ಎಸ್‌ಎಸ್‌ಎಲ್‌ಸಿಯಲ್ಲಿ  625/624: ಕೋವಿಡ್ ಬಿಕ್ಕಟ್ಟನ್ನು ಅವಕಾಶವಾಗಿ ಬಳಸಿಕೊಂಡ ಕುಣಿಗಲ್ ವಿದ್ಯಾರ್ಥಿ

ಈ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 625 ರಲ್ಲಿ 624 ಅಂಕಗಳನ್ನು ಗಳಿಸುವ ಮೂಲಕ ರಾಜ್ಯದ ಇತರ ಹನ್ನೊಂದು ಜನರೊಂದಿಗೆ ದ್ವಿತೀಯ ಸ್ಥಾನ ಹಂಚಿಕೊಂಡಿರುವ ಕುಣಿಗಲ್ ನ ಮಹೇಶ್ ಜಿ ಎಂ ಕೋವಿಡ್  -19 ಬಿಕ್ಕಟ್ಟನ್ನು ಹೇಗೆ ಅವಕಾಶವಾಗಿ ಪರಿವರ್ತಿಸಬಹುದು ಎಂಬುದಕ್ಕೆ ಒಂದು ಅದ್ಭುತ ಉದಾಹರಣೆಯಾಗಿದ್ದಾರೆ.

Published: 10th August 2020 11:43 PM  |   Last Updated: 10th August 2020 11:43 PM   |  A+A-


ಮಗನಿಗೆ ಸಿಹಿ ತಿನ್ನಿಸುತ್ತಿರುವ ಮಹೇಶ್ ಪೋಷಕರು

Posted By : Raghavendra Adiga
Source : The New Indian Express

ತುಮಕೂರು: ಈ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 625 ರಲ್ಲಿ 624 ಅಂಕಗಳನ್ನು ಗಳಿಸುವ ಮೂಲಕ ರಾಜ್ಯದ ಇತರ ಹನ್ನೊಂದು ಜನರೊಂದಿಗೆ ದ್ವಿತೀಯ ಸ್ಥಾನ ಹಂಚಿಕೊಂಡಿರುವ ಕುಣಿಗಲ್ ನ ಮಹೇಶ್ ಜಿ ಎಂ ಕೋವಿಡ್  -19 ಬಿಕ್ಕಟ್ಟನ್ನು ಹೇಗೆ ಅವಕಾಶವಾಗಿ ಪರಿವರ್ತಿಸಬಹುದು ಎಂಬುದಕ್ಕೆ ಒಂದು ಅದ್ಭುತ ಉದಾಹರಣೆಯಾಗಿದ್ದಾರೆ.

ಕುಣಿಗಲ್  ತಾಲೂಕಿನ ಗುಣ್ಣಗೆರೆ ಗ್ರಾಮದ  ರೈತ ದಂಪತಿಯ ಮಗ ಮಹೇಶ್ ಕುಣಿಗಲ್ ಪಟ್ಟಣದ  ಜ್ಞಾನಭಾರತಿ ಪ್ರೌಢಶಾಲೆ  ವಿದ್ಯಾರ್ಥಿ. "ಪರೀಕ್ಷೆಗಳನ್ನು ಎರಡು ತಿಂಗಳು ಮುಂದೂಡುವುದು ನನಗೆ ಅಭ್ಯಾಸಕ್ಕೆ ಸಾಕಷ್ಟು ಸಮಯವನ್ನು ನೀಡಿತು ಮತ್ತು ನಾನು ಅದನ್ನು ಉತ್ತಮವಾಗಿ ಬಳಸಿಕೊಂಡಿದ್ದೇನೆ" ಎಂದು ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ದೂರವಾಣಿ ಮೂಲಕ ತಿಳಿಸಿದರು.

ಅವರ ತಾಯಿ ಶಶಿಕಲಾ ಹತ್ತನೇ ತರಗತಿ ಪಾಸ್ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಅವರ ಮಗ ಅತ್ಯಂತ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾಗಿದ್ದಾರೆ. "ನಾನು ವಿಫಲವಾದಾಗ, ನಾನು ಓದುವುದನ್ನೇ ಬಿಟ್ಟೆ. ಆದರೆ ನನ್ನ ಮಗನು ಅವಕಾಶಗಳನ್ನು ಬಳಸಿಕೊಳ್ಳುವ ಮೂಲಕ ತನ್ನ ಮನೋಭಾವವನ್ನು ತೋರಿಸಿದ್ದಾನೆ" ಎಂದು ಅವರು ಹೇ:ಳಿದ್ದಾರೆ.

ಏತನ್ಮಧ್ಯೆ, ಅವರ ತಂದೆ ಮಾಯಣ್ಣ ಸೋಮವಾರ ಸಂಜೆ ಎರಡು ಹಸುಗಳ ಹಾಲು ಕರೆಯುವುದರಲ್ಲಿ ನಿರತರಾಗಿದ್ದರು. ಳೀಯ ಡೈರಿಗೆ ಹಾಲು ಪೂರೈಸಲು ಮತ್ತು ಕುಟುಂಬವು ದಿನದ ಖರ್ಚಿಗಾಗಿ ಸಹಾಯವಾಗಲು ಈ ಕೆಲಸ ಮಾಡುತ್ತಿದೆ, ದಂಪತಿಗಳು ತಮ್ಮ ಮಕ್ಕಳ ಶಿಕ್ಷಣದ ಭವಿಷ್ಯದ ಬಗ್ಗೆ ಭರವಸೆಯನ್ನು ಇರಿಸಿಕೊಂಡಿದ್ದಾರೆ.  ಅವರ ಮಗಳು ಹರ್ಷಿತಾ ಜಿ ಎಂ ದ್ವಿತೀಯ ಪಿಯುಸಿ ವಿಜ್ಞಾನ ವಿಷಯದಲ್ಲಿ  ಶೇ 89 ರಷ್ಟು ಅಂಕಗಳನ್ನು ಗಳಿಸಿ ಸಿಇಟಿ ಬರೆದಿದ್ದರು.

ಮಹೇಶ್  ವಿಜ್ಞಾನ ಮತ್ತು ಗಣಿತಶಾಸ್ತ್ರದಟ್ಯೂಷನ್ ಗೆ ಹಾಜರಾಗಬೇಕಾಗಿರುವುದರಿಂದ ಕುಣಿಗಲ್ ಪಟ್ಟಣಕ್ಕೆ ಬಸ್ ಹತ್ತಲು ಬೆಳಿಗ್ಗೆ 5 ಗಂಟೆಗೆ ಏಳುತ್ತಿದ್ದರು. "ಕಠಿಣ ವಿಷಯಗಳ ಟ್ಯೂಷನ್ ನನಗೆ ಸಾಕಷ್ಟು ಸಹಾಯ ಮಾಡಿವೆ" ಎಂದು ಅವರು ಹೇಳಿದರು, ಭವಿಷ್ಯದಲ್ಲಿ ಅವರು ವಿಜ್ಞಾನಿಯಾಗಲು ಬಯಸುತ್ತಾರೆ. ಸಮಯ ನಿರ್ವಹಣೆ ವಿದ್ಯಾರ್ಥಿಗಳಿಗೆ ಬಹಳ ಮುಖ್ಯ ಎಂದು ಅವರು ಅಭಿಪ್ರಾಯಪಟ್ತರು. ಇಂಗ್ಲಿಷ್ ಹೊರತುಪಡಿಸಿ ಎಲ್ಲಾ ವಿಷಯಗಳಲ್ಲಿ ಅವರುನೂರು ಅಂಕಗಳನ್ನು ಗಳಿಸಿದ್ದಾರೆ. 

Stay up to date on all the latest ರಾಜ್ಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp