ಆರ್ಥಿಕ ಸಂಕಷ್ಟದಿಂದ ಪಾರಾಗಲು 'ಲೀಸ್' ತಂತ್ರಕ್ಕೆ ಮೊರೆ ಹೋದ ರನ್ನ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ

ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಮುಧೋಳದ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಎಲ್ಲಿ ಖಾಸಗಿ ಅವರ ಪಾಲಾಗುವುದೋ ಎನ್ನುವ ಆತಂಕ ಇದೀಗ ನಿಜವಾಗ ತೊಡಗಿದೆ. 
ರನ್ನ ಸಕ್ಕರೆ ಕಾರ್ಖಾನೆ, ಗೋವಿಂದ ಕಾರಜೋಳ
ರನ್ನ ಸಕ್ಕರೆ ಕಾರ್ಖಾನೆ, ಗೋವಿಂದ ಕಾರಜೋಳ

ಬಾಗಲಕೋಟೆ: ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಮುಧೋಳದ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಎಲ್ಲಿ ಖಾಸಗಿ ಅವರ ಪಾಲಾಗುವುದೋ ಎನ್ನುವ ಆತಂಕ ಇದೀಗ ನಿಜವಾಗ ತೊಡಗಿದೆ. 

ಸಂಕಷ್ಟದಲ್ಲಿರುವ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಗೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ಸಿಗದು ಎನ್ನುವುದು ಸ್ಪಷ್ಟವಾಗುತ್ತಲೇ ಕಾರ್ಖಾನೆ ಆಡಳಿತ ಮಂಡಳಿ ಆಗಸ್ಟ್ 17 ರಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಲೈನ್ ಸರ್ವ ಸದಸ್ಯರ ಸಭೆಯನ್ನು ಆಯೋಜಿಸಿದೆ. ವಿಡಿಯೋ ಕಾನ್ಫರೆನ್ಸ್ ವೇಳೆ ಕಾರ್ಖಾನೆಯನ್ನು ಲೀಸ್ ಆಧಾರದ ಮೇಲೆ ಖಾಸಗಿಯವರಿಗೆ ನಿರ್ವಹಣೆ ಜವಾಬ್ದಾರಿ ವಹಿಸುವ ಕುರಿತು ಸದಸ್ಯರ ಅಭಿಪ್ರಾಯ ಸಂಗ್ರಹಿಸಲಿದೆ.

ಸರ್ವ ಸದಸ್ಯರ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ಬಳಿಕ ಖಾಸಗಿಯವರಿಗೆ ಲೀಸ್ ಮೇಲೆ ಕಾರ್ಖಾನೆ ನಡೆಸಲು ಅವಕಾಶ ನೀಡುವಂತೆ ಸರ್ಕಾರಕ್ಕೆ ನಿರ್ದೇಶಕ ಮಂಡಳಿ ಶಿಫಾರಸ್ಸು ಕಳುಹಿಸಲು ನಿರ್ಧರಿಸಿದೆ. ರೈತರ ಬಾಕಿ ಹಣ 38 ಕೋಟಿ ರೂ. ಪಾವತಿಸಲು ಜಿಲ್ಲಾಡಳಿತ 40 ಕೋಟಿ ರೂ. ಸಕ್ಕರೆ ಹರಾಜು ಹಾಕಿದೆ. ಬ್ಯಾಂಕ್‌ಗಳೂ ತಮ್ಮ ಸಾಲ ಪಾವತಿಗಾಗಿ ಹಕ್ಕೊತ್ತಾಯ ಮಂಡಿಸಿದ್ದು, ಅವರ ಸಾಲ ಪಾವತಿಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆ. ಈ ಬಗ್ಗೆ ಯಾವುದೇ ಸ್ಪಷ್ಟ ನಿರ್ದಾರಕ್ಕೆ ಬಂದಿಲ್ಲ.

ಸಕ್ಕರೆ ಸಚಿವರು ಕಾರ್ಖಾನೆಗೆ ಆರ್ಥಿಕ ನೆರವು ನೀಡಲಾಗದು ಎಂದು ಕಳೆದ ವಾರ ಸ್ಪಸ್ಟ ಪಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರು ಕಾರ್ಖಾನೆಯನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ಕುರಿತು ಏನನ್ನೂ ಹೇಳುತ್ತಿಲ್ಲ. ಪರಿಣಾಮವಾಗಿ ಕಾರ್ಖಾನೆ ಆಡಳಿತ ಮಂಡಳಿ ತಾನು ಹೊಂದಿದ್ದ ನಿರೀಕ್ಷೆಗಳು ಹುಸಿಯಾಗಿವೆ. ಹಾಗಾಗಿ ಆಡಳಿತ ಮಂಡಳಿ ಕಾರ್ಖಾನೆಯನ್ನು ಖಾಸಗಿಯವರಿಗೆ ಲೀಸ್ ಮೇಲೆ ಕೊಡಲು ಮುಂದಾಗಿದೆ.

ಆಗಸ್ಟ್ 17 ರಂದು ನಡೆಯಲಿರುವ ಕಾರ್ಖಾನೆ ಸರ್ವ ಸದಸ್ಯರ ಆನ್‌ಲೈನ್ ಸಭೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯ ಕ್ರೋಢಿಕರಿಸಿ ಬಳಿಕ ಆಡಳಿತ ಮಂಡಳಿ ಲೀಸ್‌ಗೆ ಕೊಡುವ ನಿರ್ದಾರ ಕೈಗೊಂಡು ಸರ್ಕಾರಕ್ಕೆ ಶಿಫಾರಸು ಮಾಡಲು ನಿರ್ದರಿಸಿದೆ. ಕನ್ನಡಪ್ರಭಾ ನ್ಯೂಸ್ ಡಾಟ್ ಕಾಂ ಕಳೆದ ತಿಂಗಳು ಜುಲೈ 11 ರಂದು ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಎಲ್ಲಿ ಅದು ಖಾಸಗಿ ಅವರ ಪಾಲಾಗಲಿದೆ ಎನ್ನುವ ಆತಂಕದ ಕುರಿತು ವರದಿ ಮಾಡಿತ್ತು ಎನ್ನುವುದು ಗಮನಾರ್ಹ.

ಸಹಕಾರಿ ರಂಗದಲ್ಲಿನ ಜಿಲ್ಲೆಯ ಏಕೈಕ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯೊಂದು ಆರ್ಥಿಕ ದುಸ್ತಿಗೆ ತಲುಪಿ, ಖಾಸಗಿಯವರಿಗೆ ನಿರ್ವಹಣೆ ಜವಾಬ್ದಾರಿ ನೀಡುವ ಹಂತ ತಲುಪಿದ್ದು ರೈತ ಸಮುದಾಯ ಹಳಹಳಿಸುವಂತಾಗಿದೆ. ರೈತರೇ ಷೇರು ಹಣ ಸಂಗ್ರಹಿಸಿ ಆರಂಭಿಸಿದ್ದ ಕಾರ್ಖಾನೆಗೆ ಇಂತಹ ಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ ಸಂಗತಿಯೇ ಸರಿ.

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com