕು!

ಮಹಾಮಾರಿ ಕೊರೋನಾಗೆ ಕರ್ನಾಟಕ ತತ್ತರಿಸಿದ್ದು ಇಂದು ದಾಖಲೆಯ 7,178 ಪ್ರಕರಣಗಳು ಪತ್ತೆಯಾಗಿದ್ದು 93 ಮಂದಿ ಬಲಿಯಾಗಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಹಾಮಾರಿ ಕೊರೋನಾಗೆ ಕರ್ನಾಟಕ ತತ್ತರಿಸಿದ್ದು ಇಂದು ದಾಖಲೆಯ 7,178 ಪ್ರಕರಣಗಳು ಪತ್ತೆಯಾಗಿದ್ದು 93 ಮಂದಿ ಬಲಿಯಾಗಿದ್ದಾರೆ. 

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ  7,178 ಕೊರೋನಾ ಸೋಂಕು ಪತ್ತೆಯಾಗಿದ್ದು ಒಟ್ಟಾರೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,72,102ಕ್ಕೆ ಏರಿಕೆಯಾಗಿದೆ. 

ರಾಜ್ಯದಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು ಇಂದು 93 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 3,091ಕ್ಕೆ ಏರಿಕೆಯಾಗಿದೆ. 

ಒಟ್ಟಾರೆ 1,72,102 ಕೊರೋನಾ ಪ್ರಕರಣಗಳ ಪೈಕಿ 89,238 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು 79,765 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇನ್ನು ರಾಜ್ಯಾದ್ಯಂತ ಸುಮಾರು 678 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಬೆಂಗಳೂರಿನಲ್ಲಿ ಇಂದು 2665 ಮಂದಿ ಕೊರೋನಾಗೆ ತುತ್ತಾಗಿದ್ದಾರೆ. ಇನ್ನು 18 ಮಂದಿ ಇಂದು ಮೃತಪಟ್ಟಿದ್ದು ಒಟ್ಟಾರೆ 1,218 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com