ಬೆಂಗಳೂರು: ಜೀವ ಉಳಿಸಿದ  ಪ್ಲಾಸ್ಮಾ ದಾನಿಗೆ ಕೃತಜ್ಞತೆ ಸಲ್ಲಿಸಿದ ಹಿರಿಯ ಹಿರಿಯ ಹೃದ್ರೋಗ ತಜ್ಞ!

ರಾಜಧಾನಿ ಬೆಂಗಳೂರಿನ 21 ವರ್ಷದ ಉದ್ಯಮಿ ಕುನಾಲ್ ಗರ್ನಾ, ಎರಡು ಬಾರಿ ಪ್ಲಾಸ್ಮಾ  ದಾನ ಮಾಡುವ ಮೂಲಕ ಅಮೂಲ್ಯ ಆರು ಜೀವಗಳನ್ನು ಉಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜಧಾನಿ ಬೆಂಗಳೂರಿನ 21 ವರ್ಷದ ಉದ್ಯಮಿ ಕುನಾಲ್ ಗರ್ನಾ, ಎರಡು ಬಾರಿ ಪ್ಲಾಸ್ಮಾ  ದಾನ ಮಾಡುವ ಮೂಲಕ ಅಮೂಲ್ಯ ಆರು ಜೀವಗಳನ್ನು ಉಳಿಸಿದ್ದಾರೆ.

ಇಂಗ್ಲೆಂಡ್ ನಲ್ಲಿ ವ್ಯಾಸಂಗ ಮುಗಿಸಿ ಮಾರ್ಚ್ ನಲ್ಲಿ ಬೆಂಗಳೂರಿಗೆ ವಾಪಸ್ಸಾಗಿದ್ದ ಕುನಾಲ್ ಅವರಿಗೆ ಕೋವಿಡ್-19 ಸೋಂಕು ತಗುಲಿತ್ತು.ನಂತರ ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸಿ, ಗುಣಮುಖರಾದ ಬಳಿಕ ಡಿಸ್ಚಾರ್ಚ್ ಮಾಡಲಾಗಿದೆ. ಆದರೆ, ಸಾಂಕ್ರಾಮಿಕ ರೋಗದ ಮೊದಲ ಕೆಲ ತಿಂಗಳುಗಳಲ್ಲಿ ಪ್ಲಾಸ್ಮಾ ದಾನದ ಪ್ರಕ್ರಿಯೆಗಳು ಆರಂಭವಾಗಿರಲಿಲ್ಲ. ಕೋವಿಡ್ ಪ್ರಕರಣಗಳು ಸಂಖ್ಯೆಯೂ ಕಡಿಮೆ ಇತ್ತು.

ಜೂನ್ ತಿಂಗಳಲ್ಲಿ ಪ್ಲಾಸ್ಮಾ ದಾನ ಮಾಡುವಂತೆ ಹೆಚ್ ಸಿಜಿ ಆಸ್ಪತ್ರೆಯಿಂದ ಕರೆ ಬಂದಿದ್ದು, ಅವರು ದಾನ ಮಾಡಲು ಒಪ್ಪಿಕೊಂಡಿದ್ದಾರೆ. ಜೂನ್ 15 ರಂದು ಅವರು ಪ್ಲಾಸ್ಮಾ ದಾನ ಮಾಡಿದ್ದು, ಇನ್ನೂ ಪ್ಲಾಸ್ಮಾ ದಾನ ಮಾಡುವುದಾಗಿ ಆಸ್ಪತ್ರೆಗೆ ತಿಳಿಸಿದ್ದಾರೆ.

ನಿರಂತರವಾಗಿ ರಕ್ತ ದಾನ ಮಾಡುತ್ತಿದ್ದು, ಅದೇ ರೀತಿಯಲ್ಲಿ ಪ್ಲಾಸ್ಮಾ ದಾನ ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಆರಂಭದಲ್ಲಿ ಪೋಷಕರಲ್ಲಿ ಸ್ವಲ್ಪ ಭೀತಿ ಮನೆ ಮಾಡಿತ್ತು. ಆದರೆ, ಇದರಿಂದ ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳನ್ನು ಕಾಪಾಡಲು ನೆರವಾಗಲಿದೆ ಎಂದು ಹೇಳಿದ ನಂತರ ಅವರು  ಒಪ್ಪಿಕೊಂಡರು. ಬಿ- ಪಾಸಿಟಿವ್ ಪ್ಲಾಸ್ಮಾ ಹೊಂದಿದ್ದು, ಮೊದಲ ಬಾರಿಗೆ ಇದನ್ನು ದಾನ ಮಾಡಿದಾಗ ನೋವು ಕಾಣಲಿಲ್ಲ, ಕೇವಲ ಒಂದು ಗಂಟೆ ತೆಗೆದುಕೊಂಡಿತು ಎಂದು ಕುನಾಲ್ ದಿ ನ್ಯೂ ಇಂಡಿಯನ್
ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಜುಲೈ ತಿಂಗಳಿನಲ್ಲಿ ಜಯದೇವ ಹೃದ್ರೋಗ ವಿಜ್ಞಾನಗಳ ಸಂಸ್ಥೆಯ ಹಿರಿಯ ಹೃದ್ರೋಗ ತಜ್ಞ ಡಾ.ನಟೇಶ್ ಬಿ. ಹೆಚ್. ಅವರಿಗೆ ಕೊರೋನಾ ತಗುಲಿ, ಪರಿಸ್ಥಿತಿ ಕ್ಷೀಣಿಸಿತ್ತು, ಬನ್ನೇರುಘಟ್ಟ ರಸ್ತೆಯ ಖಾಸಗಿ ಆಸ್ಪತ್ರೆಯೊಂದರ ಐಸಿಯುನಲ್ಲಿದ್ದರು. ಹೆಚ್ಚಿನ ಅರಿವಿನ ನಸಾಲ್ ಅಕ್ಸಿನಲ್ ಹಾಗೂ ರೆಮ್ಡಿಸಿವಿರ್ ಔಷಧ ನೀಡಲಾಗುತ್ತಿದ್ದರೂ ಅವರ ಆರೋಗ್ಯ ಪರಿಸ್ಥಿತಿ ಕ್ಷೀಣಿಸುತ್ತಾ ಹೋಗಿತ್ತು.ಅವರಿಗೆ ಪ್ಲಾಸ್ಮಾ ಥೆರಪಿ ಮಾಡಲು ಪರಿಗಣಿಸಿದಾಗ ಜುಲೈ ಮಾಸಾಂತ್ಯದಲ್ಲಿ ಕುನಾಲ್ ಮತ್ತೆ ಪ್ಲಾಸ್ಮಾ ದಾನ ಮಾಡಿದ್ದಾರೆ.

ಆಶ್ಚರ್ಯವೇನೆಂದರೆ, ಈ ವೈದ್ಯ, ಮೂರು ದಿನಗಳೊಳಗೆ ಗುಣಮುಖರಾಗಿದ್ದು, ಐಸಿಯುನಲ್ಲಿ ಐದು ದಿನಗಳು ಕಳೆದ ನಂತರ ವಾರ್ಡಿಗೆ ಸ್ಥಳಾಂತರ ಮಾಡಲಾಗಿತ್ತು. ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ವೈದ್ಯರು ಕುನಾಲ್ ಅವರಿಗೆ
ಕೃತಜ್ಞತೆ ಸಲ್ಲಿಸಿದ್ದಾರೆ, ಕೋವಿಡ್-19 ರೋಗಿಗಳನ್ನು ಗುಣಮುಖರನ್ನಾಗಿ ಮಾಡಲು ಹೆಚ್ಚಿನ ಸಂಖ್ಯೆಯ ಪ್ಲಾಸ್ಮಾ ದಾನಿಗಳು ಮುಂದೆ ಬರುವಂತೆ ವೈದ್ಯ ಡಾ. ನಟೇಶ್ ತಿಳಿಸಿದ್ದಾರೆ.

ಪ್ಲಾಸ್ಮಾ ಥೆರಪಿ ಪ್ರಾಮುಖ್ಯತೆ ಬಗ್ಗೆ ಆರಂಭದಿಂದಲೂ ಜನರಿಗೆ ಹೇಳುತ್ತಿರುವುದಾಗಿ ರಾಜ್ಯದಲ್ಲಿ ಮೊದಲಿಗೆ ಪ್ಲಾಸ್ಮಾ
ಬ್ಯಾಂಕ್ ಆರಂಭಿಸಿದ ವೈದ್ಯರಾದ ಡಾ. ವಿಶಾಲ್ ರಾವ್ ಹೇಳಿದ್ದಾರೆ. ಈವರೆಗೂ ಇಬ್ಬರಿಗೆ ಪ್ಲಾಸ್ಮಾ ದಾನ ಮಾಡಿರುವ ಕುನಾಲ್, ಮತ್ತೆ ಮೂರನೇ ಬಾರಿಗೆ ಪ್ಲಾಸ್ಮಾ ದಾನಕ್ಕೆ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com