ಸ್ವಾತಂತ್ರ್ಯ ದಿನಾಚರಣೆ: ಕೋವಿಡ್ ನಿಂದ ರಾಷ್ಟ್ರ ಧ್ವಜ ಮಾರಾಟಕ್ಕೆ ಕುಸಿದ ಬೇಡಿಕೆ, ಸ್ಥಳೀಯವಾಗಿ ಏರಿಕೆ!

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಷ್ಟ್ರಧ್ವಜ ಖರೀದಿಗೆ ಬರುತ್ತಿದ್ದ ಬೇಡಿಕೆಯನ್ನು ಸರಿತೂಗಿಸಲು ಹುಬ್ಬಳ್ಳಿಯ ಅಧಿಕೃತ ರಾಷ್ಟ್ರಧ್ವಜ ತಯಾರಿಕಾ ಘಟಕ ಗಿಜಿಗುಡುತ್ತಿತ್ತು.  ಆದರೆ ಈ ಬಾರಿ ಕೋವಿಡ್-19 ನಿಂದಾಗಿ ಎಲ್ಲವೂ ಬದಲಾವಣೆಯಾಗಿದೆ. 
ಸ್ವಾತಂತ್ರ್ಯ ದಿನಾಚರಣೆ: ಕೋವಿಡ್ ನಿಂದ ರಾಷ್ಟ್ರ ಧ್ವಜ ಮಾರಾಟಕ್ಕೆ ಕುಸಿದ ಬೇಡಿಕೆ, ಸ್ಥಳೀಯವಾಗಿ ಏರಿಕೆ!
ಸ್ವಾತಂತ್ರ್ಯ ದಿನಾಚರಣೆ: ಕೋವಿಡ್ ನಿಂದ ರಾಷ್ಟ್ರ ಧ್ವಜ ಮಾರಾಟಕ್ಕೆ ಕುಸಿದ ಬೇಡಿಕೆ, ಸ್ಥಳೀಯವಾಗಿ ಏರಿಕೆ!

ಹುಬ್ಬಳ್ಳಿ: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಷ್ಟ್ರಧ್ವಜ ಖರೀದಿಗೆ ಬರುತ್ತಿದ್ದ ಬೇಡಿಕೆಯನ್ನು ಸರಿತೂಗಿಸಲು ಹುಬ್ಬಳ್ಳಿಯ ಅಧಿಕೃತ ರಾಷ್ಟ್ರಧ್ವಜ ತಯಾರಿಕಾ ಘಟಕ ಗಿಜಿಗುಡುತ್ತಿತ್ತು.  ಆದರೆ ಈ ಬಾರಿ ಕೋವಿಡ್-19 ನಿಂದಾಗಿ ಎಲ್ಲವೂ ಬದಲಾವಣೆಯಾಗಿದೆ. 

ರಾಷ್ಟ್ರಮಟ್ಟದಲ್ಲಿ, ವಿದೇಶಗಳಿಂದ, ಸರ್ಕಾರಿ ಕಚೇರಿ, ಖಾಸಗಿ ಕಚೇರಿಗಳಿಂದ ಪ್ರತಿ ಬಾರಿಯೂ ಹುಬ್ಬಳ್ಳಿಯ ಬೆಂಗೇರಿಯಿಂದ ರಾಷ್ಟ್ರ ಧ್ವಜಕ್ಕೆ ಬೇಡಿಕೆ ಇರುತ್ತಿತ್ತು. ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೋವಿಡ್-19 ಪರಿಣಾಮ ರಾಷ್ಟ್ರ ಧ್ವಜಕ್ಕೆ ಬೇಡಿಕೆ ಕುಸಿದಿದ್ದು ಸ್ಥಳೀಯವಾಗಿ ಬೇಡಿಕೆ ಹೆಚ್ಚಾಗಿದೆ.

ಪಾರ್ಸಲ್ ಸೇವೆಗಳು ಸ್ಥಗಿತಗೊಂಡಿರುವುದೂ ಸಹ ಬೇಡಿಕೆ ಕುಸಿಯುವುದಕ್ಕೆ ಕಾರಣವಾಗಿದೆ ಎಂದು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ (ಕೆಕೆಜಿಎಸ್ಎಸ್) ತಿಳಿಸಿದೆ. ಕೋವಿಡ್-19 ಹಾಗೂ ಲಾಕ್ ಡೌನ್ ಸ್ಥಳೀಯ ಮಟ್ಟದಲ್ಲಿ ದೇಶದ ಸ್ವಾತಂತ್ರ್ಯ ದಿನವನ್ನು ಆಚರಿಸುವ ಸ್ಪೂರ್ತಿಯನ್ನು ಕಡಿಮೆಗೊಳಿಸಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com