ಬೆಳಗಾವಿ: ಅಪಾಯದ ಮಟ್ಟದಲ್ಲಿ ಕೃಷ್ಣೆ; ಮುಳುಗಿದ ಸೇತುವೆ, ಕಬ್ಬು ಭತ್ತದ ಬೆಳೆ 

ಮಹಾರಾಷ್ಟ್ರದ ಕೊಲ್ಹಾಪುರ ಮತ್ತು ಸಾಂಗ್ಲಿ ಜಿಲ್ಲೆಗಳಲ್ಲಿನ ಅಣೆಕಟ್ಟುಗಳಿಂದ ಹೆಚ್ಚು ನೀರು ಬಿಡುಗಡೆಯ ಕಾರಣ ಜಿಲ್ಲೆಯಲ್ಲಿ ಕೃಷ್ಣ ನದಿ ಮತ್ತು ಅದರ ಉಪನದಿಗಳು ಜಿಲ್ಲೆಯಲ್ಲಿ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ: ಮಹಾರಾಷ್ಟ್ರದ ಕೊಲ್ಹಾಪುರ ಮತ್ತು ಸಾಂಗ್ಲಿ ಜಿಲ್ಲೆಗಳಲ್ಲಿನ ಅಣೆಕಟ್ಟುಗಳಿಂದ ಹೆಚ್ಚು ನೀರು ಬಿಡುಗಡೆಯ ಕಾರಣ ಜಿಲ್ಲೆಯಲ್ಲಿ ಕೃಷ್ಣ ನದಿ ಮತ್ತು ಅದರ ಉಪನದಿಗಳು ಜಿಲ್ಲೆಯಲ್ಲಿ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. 

ಕೃಷ್ಣಾನದಿಗೆ ಒಳಹರಿವಿನ ಪ್ರಮಾಣ 1,62,139 ಕ್ಯೂಸೆಕ್‌ಗಳಿಗೆ ಏರಿಕೆಯಾಗಿದೆ. ಇದರಿಂದ ಅನೇಕ ಜಿಲ್ಲೆಯ ಅನೇಕ ಸೇತುವೆಗಳು ರಸ್ತೆಗಳು ನೀರಿನಲ್ಲಿ ಮುಳುಗಿದೆ. ನೂರಾರು ಎಕರೆ ಪ್ರದೇಶದಲ್ಲಿನ ಕಬ್ಬು ಭತ್ತದ ಬೆಳೆ ನಿರಿನಲ್ಲಿ ಮುಳುಗಿದೆ. 

ಮಹಾರಾಷ್ಟ್ರದ ಕೊಲ್ಹಾಪುರ ಮತ್ತು ಸಾಂಗ್ಲಿ ಜಿಲ್ಲೆಗಳಲ್ಲಿನ ಅಣೆಕಟ್ಟುಗಳಿಂದ ಹೆಚ್ಚು ನೀರು ಬಿಡುಗಡೆ ಮಾಡಿದ್ದು ಪರಿಣಾಮ ಒಳಹರಿವು ಹೆಚ್ಚಾಗಿದೆ. ರಾಜಪುರ ಬ್ಯಾರೇಜ್‌ ಮತ್ತು ಉಪನದಿ ದೂದ್ ಗಂಗಾ ಹೆಚ್ಚು ಪ್ರಮಾಣದ ನೀರು ಹೊರ ಬಿಡುತ್ತಿರುವುದರಿಂದ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು ಪರಿಣಾಮ ನದಿ ಜಲಾನಯನ ಪ್ರದೇಶದ ಕಬ್ಬಿನ ಬೆಳೆಗಳು ನೀರಿನಲ್ಲಿ ಮುಳುಗಿದೆ. 

ಚಿಕ್ಕೋಡಿ ತಾಲ್ಲೂಕಿನಲ್ಲಿ ಏಳು ತಗ್ಗು ಸೇತುವೆ, ಬ್ಯಾರೇಜ್‌ಗಳು, ರಾಯಬಾಗ್ ತಾಲ್ಲೂಕಿನ ಕುಡುಚಿ ಸೇತುವೆ ಮತ್ತು ಅಥಣಿಯ ಜುಂಜರ್‌ವಾಡ್ ಬಳಿಯ ಅಥಾನಿ-ಜಮ್ಖಂಡಿ ರಸ್ತೆ ನೀರಿನಲ್ಲಿ ಮುಳುಗಿದೆ. ಜಿಲ್ಲಾಡಳಿತವು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿದೆ.

ಹಿರಣ್ಯಕೇಶಿ ನದಿಯಿಂದ , ಮಾರ್ಕೆಂಡೆಯ ನದಿಯಿಂದ ಘಟಪ್ರಭಾ ನದಿಗೆ ನೀರಿನ ಹೆಚ್ಚು ನೀರು ಹರಿದು ಬರುತ್ತಿದೆ. ಸವದತ್ತಿಯ ನವಿಲ್ತಿರ್ತ್ ಅಣೆಕಟ್ಟಿನಿಂದ ಮಲಪ್ರಭಾ ನದಿಗೆ 5164 ಕ್ಯೂಸೆಕ್‌ ನೀರು ಹರಿಯ ಬಿಡಲಾಗಿದೆ. ಮಾರ್ಕೆಂಡೆಯ ನದಿಯಲ್ಲೂ ಪ್ರವಾಹ ತಲೆದೋರಿದ್ದು ಅಂಬೆವಾಡಿ ಗ್ರಾಮದ ರಸ್ತೆ ತಾಲ್ಲೂಕು ಕೇಂದ್ರ ಕಚೇರಿಯೊಂದಿಗೆ ಸಂಪರ್ಕ ಕಡಿತಗೊಂಡಿದೆ. ನೂರಾರು ಎಕರೆ ಪ್ರದೇಶದಲ್ಲಿನ ಭತ್ತದ ಫಸಲು ನೀರಿನಲ್ಲಿ ಮುಳಗಡೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com