ಸಾಕಷ್ಟು ಹಾಸಿಗೆ ಇದೆ, ಆದರೆ, ಆರೋಗ್ಯ ಸಿಬ್ಬಂದಿಗಳೇ ಇಲ್ಲ: ಕೊರೋನಾ ವಿರುದ್ಧದ ಮೈಸೂರು ಹೋರಾಟಕ್ಕೆ ಹಿನ್ನಡೆ? 

ಕೊರೋನಾ ವಿರುದ್ಧ ಮೈಸೂರು ಜಿಲ್ಲಾ ಆಡಳಿತ ಮಂಡಳಿ ದಿಟ್ಟ ಹೋರಾಟ ನಡೆಸುತ್ತಿರುವ ನಡುವಲ್ಲೇ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕಿತರು ದಾಖಲಾಗಲು ಹಾಸಿಗೆಗಳು ಖಾಲಿಯಿದ್ದರೂ, ಆರೋಗ್ಯ ಸಿಬ್ಬಂದಿಗಳ ಕೊರತೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಇದರಿಂದ ಆತಂಕ ಹೆಚ್ಚಾಗುವಂತೆ ಮಾಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಕೊರೋನಾ ವಿರುದ್ಧ ಮೈಸೂರು ಜಿಲ್ಲಾ ಆಡಳಿತ ಮಂಡಳಿ ದಿಟ್ಟ ಹೋರಾಟ ನಡೆಸುತ್ತಿರುವ ನಡುವಲ್ಲೇ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕಿತರು ದಾಖಲಾಗಲು ಹಾಸಿಗೆಗಳು ಖಾಲಿಯಿದ್ದರೂ, ಆರೋಗ್ಯ ಸಿಬ್ಬಂದಿಗಳ ಕೊರತೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಇದರಿಂದ ಆತಂಕ ಹೆಚ್ಚಾಗುವಂತೆ ಮಾಡಿದೆ. 

ಕೊರೋನಾ ಚಿಕಿತ್ಸೆಗೆ ನಿಯೋಜಿಸಲಾಗಿರುವ ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು ಹಾಗೂ ಕೊರೋನಾ ಆರೈಕೆ ಕೇಂದ್ರಗಳಲ್ಲಿ 2,697 ಹಾಸಿಗೆಗಳಿವೆ. ಇದರಲ್ಲಿ 1,178 ಹಾಸಿಗೆಗಳುಬರ್ತಿಯಾಗಿದ್ದು, ಇನ್ನೂ 1,519 ಹಾಸಿಗೆಗಳು ಖಾಲಿಯಾಗಿಯೇ ಉಳಿದಿವೆ. ಜಿಲ್ಲಾಸ್ಪ್ತರೆಗಳಾದ ವಿವಿ ಪುರಂ ಹೆರಿಗೆ ಆಸ್ಪತ್ರೆ, ಇಎಸ್ಐ ಆಸ್ಪತ್ರೆ ಮತ್ತು ವಿಕ್ರಮ್ ಆಸ್ಪತ್ರೆ (ಕೊರೋನಾ ವಾರಿಯರ್ಸ್'ಗಳಿಗಾಗಿ) ಸೇರಿದಂತೆ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಮೀಸಲಿಡಲಾಗಿರುವ ಹಾಸಿಗೆಗಳಲ್ಲಿ 444 ಹಾಸಿಗೆ ವ್ಯವಸ್ಥೆಗಳಿದ್ದು, ಇದರಲ್ಲಿ 270 ಹಾಸಿಗೆಗಳು ಭರ್ತಿಯಾಗಿವೆ. ಇನ್ನು 49 ಪ್ರಮುಖ ಖಾಸಗಿ ಆಸ್ಪತ್ರೆಗಳು ಕೊರೋನಾ ಚಿಕಿತ್ಸೆಗಾಗಿ 867 ಹಾಸಿಗೆಗಳನ್ನು ಮೀಸಲಿಟ್ಟಿದ್ದು. ಇದರಲ್ಲಿ 270 ಹಾಸಿಗೆಗಳು ಭರ್ತಿಯಾಗಿವೆ. ಇದಲ್ಲದೆ ಕೊರೋನಾ ಆರೈಕೆ ಕೇಂದ್ರಗಳಲ್ಲಿಯೂ 1,005 ಹಾಸಿಗೆಗಳಿದ್ದು, 443 ಹಾಸಿಗೆಗಳು ಮಾತ್ರ ಭರ್ತಿಯಾಗಿವೆ. 

ಈ ಎಲ್ಲಾ ಅಂಶಗಳನ್ನು ಗಮನಿಸಿದರೆ, ಮೈಸೂರಿನಲ್ಲಿ ಕೊರೋನಾಗೆ ಚಿಕಿತ್ಸೆ ನೀಡಲು ಹಾಸಿಗೆಗಳ ಕೊರತೆಯಿಲ್ಲ ಎಂಬುದು ಎದ್ದು ಕಾಣುತ್ತಿದೆ. ಆದರೆ, ಆರೋಗ್ಯ ಸಿಬ್ಬಂದಿಗಳ ಕೊರತೆ ಇರುವುದರಿಂದ ಚಿಕಿತ್ಸೆ ನೀಡಲು ಭಾರೀ ಹಿನ್ನೆಡೆಯುಂಟಾಗುತ್ತಿದೆ ಎಂದು ತಿಳಿದುಬಂದಿದೆ. 

ಆಸ್ಪತ್ರೆಗಳಲ್ಲಿ ಸಾಕಷ್ಟು ಹಾಸಿಗೆಗಳ ವ್ಯವಸ್ಥೆಗಳಿವೆ. ಆದರೆ, ಆರೋಗ್ಯ ಸಿಬ್ಬಂದಿಗಳ ಕೊರತೆಯೇ ಹೆಚ್ಚಾಗಿದೆ. ಇರುವ ಸಿಬ್ಬಂದಿಗಳನ್ನೇ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಬಳಸಿಕೊಂಡರೆ, ಕೊರೋನಾಪೀಡಿತರಲ್ಲದೆ ಇತರೆ ರೋಗಗಳಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿ ಸಿಬ್ಬಂದಿಗಳ ಕೊರತೆ ಎದುರಾಗುತ್ತದೆ ಎಂದು ಜಿಲ್ಲಾ ಉಪ ಆಯುಕ್ತ ಅಭಿರಾಮ್ ಜಿ.ಶಂಕರ್ ಅವರು ಹೇಳಿದ್ದಾರೆ. 

ಇದೊಂದು ಅತ್ಯಂತ ಕಠಿಣ ಪರಿಸ್ಥಿತಿಯಾಗಿದ್ದು, ಕ್ಲೀನಿಂಗ್, ನರ್ಸಿಂಗ್ ಸಿಬ್ಬಂದಿಗಳ ಅಗತ್ಯತೆ ಹೆಚ್ಚಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ನರ್ಸ್ ಗಳನ್ನು ನೇಮಕ ಮಾಡಲು ಪ್ರಾರಂಭಿಸಿದ್ದರೂ, ಯಾವ ಆಧಾರದ ಮೇಲೆ ನೇಮಕ ಮಾಡಬೇಕೆಂಬ ಸ್ಪಷ್ಟತೆಗಳು ದೊರೆಯುತ್ತಿಲ್ಲ. ಖಾಸಗಿ ಆಸ್ಪತ್ರೆಗಳಿಂದ ಕೂಡ ಸಹ ನರ್ಸ್ ಗಳು ಮತ್ತು ಕ್ಲೀನಿಂಗ್ ಸಿಬ್ಬಂದಿಗಳನ್ನು ಕೆಲಸಕ್ಕೆ ನಿಯೋಜಿಸುವುದು ಕಠಿಣವಾಗಿ ಪರಿಣಮಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com